ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧]. ಸುಮತಿ ಮದನಕುಮಾರರ ಚರಿತ್ರೆ ೧೨೯ ಪುರುಷನು ಸ್ವಲ್ಪ ಪರಿವಾರದೊಡನೆ ಅಲ್ಲಿ ಬಂದು ನಿಂತು, ಗುಲಾಮ ರನ್ನಾಗಿ ಮಾರುವುದಕ್ಕೆ ನಿಲ್ಲಿಸಿದ್ದ ಜನರನ್ನು ಒಬ್ಬೊಬ್ಬರನ್ನಾಗಿ ನೋಡುತಾ ಬಂದನು. ಆಗ ಮುಲ್ತಾನೀ ಸಾಹುಕಾರನ ಮಗನನ್ನು ತೋರಿಸಿ, ಅವನ ಬೆಲೆ ಎಷ್ಟೆಂದು- ಮಾರುತಿದ್ದ ಸೆಟ್ಟಿ ಯನ್ನು ಕೇಳಿದನು. ಆ ವರ್ತಕನು ಅವನ ಬೆಲೆ ಹತ್ತು ಸಾವಿರ ವರಹವೆನಲು, ಆ ಪುರು ಷನುಅಯ್ಯಾ ದೇಶದಲ್ಲಿ ಇವನಿಗಿಂತಲೂ ನಾಲ್ಕರಷ್ಟು ಶಕ್ತಿ ಹೆಚ್ಚಾ ಗಿರತಕ್ಕ ಜನರನ್ನು ನೂರುವರಹಾದ ಪ್ರಕಾರ ಮಾರಿದೆ. ಈಗ ಇವನಿಗೆ ಮಾತ್ರ ಒಂದಕ್ಕೆ ನೂರಾಗಿ ಹೇಳುತೀಯೆ, ಎಂದನು. ಆ ಮಾತಿಗೆ ವರ್ತಕನು--ಸ್ವಾಮಿ, ಇವನು ಶಕ್ತಿವಂತನಲ್ಲ, ನಿಜ, ಆದಾಗ್ಯೂ ಇವ ನಿಂದ ನಾನು ಶಾನೆ ನಷ್ಟ ಪಟ್ಟ ದೇನೆ. ಈ ಜನರನ್ನೆಲ್ಲಾ ಸಮುದ್ರದ ಮೇಲೆ ನಾವು ಹಿಡಿದೆವು. ಈಗ ನೀವು ಕ್ರಯಕ್ಕೆ ಕೇಳುತಿರುವ ಹಿಂದುವು ಆ ಹಡಗಿನಮೇಲಿದ್ದ ಜನರನ್ನೆಲ್ಲಾ ಎತ್ತ ಕಟ್ಟಿ, ನಮ್ಮ ಜನರು ಅನೇಕ ರನ್ನು ಕೊಲ್ಲಿಸಿದನು. ತಾನೂ ನಮ್ಮವರನ್ನು ಬಹಳವಾಗಿ ಕೊಂದನು. ಆದ್ದರಿಂದ ಇವನಿಂದ ಹತ್ತು ಸಾವಿರ ವರಹವೇ ಬರಬೇಕು, ಇಲ್ಲ ಇವ ಸಾಯುವ ತನಕ ಇವನ ಕೈಯಲ್ಲಿ ಕತ್ತೆ ಚಾಕರಿಯನ್ನು, ನಾನು ಮಾಡಿಸಬೇಕು ; ಎಂದನು. ಆಗ ಆ ಪುರುಷಶ್ರೇಷ್ಠ ನು, ಈ ಸಮು ದ್ರದ ಕಳ್ಳರನ್ನು ಅಷ್ಟರಮಟ್ಟಿಗೆ ಎದುರಿಸಿದ ಆ ಹಿಂದುವು ಯಾರೆಂದು ಚೆನ್ನಾಗಿ ದೃಷ್ಟಿಸಿ ನೋಡಿದನು, ಅದುವರೆಗೂ ತಲೆಯನ್ನು ಬಗ್ಗಿಸಿ ಕೊಂಡು ನೆಲವನ್ನೇ ನೋಡುತಿದ್ದ ಮುಲ್ತಾನಿ ಸಾಹುಕಾರನ ಮಗನು, ಕತ್ತೆತ್ತಿ ಆ ಮನುಷ್ಯನನ್ನು ನೋಡಿ, ತಟ್ಟನೆ ಸುಲೇರ್ಮಾ ಎಂದು ಗಟ್ಟಿ ಯಾಗಿ ಕೂಗಿದನು, ಆ ಗಳಿಗೆಯಲ್ಲಿಯೇ ಆ ಮನುಷ್ಯನೂ ಸಹಿತ ಇವನ ಗುರುತನ್ನು ಕಂಡುಹಿಡಿದು ಹೋಗಿ ಗಟ್ಟಿ ಯಾಗಿ ತಬ್ಬಿ ಕೊಂಡನು. ಇವರಿಬ್ಬರೂ ಪರಸ್ಪರ ಬಹುದಿವಸ ಕಾಣದೇ ಇದ್ದ ತಂದೆಮಕ್ಕಳೊ, ಎಂದು ಅಲ್ಲಿದ್ದವರು ಊಹಿಸುವ ಹಾಗಾಯಿತು. ಮುಲ್ತಾನಿ ಸಾಹುಕಾರನು ತನಗೆ ಮಾಡಿದ ಉಪಕಾರವೆಲ್ಲಾ ಸುಲೇ ಮಾನನ ಜ್ಞಾಪಕಕ್ಕೆ ಬಂತು. ಸುಲೇಮಾನನ ಕೃತಜ್ಞತೆಯು ಉಕ್ಕಿ ಬಂತು, ವೃದ್ದ ನಾದ ಮುಲ್ತಾನೀ ಸಾಹುಕಾರನೂ ಆ ಖೈದಿಗಳ