ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಕೊಟ್ಟ ರಿ, ನಾನು ತೀರಿಸುತ್ತೇನೆ, ಎಂದನು. ನೀನು ಹೇಗೆ ತೀರಿಸು ತೀಯೆ, ಎಂದು ದೊರೆ ಕೇಳಲು, ನೀವು ಆಗಾಗ್ಯ ವೆಚ್ಚಕ್ಕೆ ನನಗೋ ಸ್ವರ ಕಳುಹಿಸುವ ಹಣದಲ್ಲಿ ಈ ಸಾಲವನ್ನು ತೀರಿಸಿಕೊಳ್ಳಿ, ಇದು ತೀರುವತನಕ ವೆಚ್ಚಕ್ಕೆ ನೀವು ಕಳುಹಿಸಬೇಡಿ ಎಂದು ಖಂಡಿತವಾಗಿ ಮಾತನಾಡಿದನು. ಅರಸಿಗೆ ಈ ಮಾತನ್ನು ಕೇಳಿ ಅಸಮಾಧಾನ ವಾಯಿತು. ಆಗ ಅರಸು ಇಪ್ಪತ್ತೇಳು ವರಹವನ್ನು ತೆಗೆದು ಮಗನಿಗೆ ಕೊಟ್ಟ ನು. ದೊರೆನಗನು ಅದನ್ನು ತೆಗೆದುಕೊಂಡು ರಾಮಜೋಯಿಸರ ಮನೆಗೆ ಬಂದು ಸುಮತಿಯನ್ನೂ ಕರೆದುಕೊಂಡು, ಬಡಒಕ್ಕಲಗಿತ್ತಿಯ ಮನೆಗೆ ಹೋದನು, ಅದುವರೆಗೆ ಅವಳ ಗಂಡನನ್ನು ಜವಾನರು ಹಿಡಿದುಕೊಂಡು ಹೋಗಿ ಚಾವಡಿಯಲ್ಲಿ ಕೂರಿಸಿದ್ದರು. ಮನೆ ಮಕ್ಕ ಳೆಲ್ಲಾ ಹಿಟ್ಟನ್ನು ತಿಂದು ಎರಡು ದಿವಸವಾಗಿತ್ತು, ಯಜಮಾನಿಯು ಒಳಗೆ ಕೂತು ಅಳುತಾ ಇದ್ದಳು, ಮದನನು ಅವಳ ಸವಿಾಪದಲ್ಲಿ ನಿಂತುಕೊಂಡು-ಅಮ್ಮಾ ಅಳಬೇಡ. ಈ ಹಣವನ್ನು ಕೊಟ್ಟು ಸಾಲ ವನ್ನು ತೀರಿಸಿ ನಿನ್ನ ಗಂಡನನ್ನು ಬಿಡಿಸಿಕೊಂಡು ಬಾ, ಎಂದು ಆ ಇಪ್ಪತ್ತೇಳು ವರಹಗಳನ್ನೂ ಅವಳ ಮುಂದೆ ಸುರಿದನು, ಇದನ್ನು ಕಂಡು ಆ ಶೂದ್ರಿಗೆ ಬಹು ಸಂತೋಷವಾಯಿತು, ಕೊನೆಗೆ ಮದನನ ಕಾಲನ್ನು ಕಟ್ಟಿಕೊಂಡು, ಅವ ಮಾಡಿದ ಉಪಕಾರಕ್ಕೆ ಅಡ್ಡಡ್ಡ ಬಿದ್ದು ಆ ಹಣವನ್ನು ಕಚೇರಿಗೆ ಕೊಟ್ಟು ಗಂಡನನ್ನು ಬಿಡಿಸಿಕೊಂಡು ಬಂದಳು. ಆ ಗೌಡನು ಹಣ ಎಲ್ಲಿತ್ತು ಎಂದು ಕೇಳಲಾಗಿ-ನಮ್ಮ ಭಾಗದ ಈಶ್ವರನಹಾಗೆ ಬಂದ ಈ ಮಗುವು ಹಣವನ್ನು ಕೊಟ್ಟನೆಂದು ಗಂಡನಿಗೆ ಹೇಳಿದಳು. ಆಗ ಗವುಡನೂ ಸಹಿತ ಸುಮತಿ ಆ ಮದನ ಕುಮಾರ ಇವರಿಬ್ಬರ ಕಾಲಿಗೂ ಬಿದ್ದು-ಸ್ವಾಮಿ, ನಮ್ಮ ಮಕ್ಕಳು ಮರಿಯೆಲ್ಲಾ ನಿಮ್ಮಿಂದ ಉಳಿದೆವು, ಇಲ್ಲದಿದ್ದರೆ, ಸತ್ತು ಹೋಗುತಿದ್ದೆವು. ನಿಮ್ಮ ಹೆಸರು ಹೇಳಿ ನಾವು ದೀಪಾ ಹತ್ತಿಸುತ್ತೇವೆ, ಎಂದು ಅವರನ್ನು ಕೊಂಡಾಡಿದನು, ಸುಮತಿ ಮದನ ಕುಮಾರರಿಬ್ಬರೂ ಊರಿಗೆ ಬಂದು ಬಿಟ್ಟರು,