ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(41 ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಸ್ವಲ್ಪ ದಿನದ ಮಟ್ಟಿಗೆ ಕರೆತರಬೇಕೆಂದು ಕೊಟ್ಟಿದ್ದ ದೊರೆಯ ಅಪ್ಪಣೆ ಪ್ರಕಾರ ಆಳುಗಳು ಕುದುರೆಯನ್ನು ತಂದು ನಿಲ್ಲಿಸಿಕೊಂಡು ಜೋಯಿ ಸರ ಮನೇಬಾಗಿಲಲ್ಲಿ ಕಾದಿದ್ದರು. ಮದನನು ಇದನ್ನು ಕಂಡು ಸಂತರ ಅಪ್ಪಣೆಯನ್ನು ಪಡೆದು, ಕುದುರೆಯಮೇಲೆ ಕೂತು ಅರಮನೆಗೆ ಹೋದನು. ಅಲ್ಲಿ ದೊರೆಯೂ ಅರಸಿಯೂ ಬಹುಪ್ರೀತಿಯಿಂದ ಮಗ ನನ್ನು ಕಂಡರು, ಗುರುವಿನ ಸಮಿಾಪದಲ್ಲಿ ತಾನು ಕಲಿಯುವ ವಿದ್ಯದ ರೀತಿಯನ್ನು ಮದನನು ಆಗಾಗ್ಗೆ ತಂದೆ ತಾಯಿಗಳಿಗೆ ಹೇಳುತಾ ಬಂದನು, ಆದರೆ ತಾನು ದೊರೆಯಿಂದ ಇಸಕೊಂಡು ಹೋದ ಇಪ್ಪ ತೇಳು ವರಹದ ಸಂಗತಿಯನ್ನು ಮಾತ್ರ ಎತ್ತಲಿಲ್ಲ. ಹೀಗಿರಲು ಒಂದು ಸೋಮವಾರದ ದಿನ ರಾಜನು ತನ್ನ ಮಗ, ಹೆಂಡತಿ, ಮತ್ತು ಇತರ ಪರಿವಾರದೊಡನೆ ಶಿವದರ್ಶನಕ್ಕಾಗಿ ಸಾಯಂಕಾಲ ಗುಡಿಗೆ ಹೋದನು. ಅಲ್ಲಿ ದರ್ಶನವನ್ನು ಮಾಡಿಕೊಂಡು ಹಿಂತಿರುಗುತಿರುವಾಗ ಅಲ್ಲಿದ್ದ ಜನ ರೆಲ್ಲಾ ಮದನನನ್ನು ನೋಡಿ ಗುಸುಗುಸನೆ ಮಾತನಾಡುತಿದ್ದರು. ಆಗ ನಾಲ್ಕು ನಿಮಿಷದೊಳಗಾಗಿ ಒಬ್ಬ ಶೂದ್ರಿ ಬಂದು ಮದನನ ಕಾಲಿಗೆ ಬಿದ್ದು, ಬುದ್ದಿ ನೀವು ನಮ್ಮ ತಂದೆ, ನಮ್ಮ ಭಾಗದ ದೇವರು, ನಾನು ಹತ್ತಿಸುವ ದೀಪ ತಮ್ಮದು, ಎಂದು ವಿನಯವಾಗಿಹೇಳಿದಳು. ದೊರೆಯು ಈ ಆಶ್ಚಯ್ಯ ಕರವಾದ ಸಂಗತಿ ಏನೆಂದು ವಿಚಾರಿಸಲಾಗಿ ರಾಜಕುಮಾ ರನು ಆ ಬಡ ಒಕ್ಕಲಿಗರಿಗೆ ಇಪ್ಪತ್ತೇಳು ವರಹವನ್ನು ಕೊಟ್ಟು ಅವರ ಕಷ್ಟವನ್ನು ಬಿಡಿಸಿದ ವಿಷಯ ಗೊತ್ತಾಯಿತು. ಕೂಡಲೆ ಅರಸ, ಅರಸಿ ಇಬ್ಬರಿಗೂ ವಿಶೇಷ ಸಂತೋಷವಾಯಿತು, ಅವರು ಮಗನನ್ನು ತಬ್ಬಿ ಕೊಂಡು ಮುದ್ದಾಡಿದರು, ಅರಸುಮಗನಿಗೆ ಪೂರ್ವಕ್ಕಿಂತಲೂ ಈಗ ದೇಹದ ಶಕ್ತಿ ಹೆಚ್ಚಾಗಿತ್ತು ; ಮೊದಲಿನಂತೆ ಕೋಪಮಾಡಿಕೊಂಡು, ಮನಸ್ಸು ಬಂದಹಾಗೆ ಆಡುತ್ತಿರಲಿಲ್ಲ. ಹೀಗೆ ಎಲ್ಲಾ ಭಾಗದಲ್ಲಿಯೂ ತಮ್ಮ ಮಗನು ವೃದ್ದಿ ಯಾಗುತಾ ಇದಾನೆಂದು ತಿಳಿದು ರಾಜನಿಗೆ ಸಂತೋಷವಾಯಿತು." ಮದನನು ಎಂದಿನಂತೆ ಮನೆಗೆ ಬಂದನು. ಒಂದಾನೊಂದು ದಿನ ಒಂದು ಗುಬ್ಬಿ ಯು ಕಿಟಕಿಯಲ್ಲಿ ಬಂದು ಕೂತುಕೊಂಡಿತು, ಅದನ್ನು