ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಇಬ್ಬರೂ ಹೋದ ಕೂಡಲೆ, ಆ ಹಕ್ಕಿಯ ಹಿಂಡು ಪಢನೆ ಮೇಲಕ್ಕೆ ಹಾರಿತು, ಮದನನು ಪಂತರೆ, ಯಾಕೆ ಈ ಹಕ್ಕಿಗಳು ಹಾರಿಹೋಗು ತಿವೆ ? ಎಂದು ಕೇಳಿದನು, ಅದಕ್ಕೆ ಜೋಯಿಸನು- ಇವುಗಳಿಗೆ ಮಾಘದ ಹಕ್ಕಿ ಎಂದು ಹೆಸರು, ಬೇಸಗೆಯ ಹೊಡೆತದಿಂದ ಎಲ್ಲೆ ಲ್ಲಿಯೂ ಮೇವು ಸಿಕ್ಕದೇ ಹೋದಕಾರಣ ಇಲ್ಲಿ ಬಂದು ಕಾಳನ್ನು ತಿಂದು ಕೊಂಡು ಹೋಗುತಿವೆ, ಎಂದು ಹೇಳಿದನು. - ಮದನ-ಈ ಬೇಸಗೆ ಯಾಕೆ ಬರಬೇಕು ? ಈ ಕಾಲದಲ್ಲಿ ಎಲ್ಲಿಯೂ ಪ್ರಾಣಿಗಳಿಗೆ ಮೇವು ದೊರೆಯುವುದಿಲ್ಲ. ಈ ಕಾಲಕ್ಕಿಂತಲೂ ಹಿಮಕಾಲ ಉತ್ತಮ. ಜೋಯಿಸ-ಈ ದೇಶದಲ್ಲಿ ಶಖೆ ಹೆಚ್ಚಾದ್ದರಿಂದ ಹಾಗೆ ತೋರು ವುದು, ಬೇರೆ ದೇಶದಲ್ಲಿ ಚಳಿ ಹೆಚ್ಚಾಗಿರುವುದು, ಅಂಥಾ ಕಡೆ ಬರೀ ಬೇಸಗೆಯೇ ಇದ್ದರೆ ಸಾಕು ಎಂದು ಅಪೇಕ್ಷಿಸುವರು. ಮದನ- ಹಾಗಾದರೆ ವಿಶೇಷ ಶಖೆಯೂ ಇಲ್ಲದೆ, ವಿಶೇಷ ಚಳಿಯೂ ಇಲ್ಲದೆ ಸಮಧಾತುವಾದ ದೇಶದಲ್ಲಿರಬೇಕು. ಜೋಯಿಸ-ಅಂಥಾ ದೇಶ ಸಿಕ್ಕುವುದು ಕಷ್ಟ, ಸಿಕ್ಕಿದರೂ ಅದರ ವಿಸ್ತಾರ ಕಡಮೆ. ಮದನ-ಅಂಥಾ ದೇಶಕ್ಕೆ ಇತರ ಕಡೆಯಿಂದ ಜನಗಳೆಲ್ಲರೂ ಹೋಗಿ ಅಲ್ಲಿಯೇ ವಾಸಮಾಡಿಕೊಂಡಿರಬಹುದು, ಹಾಗಾದರೆ ಆ ದೇಶ ದಲ್ಲಿ ಸ್ವಲ್ಪವೂ ಸಿಕ್ಕುವುದಿಲ್ಲ. ಜೋಯಿಸ-ಈ ಮಾತಬಿಡು, ಎಂಥಾ ಕೆಟ್ಟ ದೇಶವಾಗಲಿ, ಅಲ್ಲಿನ ಜನರಿಗೆ ಆ ದೇಶದಲ್ಲಿಯೇ ಅಭಿಮಾನವಿದ್ದೀತೇ ಹೊರತು ಮತ್ತೆ ಬೇರೆ ಇಲ್ಲ. ಉತ್ತರ ಪ್ರಾಂತದಲ್ಲಿ ಕೆಲವು ದೇಶಗಳಿವೆ. ಅಲ್ಲಿ ಚಳಿಯಿಂದ ನೀರೆಲ್ಲ ಗಡ್ಡೆ ಯಾಗುವುದು. ಭೂಮಿಯನ್ನು ಉಳು ವುದೂ ಇಲ್ಲ, ಬಿತ್ತುವುದೂ ಇಲ್ಲ, ಅಲ್ಲಿ ಸಸ್ಯವರ್ಗ ಬೆಳೆಯುವುದು ಕಷ್ಟ, ಹೊಟ್ಟೆ ಗಿಲ್ಲದೆ ಒಂದು ಬಗೆ ಪಾಸೆಯನ್ನು ಜನರು ತಿಂದು ಜೀವಿಸುವರು. ಈ ಪಾಸೆಯು ಭೂಮಿಯ ಮೇಲೆ ಸಿಕ್ಕುವುದು. ಅದರ ಮೇಲೆ ರಾಸಿ ರಾಸಿಯಾಗಿ ಹಿಮದಗಡ್ಡೆ ಬಿದ್ದಿರುವುದು, ಆ ಮಂಜಿನ