ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೩೭ ಕಂಡು ಮದನ ಸ್ವಲ್ಪ ಅನ್ನ ವನ್ನು ತೆಗೆದುಕೊಂಡು ಹೋಗಿ ಹಾಕಿದನು. ಗುಬ್ಬಿ ಯು ಅದನ್ನು ತಿಂದು ಹಾರಿಹೋಯಿತು. ಮಾರನೇ ದಿನವೂ ಹಾಗೆಯೇ ಬಂದು ಕೂತುಕೊಂಡಿತು, ಮತ್ತೆ ಅನ್ನ ವನ್ನು ಚೆಲ್ಲಲು, ತಿಂದು ಹಾರಿಹೋಯಿತು, ಈ ಪ್ರಕಾರ ಗುಬ್ಬಿ ಯು ನಿತ್ಯವೂ ಬಂದು ಅನ್ನ ವನ್ನು ತಿಂದು ಹೋಗುವ ರೂಢಿಯನ್ನು ಇಟ್ಟು ಕೊಂಡಿತು. ಇದಕ್ಕೆ ಭಯ ಹೋಯಿತು, ಮದನನ ಕೈಯಿಂದಲೇ ಅನ್ನದ ಅಗುಳನ್ನು ಕಚ್ಚಿ ಕೊಳ್ಳುವುದು, ಅವನ ಮೈ ಮೇಲೆಲ್ಲಾ ಓಡಾಡುವುದು, ಹೀಗೆ ಗುಬ್ಬಿ ಯು ಬಹು ಸಲಿಗೆಯಾಗಿ ಒಗ್ಗಿಕೊಂಡಿತು, ಮತ್ತೊಂದು ದಿನ ಈ ಗುಬ್ಬಿ ಹಾರಿಬಂದುದನ್ನು ಕಂಡು, ಮದನನು ಹೋಗಿ ಅನ್ನವನ್ನು ಹಿಡಿದು ಕೊಂಡು ಬಂದು ನೋಡಲು, ಗುಬ್ಬಿ ಯು ಸತ್ತು ಬಿದ್ದಿತ್ತು. ಅದರ ಕತ್ತು ಕತ್ತರಿಸಿಹೋಗಿ, ರಕ್ತ ಸುರಿದಿತ್ತು. ಅತ್ತಿತ್ತ ನೋಡಲು ದೂರ ದಲ್ಲಿ ಮನೆ ಬೆಕ್ಕು ಕೂತಿತ್ತು. ಇವನನ್ನು ಕಂಡು ಅದು ಓಡಿ ಹೋಯಿತು, ಮದನನು ಕಣ್ಣಿನಲ್ಲಿ ನೀರಹಾಕುತಾ ಜೋಯಿಸನ ಸವಿಾಪಕ್ಕೆ ಬಂದು, ನಿತ್ಯವೂ ತಾನು ಗುಬ್ಬಿಗೆ ಅನ್ನ ವನ್ನು ಹಾಕುತಿದ್ದ ಸಂಗತಿಯನ್ನು ಹೇಳಿದನು. ಅದಕ್ಕೆ - ಜೋಯಿಸ-ಹಾಗೆ ಪ್ರಾಣಿಗಳನ್ನು ಪ್ರೀತಿಯಿಂದ ನಾವು ಆದರಿ ಸಿದರೆ, ಅವುಗಳು ನಮ್ಮನ್ನು ಕಂಡು ಭಯ ಪಡದೇ ಒಗ್ಗಿಕೊಳ್ಳು ವವು. ಮದನ-ಹಾಗೆಯೇ ಒಗ್ಗಿಕೊಂಡು ಇತ್ತು. ಈ ದಿವಸ ಅದು ಕಿಟಕಿಗೆ ಬಂದು ಕೂತುಕೊಂಡ ಕೂಡಲೇ ಅನ್ನವನ್ನು ತರೋಣವೆಂದು ಈಚೆಗೆ ಬಂದೆ, ನಾನು ಹೋಗುವಷ್ಟರಲ್ಲಿಯೇ ನಮ್ಮ ಮನೆ ಬೆಕ್ಕು ಅದನ್ನು ಕಚ್ಚಿ ಕೊಂದುಹಾಕಿಬಿಟ್ಟಿತ್ತು. ಜೋಯಿಸ-ಅಯ್ಯೋ ! ಪಾಪ ! ನಿನ್ನ ಗುಬ್ಬಿ ಸತ್ತು ಹೋಯಿತೆ ? ಆದರೆ ಈಗ ಆ ಬೆಕ್ಕಿಗೆ ಏನು ಮಾಡಬೇಕೆಂದು ಇದ್ದೀಯ ? ಮದನ-ಆ ಬೆಕ್ಕನ್ನ ಕೊಂದುಬಿಡಬೇಕು. ಜೋಯಿಸ-ನಿನ್ನ ಗುಬ್ಬಿಯನ್ನು ಕಂಡರೆ ಆ ಬೆಕ್ಕಿಗೆ ವಿಶೇಷ ಹಗೆತನವಿತ್ತೊ, ಅಥವಾ ಬೆಕ್ಕು ಹೊಟ್ಟೆಗೆ ಕಾಣದೆ ಹಕ್ಕಿಗಳನ್ನು ಕೊಂದುಹಾಕುವ ತನ್ನ ಸ್ವಭಾವವನ್ನು ಅನುಸರಿಸಿ, ಈ ಗುಬ್ಬಿಯನ್ನು ಕೊಂದುಹಾಕಿತೊ ?