ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಸುಮತಿ ಮದನಕುಮಾರರ ಚರಿತ್ರೆ ೧೯ ಜೋಯಿಸ-ಮಾತಿಗೆ ಪ್ರತಿಮಾತನ್ನು ಈಗ ನಾನು ಹೇಳುವು ದಿಲ್ಲ. ಅದಕ್ಕೆ ಸಮಯವಿದೆ. ಜೋಯಿಸನು ಈ ಪ್ರಕಾರ ಹೇಳಿ, ಮದನನನ್ನು ಸಂಗಡ ಕರೆದುಕೊಂಡು ಬಂದು ಅವರೇ ಹೊಲದ ಸವಿಾಪಕ್ಕೆ ಹೋದನು. ಅಲ್ಲಿ ಗುಬ್ಬಿಗಳು ಹೆಚ್ಚಾಗಿ ಹಾರಿಯಾಡುತಿದ್ದವು. ಒಂದು ಗುಬ್ಬಿ ಯು ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡಿತ್ತು, ಅದನ್ನು ಮದನನಿಗೆ ತೋರಿಸಿ ಜೋಯಿಸ ಹೇಳುವುದೇನೆಂದರೆ :- ಜೋಯಿಸ ಆ ಗುಬ್ಬಿಯ ಬಾಯಿಯಲ್ಲಿ ಇರುವುದೇನು, ಬಲ್ಲೆ ಯ ? ಮದನ ಅವರೇ ಹುಳುವಿನಹಾಗೆ ಕಾಣುತಿದೆ. ಜೋಯಿಸ-ಆ ಹುಳುವು ಗುಬ್ಬಿ ಕೈಗೆ ಸಿಕ್ಕಿ ಪಡುತಿರುವ ಕಷ್ಟವನ್ನು ಗುಬ್ಬಿ ಬಲ್ಲುದೆ ? ಮದನ-ಅರಿಯದು. ಜೋಯಿಸ-ಬುದ್ಧಿಶಕ್ತಿಯುಳ್ಳ ಮನುಷ್ಯನು ಕೆಟ್ಟದೆಂದು ತಿಳಿ ದಿರತಕ್ಕೆ ಜ್ಞಾನವು ಬುದ್ಧಿಶಕ್ತಿಯಿಲ್ಲದ ಇತರ ಜಂತುಗಳಿಗೆ ಎಲ್ಲಿ ಬಂದೀತು ? ಹೊಟ್ಟೆ ಗೋಸ್ಕರ ದನಗಳು ಹುಲ್ಲನ್ನು ಹೇಗೆ ತಿನ್ನು ನವೋ, ಗುಬ್ಬಿ ಯೂ ಹಾಗೆ ಹುಳುವನ್ನು ತಿನ್ನು ವುದು. ಮದನ - ಹಾಗಾದರೆ, ನನ್ನ ಗುಬ್ಬಿಯನ್ನು ಕಚ್ಚಿ ಹಾಕಿದ ಬೆಕ್ಕಿಗೆ ತಾನು ಮಾಡುವ ಕೆಲಸ ಅಪರಾಧವೆಂಬ ತಿಳಿವಳಿಕೆ ಇರಲಿಲ್ಲ. ಜೋಯಿಸ-ಈ ಹುಳುವನ್ನು ಕಚ್ಚಿದ ಗುಬ್ಬಿಗೆ ತನ್ನ ಕೆಲಸದ ಕೆಟ್ಟ ತನ ಹೇಗೆ ಗೊತ್ತಿಲ್ಲವೋ, ಹಾಗೆಯೇ ಆ ಬೆಕ್ಕಿಗೂ ತನ್ನ ಕೆಟ್ಟತನ ಗೊತ್ತಿರಲಿಲ್ಲ. ನಿನ್ನ ಗುಬ್ಬಿ ಯಲ್ಲಿ ನಿನಗಿದ್ದ ಪ್ರೇಮವನ್ನು ಅದು ಅರಿ ಯದು, ಆದ್ದರಿಂದ ಆ ಗುಬ್ಬಿಯನ್ನು ಕೊಂದಾಗ ನಿನಗೆ ಕೇಡನ್ನು ಮಾಡಬೇಕೆಂದು ಅದು ಮನಸ್ಸಿನಲ್ಲಿ ಮಾಡಿಕೊಂಡಿರಲಿಲ್ಲ. ಮದನ-ನಾನು ಇನ್ನೊಂದು ಪಕ್ಷಿಯನ್ನು ಸಾಕಿದರೂ ಈ ಬೆಕ್ಕು ಹೀಗೆಯೇ ಮಾಡೀತು. ಜೋಯಿಸ-ಬೆಕ್ಕು ಹಾಗೆ ಕೊಲ್ಲದಂತೆ ತಪ್ಪಿಸಬಹುದು.