ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಎಂದು ಆ ಒಕ್ಕಲಗಿತ್ತಿಯನ್ನು ಗದರಿಸಿ ಕೇಳಿದರು. ಅದಕ್ಕೆ ಆ ಬಡ ಹೆಂಗಸು ಗಾಬರಿಯಾಗಿ ಭಯದಿಂದ- ಯಾರಪ್ಪಾ, ಜಪ್ತಿ ಮಾಡು ತೀರಿ? ನಾವು ಯಾವ ತಪ್ಪನ್ನೂ ಮಾಡಲಿಲ್ಲ. ನಾವು ಯಾರಿಗೂ ಮೂರು ಕಾಸು ಸಾಲವನ್ನು ಕೊಡಬೇಕಾದ್ದಿಲ್ಲ ಎಂದಳು, ಆ ಮಾತಿಗೆ ಆ ಬಿಲ್ಲೇದವರು ಆ ಚೇ ಊರ ದೊಡ್ಡ ಶೆಟ್ಟಿಗೆ ನಿನ್ನ ಗಂಡ ಇಪ್ಪತ್ತೇಳು ವರಹಾ ಕೊಡಬೇಕು, ಈಗಲೇ ಕೊಡದೇ ಇದ್ದರೆ, ನಿನ್ನ ಮನೆ ಮಡಕೆಯನ್ನೆ ಲ್ಲಾ ಆಚೆಗೆ ಹಾಕುತ್ತೇವೆ, ನಿಮ್ಮನ್ನೆಲ್ಲಾ ಚಾವಡಿಗೆ ಎಳೆದುಕೊಂಡು ಹೋಗುತ್ತೇವೆ, ಎಂದು ಕೂಗಾಡಿದರು. ಇಷ್ಟರಲ್ಲಿ ಆ ಗರತಿಯ ಗಂಡ ಮನೆಗೆ ಬಂದನು. ಅವನು ಇದೇನೆಂದು ಕೇಳಲು, ಬಿಲ್ಲೇ ದವರು ಅವನಿಗೂ ಅದೇ ಮಾತನ್ನು ಹೇಳಿದರು, ಆ ಸಂಗತಿ ಕಿವಿಗೆ ಬಿದ್ದ ಕೂಡಲೆ ಆ ಶೂದ್ರನ ಮುಖವು ಹೆಚ್ಚಾಯಿತು. ಇದು ಯಾವ ಸಾಲವೆಂದು ಹೆಂಡತಿ ಕೇಳಿದಳು. ಆ ಗೌಡನು--ನಾನು ಆ ಸಾಲವನ್ನು ಮಾಡಲಿಲ್ಲ. ನಿನ್ನ ತಮ್ಮನಿಗೆ ಒಂದು ತಾಯಿ ಬಂದಿತ್ತು. ಅವನ ಸಾಲವನ್ನು ತೀರಿಸುವುದಕ್ಕಾಗಿ ನಾನು ಹೊಣೆ ಯಾದೆ. ಅದೇ ಇದು ಎಂದನು. ಅತ್ತ ಜವಾನರು ಇವನ ಮನೇ ಸಾಮಾನುಗಳನ್ನು ಈಚೆಗೆ ತಂದು ಗಂಟುಕಟ್ಟಿ, ಚಾವಡಿಗೆ ತೆಗೆದು ಕೊಂಡು ಹೋಗಲು ಅನುವಾದರು. ಇದನ್ನು ಕಂಡು ಒಕ್ಕಲಿಗನಿಗೆ ವಿಶೇಷ ಕೋಪ ಬಂತು. ಅವನ ಹಂಜರಕ್ಕೆ ಸಿಕ್ಕಿಸಿದ್ದ ಕುಡುಗೋಲನ್ನು ತೆಗೆದುಕೊಂಡು-ನನ್ನ ಮಕ್ಕಳು ಹೊಟ್ಟೆ ಗಿಲ್ಲದೆ ಸಾಯುವ ಹೊತ್ತು ಬಂತು. ಇನ್ನು ನಾನಿ ದೈನುಫಲ ? ಕತ್ತು ಕುಯಿದುಕೊಂಡು ಪ್ರಾಣಾ ಬಿಡುತೇನೆ, ಎಂಬು ದಾಗಿ ಕುಡುಗೋಲನ್ನು ಕತ್ತಿನಹತ್ತಿರಕ್ಕೆ ತೆಗೆದುಕೊಂಡು ಹೋದನು. ಹೆಂಡತಿಯು ಓಡಿಬಂದು ಕೈ ಹಿಡಿದುಕೊಂಡಳು. ಅಳುತಾ ನಮ ಗೇನುಗತಿ, ಎಂದು ಕೂಗಿಕೊಂಡಳು. ಮಕ್ಕಳೆಲ್ಲಾ ಓಡಿಬಂದು ಗೋಳಾ ಡುತಾ, ಅಪ್ಪನನ್ನು ಸುತ್ತಿಕೊಂಡವು. ಇದನ್ನು ಕಂಡು ಸುಮತಿಗೆ ದುಃಖಬಂತು. ಅವನು ಕಣ್ಣಿನಲ್ಲಿ ನೀರ ಹಾಕುತ್ತಾ, ಅಳುವುದಕ್ಕೆ ಮೊದಲು ಮಾಡಿದನು. ಮದನನು ಇದೆಲ್ಲವನ್ನೂ ಸುಮ್ಮನೆ ನಿಂತು