ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಸುಮತಿ ಮದನಕುಮಾರರ ಚರಿತ್ರೆ ೧೨೫: ನೋಡುತಾ ಇದ್ದು, ಸುಮತಿಯನ್ನೂ ಕರೆದುಕೊಂಡು ಮನೆಗೆ ಹೋದನು. ಅಲ್ಲಿ ರಾಮಜೋಯಿಸನನ್ನು ಕುರಿತು- ಉಪಾಧ್ಯಾಯರೇ, ನಾನು ನಮ್ಮ ಅಪ್ಪಾಜಿಯನ್ನು ನೋಡಿಕೊಂಡು ಬರುತೇನೆ. ಇವತ್ತು ನಮ್ಮ ಅರಮನೆಗೆ ನನ್ನ ನ್ನು ಕಳುಹಿಸಿಕೊಡಿ ಎಂದನು. ಮದನನು ಜೋಯಿ ಸರ ಮನೆಗೆ ಬಂದಾಗಿನಿಂದಲೂ ತನ್ನ ಊರಿಗೆ ಹೋಗಬೇಕೆಂದು ಯಾವಾಗಲೂ ಅ೦ದವನಲ್ಲ, ಈಗ ಹೋಗಬೇಕೆಂದು ಅಪೇಕ್ಷಿಸು ತಾನೆ, ಕಾರಣವೇನೋ ತಿಳಿಯದು, ಬೇಕಾದರೆ ಹೋಗಿಬರಲಿ ಎಂದು ಜೋಯಿಸನು ಒಪ್ಪಿಕೊಂಡನು. ಮದನನು ಸಾಯಂಕಾಲಕ್ಕೆ ತಮ್ಮ ಅರಮನೆಗೆ ಹೋಗಿ ಸೇರಿದನು. ಮಗ ಬಂದದಕ್ಕೆ ತಂದೆಗೆ ಬಹು ಸಂತೋಷವಾಯಿತು. ತಾಯಿಯಂತೂ ಹಿಗ್ಗು ತಾ ಮಗನನ್ನು ಮುದ್ದಾಡುವುದಕ್ಕೆ ಆರಂಭಿಸಿದಳು, ಮಾರನೇ ದಿನ ಮದನನು ತಂದೆಯನ್ನು ಕುರಿತು-ಅಪ್ಪಾಜಿ, ನನಗೆ ಸ್ವಲ್ಪ ಹಣಬೇಕು, ಎಂದನು. ದೊರೆಯು-ಮಗುವೆ, ಹಿಡಿ, ಎಂದು ಎರಡು ವರಹವನ್ನು ಕೈಗೆ ಕೊಟ್ಟನು. ಮದನನು-ಜೀಯ, ನನಗೆ ಇಷ್ಟು ಸಾಲದು ಇನ್ನೂ ಹೆಚ್ಚಾಗಿ ಬೇಕು, ಎಂದಮಾತಿಗೆ ಅರಸನು-ಎಂದಿಗೂ ದುಡ್ಡು ಬೇಕೆಂದು ಕೇಳದೇ ಇದ್ದ ನೀನು ಈಗ ಹೆಚ್ಚಾಗಿ ಬೇಕೆಂದು ಕೇಳು ತೀಯಲ್ಲಾ, ಕಾರಣವೇನು ? ಎಂದು ಕೇಳಿದನು, ಅದಕ್ಕೆ ಮದನನು -ಜೀಯ, ಒಂದು ಕೆಲಸಕ್ಕಾಗಿ ನನಗೆ ಹಣ ಬೇಕಾಗಿದೆ. ಅದನ್ನು ನಿಮಗೆ ಹೇಳಿದರೆ ನೀವೇ ಒಪ್ಪಿಕೊಳ್ಳು ತೀರಿ, ಆದರೆ ಕೆಲಸವಾದಮೇಲೆ ಅದನ್ನು ತಮಗೆ ಅರಿಕೆ ಮಾಡುತ್ತೇನೆ ಎಂದನು. ಆಗ ಅರಸಿಯುಇದೆಲ್ಲಾ ರಾಮಜೋಯಿಸರು ಕಲಿಸಿಕೊಟ್ಟ ವಿದ್ಯವೊ ? ನಮ್ಮ ಮಗು ಮೊದಲಿಗೆ ಈಗ್ಯ ಕೆಟ್ಟು ಹೋದ ಪೂರ್ವದಲ್ಲಿ ದುಡ್ಡು ಬೇಕೆಂದು ಕೇಳು ತಿರಲಿಲ್ಲ. ಈಗ ಅದನ್ನೂ ಕೇಳುತಾನೆ, ಇದ್ದ ಬುದ್ದಿಯೂ ಹೋಯಿತು. ಉ ಪಾದ್ರಿಯಿಂದ ಆದ ಉಪಕಾರ ಇದೇಯೆ. ಜೋಯಿಸನಿಗೆ ದುಡ್ಡು ಬೇಕೇನೊ, ಅದಕ್ಕೋಸ್ಕರ ಹೇಳಿ ಕಳುಹಿಸಿದಾನೆ, ಎಂದು ಹರಟಿ ದಳು. ರಾಜಕುಮಾರನು--ಅಮ್ಮಯ್ಯ ಹೀಗೆ ಹೇಳ ಬೇಡಿ, ಇಷ್ಟ ವಿದ್ದರೆ ಹಣವನ್ನು ಸುಮ್ಮನೆ ಕೊಡಿ, ಇಲ್ಲದಿದ್ದರೆ ಸಾಲವಾಗಿಯಾದರೂ . ಭ