ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಕೆಟ್ಟ ಕೆಲಸವನ್ನು ಯಾರು ಮಾಡಿದರೂ ಏನೂ ಆಗುತಿರಲಿಲ್ಲ. ರಾಜಾ ಜ್ಞೆಗೆ ಎಲ್ಲರೂ ಗಡಗಡನೆ ನಡುಗುತಾ ಯಾವಕಾಲಕ್ಕೆ ಏನೋ ಎಂದು ಹಸಾದಕ್ಕೆ ಹಮ್ಮೆಸಿಕೊಂಡಿದ್ದರು. ಹೀಗೆ ಇದ್ದಾಗ್ಯೂ ದೊರೇಮನೆ ಯಲ್ಲಿ ಚಾಕರಿ ಮಾಡುತಿದ್ದವರಿಗೆಲ್ಲಾ ಅರಮನೆಯಲ್ಲಿಯೇ ಮೃಷ್ಟಾನ್ನ | ಭೋಜನವಾಗುತಿತ್ತು, ಈ ಬಡಜನರಿಗೂ ಇವರ ಕುಟುಂಬದವರಿಗೂ ತಲೆಗೆ ಒಂದು ಬಟ್ಟೆಮೇರೆಗೆ ನವರಾತ್ರೆಗೂ ಯುಗಾದಿಗೂ ಇನಾಮು ದೊರೆಯುತಿತ್ತು. ಇಷ್ಟೇ ಅಲ್ಲ; ಅರಮನೇ ಚಾಕರರಲ್ಲದವರು ಅನೇ ಕರು ಸರ್ಕಾರದ ಬಟಾಯಿ ಭೂಮಿಗಳನ್ನು ವ್ಯವಸಾಯಮಾಡುತ್ತಾ, ಇರ್ವಾರ ಬಂದ ದವಸದಲ್ಲಿ ರಾಜಪಾಲನ್ನು ಕೊಟ್ಟು ಕುಳ ಪಾಲನ್ನು ತಾವು ತೆಗೆದುಕೊಂಡು ಸುಖವಾಗಿ ಜೀವಿಸಿಕೊಳ್ಳುತಿದ್ದರು, ಅರಮನೆ ಯಲ್ಲಿ ಯಾರಾದರೂ ಮಕ್ಕಳು ಹುಟ್ಟಿದರೆ, ಮದುವೆಯಾದರೆ, ಕುಳಕ್ಕೆ ಮೂರು ಹಣವನ್ನು ತೆರಬೇಕಾಗಿತ್ತು. ಹೀಗಿದ್ದಾಗ್ಯೂ, ರಾಜಿಕವಾದ ದಂಡಿನ ಹಾವಳಿಯೂ, ದೈವಿಕವಾದ ಕ್ಷಾಮವೂ, ಕೆಟ್ಟ ರೋಗಗಳೂ ಬಂದಾಗಮಾತ್ರ ಅರಸು ತನ್ನ ಪ್ರಜೆಗಳನ್ನು ತನ್ನ ಮಕ್ಕಳ ಕಂಡಹಾಗೆ ಪೋಷಿಸುತಿದ್ದನು. ಹೀಗಿರುತಿರಲಾಗಿ ಈ ಅನಂಗರಾಜನೆಂಬ ಪಾಳಯಗಾರನಿಗೆ ಒಬ್ಬನೇ ಒಬ್ಬ ಮಗ ಇದ್ದನು. ಈ ಮಗನ ಮೇಲೆ ತಂದೆಗೆ ಅಧಿಕ ವಾಗಿ ಪ್ರೀತಿ ಇತ್ತು : ಮಗನಿಗೆ ಚೆನ್ನಾಗಿ ವಿದ್ಯವನ್ನು ಕಲಿಸಬೇಕೆಂಬ ಕುತೂಹಲವು ಆ ಪ್ರೀತಿಗಿಂತಲೂ ಹೆಚ್ಚಾಗಿ ಇತ್ತು, ಇದಕ್ಕಾಗಿ ತನ್ನ ನೆರೇಪಾಳಯಪಟ್ಟಿನ ದೊರೆಯಾಗಿ ತನಗೆ ಸ್ನೇಹಿತನಾಗಿರುವ ಕುಮಾರ ನಾಯಕನ ರಾಜಧಾನಿಯಾದ ಬಿದರೆ ಎಂಬ ಪಟ್ಟಣದಲ್ಲಿ ತಾನು ಹೋಗಿ ಕೆಲವು ವರುಷಗಳು ವಾಸವಾಗಿದ್ದು, ಅಲ್ಲಿನ ಮಹಾ ವಿದ್ವಾಂಸ ರಲ್ಲಿಯೂ ಕ್ರಮವರಿತು ನಡೆಸುತ್ತಿರುವ ಪಾಠಶಾಲೆಗಳಲ್ಲಿಯೂ, ತನ್ನ ಪುತ್ರನಿಗೆ ವಿದ್ಯಾವ್ಯಾಸಂಗವನ್ನು ಮಾಡಿಸಬೇಕೆಂದು ಅನಂಗರಾಯನು ನಿಸಿದನು, ಅದೇ ಪ್ರಕಾರ ಈ ದೊರೆಯು ತನ್ನ ಪಟ್ಟಣವಾದ ಬನವಾಸಿಯನ್ನು ಬಿಟ್ಟು ಬಿದರೆಗೆ ಮಗನನ್ನು ಕರೆತಂದು ತನ್ನ ಯೋಗ್ಯತೆಗೆ ತಕ್ಕಂಥಾ ಒಂದು ಮನೆಯನ್ನು ಮಾಡಿ ಹುಡುಗನನ್ನು