ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೩೧ ಈ ಪ್ರಕಾರ ಸುಲೇಮಾನನ ಕಥೆ ಮುಗಿಯಿತು. ತರುವಾಯ ಸುಮತಿ ಮದನ ಕುಮಾರರಿಬ್ಬರೂ ಗುರುವಾದ ರಾಮಜೋಯಿಸನೂ ಪೇಟೆಗೆ ಹೊರಟರು. ದೂರದಲ್ಲಿ ಒಂದು ಗುಂಪು ಬರುತಿತ್ತು. ಅವರ ಮಧ್ಯೆ ಒಬ್ಬ ಮನುಷ್ಯನು ಒಂದು ಕರಡಿಯನ್ನು ಹಿಡಿದುಕೊಂಡು ಬರುತಿದ್ದನು, ಆ ಕರಡಿಯು ಆ ಮನುಷ್ಯ ಹೇಳಿದಹಾಗೆ ನಿಂತು ಕೊಳ್ಳುವುದೂ, ಲಾಗಾ ಹಾಕುವುದೂ ಹೀಗೆಲ್ಲಾ ಮಾಡುತಿತ್ತು, ಅದು ವರೆಗೂ ಕರಡಿಯನ್ನು ಕಾಣದೇ ಇದ್ದ ಮದನನು-ಜೋಯಿಸರೆ, ಈ ಕರಡಿ ಕೆಟ್ಟ ಮೃಗವೆ ? ಇದನ್ನು ಸಾಕಿ ಒಗ್ಗಿಸಿಕೊಳ್ಳ ಬಹುದೆ ? ಎಂದು ಕೇಳಿದನು. ಅದಕ್ಕೆ ಜೋಯಿಸನು--ಅಯ್ಯ, ಹುಲಿ, ಸಿಂಹ, ಎಂಥಾ ಕೆಟ್ಟ ಮೃಗಗಳೋ, ಕರಡಿ ಅಂಥಾ ಕೆಟ್ಟ ಮೃಗವಲ್ಲ, ಆದರೂ ಇದು ಕೆಟ್ಟ ದೇ ಹೌದು. ಹಿಮಾಚಲ ಪರ್ವತಕ್ಕೆ ಉತ್ತರದಲ್ಲಿರುವ ರಾಜ್ಯದ ಕರಡಿಗಳು ಹೆಂಗಸರನ್ನೂ ಸಣ್ಣ ಮಕ್ಕಳನ್ನೂ ಸಹ ಕೊಂದು ತಿಂದು ಬಿಡುವವು. ಈ ಉತ್ತರದೇಶದ ಕರಡಿಯು ಹಿಂದೂಸ್ಥಾನದ ಕರಡಿ ಹಾಗೆ ಕಪ್ಪಾಗಿರುವುದಿಲ್ಲ. ಮಾಸಲುವರ್ಣವಾಗಿರುವುದು, ಒ೦ದಾ ನೊಂದು ಕರಡಿಯು ತನ್ನ ಎರಡು ಮರಿಗಳನ್ನೂ ಕರೆದುಕೊಂಡು ಕಾಡಿನಲ್ಲಿ ಬಂತು, ಊರಿಗೆ ಹೋಗುತಿದ್ದ ಮಾರ್ಗಸ್ಥರು ಒಂದು ಕಡೆ ಇಳಿದು, ಅಡಿಗೆಯನ್ನು ಮಾಡಿಕೊಂಡು ಊಟಕ್ಕೆ ಕೂತು ಕೊಂಡರು, ಆ ಕರಡಿಯು ಅಲ್ಲಿಗೆ ಬಂತು, ಅದನ್ನು ಕಂಡು ಜನರು ಓಡಿ ಹೋದರು. ಅವರು ಬಡಿಸಿಕೊಂಡಿದ್ದ ಅನ್ನ ವನ್ನು ಕರಡಿಯು ತೆಗೆದುಕೊಂಡು ಹೋಗುವುದಕ್ಕೆ ಮೊದಲು ಮಾಡಿತು. ತಮ್ಮ ಎಲೇ ಅನ್ನ ಹೋಯಿತಲ್ಲಾ ಎಂದು ದುಃಖದಿಂದ ಈ ಜನರು ತಮ್ಮ ಹತ್ತಿರಿದ್ದ ಒಂದು ಕೋವಿಯನ್ನು ಹಾರಿಸಿ, ಆ ಕರಡೀ ಮರಿ ಗಳನ್ನು ಕೊಂದರು, ದೊಡ್ಡ ಕರಡಿಗೂ ಒಳ್ಳೆ ಆಯಕ್ಕೆ ಏಟು ಬಿದ್ದು ಅದೂ ನಡೆಯಲಾರದಹಾಗಾಯಿತು, ದೊಡ್ಡ ಕರಡಿಯು ತನ್ನ ಏಟನ್ನು ಸಹಿಸಿಕೊಂಡು ಮೆಲ್ಲಗೆ ತೆವಳಿಕೊಂಡು ಹೋಗಿ ತನ್ನ ಮರಿಗಳ ಬಾಯಿಗೆ ಅನ್ನವನ್ನು ತೋರಿಸುವುದೂ, ಅವುಗಳನ್ನು ಮೇಲಕ್ಕೆ ಎತ್ತಿ ಕೊಳ್ಳುವುದೂ, ಕೆಳಗೆ ಮಲಗಿಸುವುದೂ, ಸ್ವಲ್ಪ ದೂರ ತೆವಳಿಕೊಂಡು