ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܬܦܘ ೧೧] ಸುಮತಿ ಮದನಕುಮಾರರ ಚರಿತ್ರೆ ಜೋಯಿಸನು ತಂದೇ ಮನೆಯಿಂದ ಮದನ ಬಂದನೆಂದು ತಿಳಿದು ಅವನನ್ನು ಬಹು ಪ್ರೀತಿಯಿಂದ ಕಂಡು, ಅರಸ್ತೂ, ರಾಣಿಯೂ ಸುಖ ನಾಗಿದಾರೆಯೆ ಎಂದು ಕ್ಷೇಮಲಾಭವನ್ನು ವಿಚಾರಿಸಿ, ಸುಲೇಮಾನನ ಕಥೆಯನ್ನು ಮುಂದಕ್ಕೆ ಹೇಳುತ್ತೇನೆ ಕೇಳು, ಎಂದು ಹೇಳುವುದಕ್ಕೆ ಮೊದಲುಮಾಡಿದನು. ೧೧ ನೆ ಅಧ್ಯಾಯ [ ಸುಲೇಮಾನನ ಕಥೆ ಮುಂದೆ ಸಾಗಿದ್ದು ] ಆ ಮೇಲೆ ಮುಲ್ತಾನಿ ಸಾಹುಕಾರನು ಮೊದಲು ತಾನು ವಾಗ್ದಾನ ಮಾಡಿದ್ದ ಪ್ರಕಾರಕ್ಕೆ ತನ್ನ ಮಗನ ಪ್ರಾಣವನ್ನು ಉಳಿಸಿಕೊಟ್ಟ ಸುಲೇ ಮಾನನಿಗೆ ತನ್ನ ಆಸ್ತಿಯಲ್ಲಿ ಅರ್ಧವನ್ನು ತೆಗೆದುಕೊಳ್ಳೆ೦ದು ಬಹಳ ವಾಗಿ ಉಪಚರಿಸಿದನು, ಆದರೆ ಸುಲೇಮಾನನು ಸಾಹುಕಾರನ ಮಾತಿಗೆ ಸ್ವಲ್ಪ ಉದಾರವಾದ ಮನಸ್ಸನ್ನೂ, ಸ್ವಲ್ಪ ತಿರಸ್ಕಾರಭಾವವನ್ನೂ ತೋರಿ ಸುತಾ, ಹೇಳಿದ್ದೇನೆಂದರೆ :- ತಾವು ನನಗೆ ಮಹತ್ತರವಾದ ಉಪಕಾರ ವನ್ನು ಮಾಡಿದಿರಿ ; ಅದಕ್ಕಾಗಿ ನನ್ನ ಪ್ರಾಣವೇ ತಮ್ಮದಾಗಿದೆ, ತಮ್ಮ ಸೇವೆಯನ್ನು ಮಾಡುವುದರಲ್ಲಿ ಈ ದೇಹ ಹೋಗಿದ್ದರೆ ಚೆನ್ನಾಗಿತ್ತು. ಆದರೆ ದೇವರ ಚಿತ್ರಕ್ಕೆ ಬರಲಿಲ್ಲ. ಆದಾಗ್ಯೂ ತಮ್ಮ ಉಪಕಾರವನ್ನು ನಾನು ಮರೆಯಲಿಲ್ಲವೆನ್ನು ವಹಾಗೆ ನನಗೆ ಸಮಯ ದೊರೆಯಿತಲ್ಲಾ, ಅದಕ್ಕೆ ನಾನು ಕೃತಜ್ಞನಾಗಿರಬೇಕು, ಹೀಗೆಂದನು. ಆದರೂ ಸಾಹುಕಾರನು ತುರುಕನ ಉಪಾಯವನ್ನು ಮರೆಯ ಲಿಲ್ಲ. ಆ ಮುಲ್ತಾನಿಯು ಮತ್ತೆ ಸೆರೆಬಿದ್ದಿದ್ದ ಸುಲೇಮಾನನನ್ನು ಬಿಡಿಸಿಕೊಂಡು, ಅವನಿಗೆ ಬೇಕಾದ ಉಪಚಾರವನ್ನು ಮಾಡಿ ಅವನ ದೇಶಕ್ಕೆ ಕಳುಹಿಸಿಕೊಟ್ಟನು. ತರುವಾಯ ಕೆಲವು ಕಾಲ ಕಳೆದುಹೋಯಿತು. ಸಾಹುಕಾರನ