ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೩೫ ಬಿದ್ದಿರಬೇಕು, ಆ ಏಟಿನ ಭಯ ಮನಸ್ಸಿನಲ್ಲಿ ಇದ್ದದರಿಂದಲೇ ನಾನು ನಿಲ್ಲಿಸಿದ ಕೂಡಲೇ ನಿಂತುಕೊಂಡಿತು, ಇಲ್ಲದೇ ಇದ್ದರೆ ಅದರ ಹಾವಳಿಯನ್ನು ತಡೆಯುವುದಕ್ಕೆ ಆಗುತಿರಲಿಲ್ಲ. ಹೀಗೆ ಮಾತನಾಡುತಿರುವಾಗ, ಮದನನ ಕೈ ಸ್ವಲ್ಪ ರಕ್ತವಾಗಿತ್ತು. ಅದರ ಮೇಲೆ ಜೋಯಿಸನ ಕಣ್ಣು ಬಿತ್ತು, ರಕ್ತ ಹೇಗೆ ಬಂತೆಂದು ಕೇಳಲು, ಕಸಿಯು ತನ್ನ ನ್ನು ಕಚ್ಚುವುದಕ್ಕೆ ಬಂದ ಸಂಗತಿಯನ್ನೆಲ್ಲಾ ಮದನನು ಹೇಳಿದನು. ಆಗ ಜೋಯಿಸನು ಆ ಹುಡುಗನಿಗೆ ಗಾಯ ವಾದ್ದಕ್ಕೆ ಪೇಚಾಡಿ ಅವನಿಗೆ ಮೊದಲಿಗಿಂತಲೂ ಈಗ ಧೈರ್ಯ ಹೆಚ್ಚಾದ್ದಕ್ಕೆ ಸಂತೋಷ ಪಡುತಾ ಹೇಳಿದ್ದೇನೆಂದರೆ :- ಮೃಗಗಳಲ್ಲಿ ಕಪಿಯು ಬಹು ವಿಚಿತ್ರವಾದ್ದು, ಇದು ಆಕಾರದಲ್ಲಿ ಮನುಷ್ಯನನ್ನು ಹೋಲುವುದು, ಕರಡಿ ಹೇಗೆ ಸೀತ ದೇಶದಲ್ಲಿ ವಿಶೇಷ ವಾಗಿರುವುದೂ ಕಪಿ ಹಾಗೆ ಉಷ್ಣ ದೇಶದಲ್ಲಿರುವುದು, ಇದಕ್ಕೆ ಚಟ ವಟಿಕೆ ಹೆಚ್ಚು, ಮುಂದುಗಡೆ ಕಾಲು ಮನುಷ್ಯನ ಕೈಯಿನ ಹಾಗೆ ಇರುವುದು, ಕಾಡಿನಲ್ಲಿ ಇದು ಹಿಂಡು ಹಿಂಡಾಗಿರುತಾ, ಅಲ್ಲಿ ಸಿಕ್ಕುವ ಹಣ್ಣನ್ನು ಕಿತ್ತು ತಿಂದು ಜೀವಿಸುವುದು, ಗುಂಪು ಕಟ್ಟಿ ಕೊಂಡು ತೋಟಗಳಿಗೆ ನುಗ್ಗುವುದು, ಯಾರಾದರೂ ಬಂದರೆ, ಸಂಚುನೋಡಿ ತಿಳಿಸುವುದಕ್ಕೆ ಒಂದೆರಡು ಕೋತಿಗಳನ್ನು ಕಾವಲಿಟ್ಟು, ಗುಂಪೆಲ್ಲಾ ಒಳಕ್ಕೆ ನುಗ್ಗು ವುದು, ಕೆಲವು ಕೋತಿಗಳು ಗಿಡಕ್ಕೆ ಹತ್ತಿ ಹಣ್ಣು ಗಳನ್ನು ಕಿತ್ತು ಕೆಳಕ್ಕೆ ಹಾಕುವವು. ಕೆಳಗೆ ಇರತಕ್ಕೆ ಕಪಿಗಳು ಅವುಗಳನ್ನೆಲ್ಲಾ ಜಾಗ್ರತೆಯಾಗಿ ಆಚೆಗೆ ಸಾಗಿಸುವವು. ಸುಮತಿ-ಜೋಯಿಸರೆ,' ಕಾಗೆಯಲ್ಲಿಯೂ, ಈ ಗುಣವಿದೆ, ಏನಾದರೂ ತಿಂಡಿಯನ್ನು ಹಾಕಿದ್ದರೆ ಅದನ್ನು ತಿನ್ನುವುದಕ್ಕೆ ಗುಂಪು ಗುಂಪಾಗಿ ಬರುವುದು, ಒಂದೆರಡು ಮಾತ್ರ ಎತ್ತರವಾದ ಮರದ ಮೇಲೆ ಕೂತುಕೊಂಡು ಜನರು ಯಾರಾದರೂ ಬಂದರೆ, ಕೂಗಿ ಎಚ್ಚರವನ್ನು ಹೇಳುವವು. ಇದನ್ನು ತಿಳಿದು ಗುಂಪೆಲ್ಲಾ ಹಾರಿ ಹೋಗುವುದು ಎಂದನು. ಇವರೆಲ್ಲರೂ ಮನೆಗೆ ಹೋದರು. ಅಷ್ಟರಲ್ಲಿ ರಾಜಪುತ್ರರನ್ನ