ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ಈ ಗುಬ್ಬಿಯಮೇಲೆ ಅದಕ್ಕೆ ವಿಶೇಷ ಹಗೆತನವಿತ್ತೆಂದು ಹೇಳಲಾರೆ. ಹೊಟ್ಟೆಗಿಲ್ಲದೆ ಇದನ್ನು ತಿನ್ನ ಬೇಕೆಂದು ಬಂದಿದ್ದರೂ ಇರಬಹುದು. ಜೋಯಿಸ-ಅಳಿಲನ್ನೂ ಇಲಿಯನ್ನೂ ಆ ಜಾತಿ ಹಿಡಿಯುವ ದಿಲ್ಲವೆ, ನೀನು ಕಾಣೆಯ ? ಹಾಗೆ ಮಾಡದಂತೆ ಬೆಕ್ಕಿಗೆ ಬುದ್ದಿಯನ್ನು ನೀನು ಯಾವಾಗಲಾದರೂ ಕಲಿಸಿದ್ದೆ ಯ ? ಮದನ-ಇಲ್ಲ, ಒಂದುದಿನ ಒಂದು ಬೆಕ್ಕು ಇಲಿಯನ್ನು ಹಿಡಿದುಕೊಂಡಿತ್ತು. ಸುಮತಿಯು ಅದನ್ನು ಕಂಡು, ಇಲಿಯನ್ನು ಬಿಡಿಸಿಕೊಂಡು, ಆಚೆಗೆ ಬಿಟ್ಟು ಬಿಟ್ಟ. ನಾನು ಅದರ ಗೋಜಿಗೆ ಹೋಗಲಿಲ್ಲ. ಜೋಯಿಸ-ಹಾಗಾದರೆ, ಆ ಬೆಕ್ಕಿನ ತಪ್ಪಿಗಿಂತಲೂ ನಿನ್ನ ತಪ್ಪು ಹೆಚ್ಚಾಯಿತೋ ಇಲ್ಲವೋ ? ಬೆಕ್ಕು ಸಣ್ಣ ಪಕ್ಷಿಗಳನ್ನು ಹಿಡಿದು ಕೊಲ್ಲು ವುದನ್ನು ನೀನು ಬಲ್ಲೆ. ಆದಾಗ್ಯೂ ನಿನ್ನ ಗುಬ್ಬಿ ಯ ಪ್ರಾಣವನ್ನು ಕಾಪಾಡುವುದಕ್ಕೆ ನೀನು ಯತ್ನ ವನ್ನೇ ಮಾಡಲಿಲ್ಲ, ಅದಕ್ಕೆ ನೀನು ಅನ್ನವನ್ನು ಹಾಕಿ ಒಗ್ಗಿಸಿಕೊಳ್ಳದಿದ್ದರೆ ಅದು ಕಾಡಿನಲ್ಲೇ ಹಾರಾಡಿ ಕೊಂಡಿರುತಿತ್ತು ಬೆಕ್ಕಿನ ಕೈಗೆ ಸಿಕ್ಕು ತಲೇ ಇರಲಿಲ್ಲ. ಆದ್ದರಿಂದ ಸಣ್ಣ ಪಕ್ಷಿಗಳನ್ನು ಕೊಲ್ಲಬಾರದೆಂದು ಒಳ್ಳೆ ಸ್ವಭಾವವನ್ನು ಬೆಕ್ಕಿಗೆ ಕಲಿಸಬೇಕೊ ಇಲ್ಲವೊ ? ನೀನು ಹಾಗೆ ಕಲಿಸದೇ ಹೋದ್ದರಿಂದ, ತಪ್ಪು ನಿನ್ನದೆ, ಬೆಕ್ಕಿ ನದೆ ? ಮದನ-ನಾವು ಹಾಗೆ ಕಲಿಸುವುದಕ್ಕೆ ಆಗುವುದೆ ? ಜೋಯಿಸ-ಚೆನ್ನಾ ಗಿಯೂ ಕಲಿಸಬಹುದು. ಮದನ-ಇಂಥಾ ಕೆಟ್ಟ ಜಂತುಗಳು ಯಾಕೆ ಇರಬೇಕು ? ಜೋಯಿಸ-ಮತ್ತೊಂದು ಪ್ರಾಣಿಯನ್ನು ತಿಂದು ಜೀವಿಸುವ ಜಂತುವನ್ನೆಲ್ಲಾ ನೀನು ಕೊಲ್ಲುತಾ ಬಂದರೆ, ಲೋಕದಲ್ಲಿ ಅನೇಕ ಜಂತುಗಳು ಸತ್ತು ಹೋಗುವವು. ಮದನ-ಗುಬ್ಬಿಯು ಇಂಥಾ ಕ್ರೂರಕೃತ್ಯವನ್ನು ಎಂದಿಗೂ ಮಾಡುವುದಿಲ್ಲ.