ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐ೪೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ಅದು ಹೇಗೆ ತಪ್ಪಿಸುವುದು, ನನಗೆ ಅದನ್ನು ಹೇಳಿ ಕೊಡಿ. ಜೋಯಿಸ-ಅಗತ್ಯವಾಗಿ ಆಗಲಿ, ಒಂದು ಪ್ರಾಣಿಯನ್ನು ಕೊಲ್ಲುವುದಕ್ಕಿಂತಲೂ ಅದರ ತಪ್ಪನ್ನು ತಿದ್ದುವುದು ಒಳ್ಳೇದು. ಈ ಬೆಕ್ಕನ್ನು ಮರಿಯಾಗಿದ್ದಾಗಿನಿಂದಾ ನಾನು ಸಾಕಿದೆ. ಇದರ ಸ್ವಭಾವ ಒಳ್ಳೇದು, ಊಟದ ಹೊತ್ತಿನಲ್ಲಿ ಬಂದು ಸುಮ್ಮನೇ ಕೂತುಕೊಳ್ಳುವುದು. ಎಲೆಗೆ ಬಾಯಿಹಾಕುವುದಿಲ್ಲ. ನಾವು ಹಾಕಿದ್ದನ್ನು ತಿಂದುಕೊಂಡು ಹೋಗುವುದು. ಹೀಗೆ ಈ ಸಂಭಾಷಣೆ ಇಲ್ಲಿಗೆ ನಿಂತಿತು, ಕೆಲವು ದಿವಸ ಕಳೆಯಿತು. ಅದು ಗಿಡಸೀಮೆಯಾದ್ದರಿಂದ, ಅನೇಕ ಪಕ್ಷಿಗಳು ವಿಶೇಷವಾಗಿ ಸಂಚರಿಸುತಿದ್ದವು. ಜೋಯಿಸನು ಒಂದು ದಿನ ಒ೦ದು ಮೈನವನ್ನು ಹಿಡಿದು ಒಂದು ಕಬ್ಬಿಣದ ಪಂಜರದಲ್ಲಿ ಕೂಡಿದನು, ಆ ಪಂಜರದ ಕದದ ಕಡ್ಡಿಗಳನ್ನು ಬೆಂಕಿಯಲ್ಲಿ ಚೆನ್ನಾಗಿ ಕಾಸಿ, ಆ ಕದವನ್ನು ಪಂಜ ರದ ಬಾಗಿಲಿಗೆ ಎದುರಾಗಿ ಇಟ್ಟು, ಬೆಕ್ಕನ್ನು ಕರೆದು ಅಲ್ಲಿ ಬಿಟ್ಟು ಅಲ್ಲಿ 'ಯಾರೂ ಇಲ್ಲದಂತೆ ಮರೆಯಾಗಿ ನಿಂತುಕೊಂಡನು, ಆ ಮಾರ್ಜಾಲವು ಸಂಜರದೊಳಗಿನ ಮೈನವನ್ನು ಹಿಡಿದು ಕೊಲ್ಲಬೇಕೆಂದು ಬಾಗಿಲ ಮೇಲೆ ಹಾರಿತು, ಕಾದಿದ್ದ ಕಬ್ಬಿಣದ ಕಂಬಿಗಳು ತಗಲಿ ಅದರ ಮೈಯೂ ಮೂತಿಯೂ ಸುಟ್ಟು ಹೋದವು. ಮತ್ತೆ ನೆಗೆಯಿತು ; ಮತ್ತೆ ಹೀಗೆಯೇ ಸುಟ್ಟು ಹೋಯಿತು, ಹೀಗೆ ೪-೫ ಸಾರಿ ಹಾರಿ ಮೈಯ ನ್ನೆಲ್ಲಾ ಸುಟ್ಟು ಕೊಂಡು ಅರಚಿಕೊಳ್ಳು ತಾ ಮೈನದ ಗೋಜಿಗೆ ಪುನಃ ಹೋಗದೆ, ಬೆಕ್ಕು ಹೊರಟುಹೋಯಿತು. ಅಂದಿನಿಂದ ಬೆಕ್ಕು ಯಾವ ಹಕ್ಕಿಯನ್ನೂ ಹಿಡಿಯುವುದಕ್ಕೆ ಹೋಗುತಿರಲಿಲ್ಲ.

  • ಆಗ ಬೇಸಗೆ ಮೊದಲಾಗುತಿತ್ತು, ಮೇವುಸಿಕ್ಕುವುದು ಕಷ್ಟ ವಾಗಿತ್ತು, ಒಂದಾನೊಂದು ದಿನ ರಾಮಜೋಯಿಸನೂ ಮದನನೂ ಹೊಲದ ಕಡೆಗೆ ಹೋದರು. ಅಲ್ಲಿ ಸುಮತಿ ಮದನರಿಬ್ಬರೂ ಹಾಕಿದ್ದ ಪೈರನ್ನು ಮೊಲಗಳು ಬಂದು ಮೇದು ಹಾಳುಮಾಡುತಿದ್ದವು, ಅದನ್ನು ಕಂಡು ಮದನನು-ಉಪಾಧ್ಯಾಯರೆ, ನೋಡಿದಿರ ? ನಾನೂ ಸುಮತಿ