ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ೧ ನೆ ಅಧ್ಯಾಯ ಪಿ ಕೆ ಶಾಲಿವಾಹನ ಶಕ ೧೪೩೦-೪೦ ರಲ್ಲಿ ಕರ್ಣಾಟಕ ರಾಜ್ಯದ ಮಲೆ ನಾಡುಸೀಮೆಯಲ್ಲಿ ಒಬ್ಬಾನೊಬ್ಬ ಚಿಕ್ಕ ಪಾಳಯಗಾರನಿದ್ದನು. ಆತನ ಹೆಸರು ಅನಂಗರಾಜ. ಆ ಕಾಲದಲ್ಲಿ ಹತ್ತು ಇಪ್ಪತ್ತು ಹಳ್ಳಿಗಳನ್ನು ಕಟ್ಟಿ ಕೊಂಡು ಆ ಚಿಕ್ಕ ರಾಜ್ಯದಲ್ಲಿ ಆಳುತ್ತಿದ್ದ ಪಾಳಯಗಾರರನ್ನು ಅಲ್ಲಿನ ಸಾಧಾರಣ ಬಡ ಜನರೆಲ್ಲರೂ ದೊರೆಗಳು ದೊರೆಗಳು ಎಂದು ಕರೆಯುವ ಪದ್ದತಿ ಇತ್ತು, ಅಲ್ಲಿನ ಬಡ ಆರಂಬಗಾರರು ಬೆಳೆದ ಕಾಳು ಕಡ್ಡಿ ಯೆಲ್ಲಾ ಈ ದೊರೆಗಳ ಉಗ್ರಾಣಕ್ಕೆ ಬಂದು ಬೀಳುತಿತ್ತು, ಅವರು ಸಂಪಾದಿಸಿದ ಪುಟ್ಟ ಗ೦ಟೆಲ್ಲಾ ದೊರೆಯ ಬೊಕ್ಕಸದಲ್ಲಿ ಗಂಟಾಗು ತಿತ್ತು, ಹೆಣ್ಣು ಗಂಡು ಆದಿಯಾಗಿ ಇವರ ಅರಮನೆಯ ಬಿಟ್ಟ ಬೇಗಾರಿ ಚಾಕರಿಯನ್ನು ಮಾಡಿ ಮಾಡಿ ಮುಪ್ಪಾಗುತಾ ಇದ್ದರು. ದೊರೆಯ ಆಜ್ಞೆಯನ್ನು ವಿಾರಿದವರಿಗೆ ಚಿತ್ರಾಜೆಯಾಗುತಿತ್ತು. ಮುಟ್ಟ ಬೇಡವೆಂದ ವಸ್ತುವನ್ನು ಮುಟ್ಟಿದವರಿಗೆ ಕೈ ಕತ್ತರಿಸುವುದು, ದೊರೆಯನ್ನು ಕತ್ತೆತ್ತಿ ನೋಡಿದವರಿಗೆ ಕಣ್ಣ ಕೀಳಿಸುವುದು, ದೊರೆಯ ಉದ್ಯಾನವನದ ಹೂವನ್ನು ಕಿತ್ತು ಮೂಸಿನೋಡಿದವರಿಗೆ ಮೂಗ ಕುಯಿಸುವುದು, ದೊರೆಯನ್ನು ದೂಷಿಸಿ ಮಾತನಾಡಿದವರಿಗೆ ನಾಲಗೆ ಯನ್ನು ಸೀಳಿಸುವುದು, ದೊರೆಯ ತೋಟದ ಹಣ್ಣನ್ನು ತಿಂದವರಿಗೆ ಹಲ್ಲ ಮುರಿಸುವುದು ಇವೇ ಮೊದಲಾದ ದಂಡನೆಗಳು ನಿತ್ಯವೂ ಗೊತ್ತಿಲ್ಲ ದಷ್ಟು ನಡೆಯುತಿದ್ದವು, ಆದರೆ ಯಾವ ಶಿಕ್ಷೆಯನ್ನು ವಿಧಿಸಬೇಕಾದರೂ, ದೊರೆಯ ವಿಷಯದಲ್ಲಿ ನಿಜವಾದ ಅಥವಾ ಸುಳ್ಳಾದ ಯಾವುದಾದರೂ ಒಂದು ಅಪರಾಧವನ್ನು ನಡಸಿದವನಿಗೇ ಹೊರತು, ಉಳಿದ ಯಾವ