ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩ ೧೧] ಸುಮತಿ ಮದನಕುಮಾರರ ಚರಿತ್ರೆ ಗಡ್ಡೆ ರಾಸಿಗಳನ್ನು ಆ ದೇಶದಲ್ಲಿ ಸಿಕ್ಕುವ ಒಂದು ಬಗೆ ಜಿಂಕೆಯು ಕಾಲಲ್ಲಿ ಕೆದಕುವುದು, ಅದರ ಕೆಳಗೆ ಸಿಕ್ಕುವ ಪಾಸೆಯನ್ನು ತಿನ್ನು ವುದು, ಈ ಜಿಂಕೆಯ ಹಾಲನ್ನು ಜನರು ಉಪಯೋಗಿಸುವರು. ಹಿಮ ಕಾಲದಲ್ಲಿ ಕೊಡಲಿಯಿಂದ ಹೊಡೆದರೂ ಒಡೆಯದ ಹಾಗೆ ಆ ಜಿಂಕೆಯ ಹಾಲು ಗಟ್ಟಿಯಾಗುವುದು, ಜನರು ಮರವನ್ನು ನೆಲದಲ್ಲಿ ನೆಟ್ಟು ಮನೆಯನ್ನು ಮಾಡಿಕೊಳ್ಳುವರು. ಆ ಜನರು ಅತ್ಯಂತ ಬಡವರು. ಆ ಜಿಂಕೆಯ ಹಾಲೂ ಅದರ ಮಾಂಸವೂ ಕರಡೀಮಾಂಸವೂ ಜನರ ಆಹಾರವಾಗಿವೆ, ಆ ಕರಡೀ ಮಾಂಸ ಒಂದನ್ನು ಮಾತ್ರ ಬೇಯಿಸುವರು. ಇದನ್ನು ಅಡತಕ್ಕದ್ದು ವಿಶೇಷ ದಿವಸಗಳಲ್ಲಿಯೇ ನೆಲದಮೇಲೆ ಮಂಜಿನ ಗಡ್ಡೆ ಬಿದ್ದು ನಡೆಯುವುದಕ್ಕೆ ಆಗದೇ ಇರುವುದು, ಆದ್ದರಿಂದ ಚಕ್ರವಿಲ್ಲದ ಗಾಡಿಯನ್ನು ಮಾಡಿ ಆ ಜಿಂಕೆಯನ್ನು ಕಟ್ಟಿ ಅದರಲ್ಲಿ ಕೂತು ಹೊರಡು ವರು, ಆ ಜನರ ಹತ್ತಿರ ಯಾವ ಹಣಕಾಸೂ ಇಲ್ಲ, ಆದರೂ ಸ್ವಭಾವ ದಲ್ಲಿ ಒಳ್ಳೆಯವರು, ಪರದೇಶದವರು ಬಂದರೆ ಅವರನ್ನು ಉಪಚರಿ ಸುವರು. ಮದನ-ಇಷ್ಟು ಕಷ್ಟ ಪಟ್ಟು ಕೊಂಡು ಆ ದೇಶದಲ್ಲಿ ಜನರು ಯಾಕೆ ಇದಾರೆ ? ಜೋಯಿಸ-ಆ ದೇಶದಲ್ಲಿ ಮೊದಲಿನಿಂದಲೂ ಅವರು ಇದ್ದು ರೂಢಿಯಾಗಿದೆ, ಎಷ್ಟು ಕಷ್ಟ ವಾದರೂ ಸರಿಯೆ, ಸಹಿಸಿಕೊಂಡಾರೇ ಹೊರತು ಬೇರೆ ದೇಶಕ್ಕೆ ಹೋಗುವುದಿಲ್ಲ. ಮದನ-ಅವರು ಆ ಕಷ್ಟ ದಿಂದ ಸತ್ತು ಹೋಗುವುದಿಲ್ಲವೆ ? ಜೋಯಿಸ-ಸುಮ್ಮನೆ ತಿಂದು ಮೈ ಬೆಳಸಿಕೊಂಡು ಯಾವ ಕೆಲಸವನ್ನೂ ಮಾಡದೇ ಇರತಕ್ಕೆ ಜನರು ಯಾವ ಜಾಡ್ಯವೂ ಇಲ್ಲದೆ ಸೌಖ್ಯವಾಗಿರುತ್ತಾರೆಯೆ ? - ಮದನ-ಯಾವಾಗಲೂ ಹಾಗೆ ಸೌಖ್ಯವಾಗಿರುವುದಿಲ್ಲ. - ಜೋಯಿಸ-ಸಾಕು ಸಾಲದು ಎನ್ನು ವ ಹಾಗೆ ಹೊಟ್ಟೆಗೆ ತಿಂದು ಜೀವಿಸತಕ್ಕ ಜನರು ಎಷ್ಟು ಕಷ್ಟ ವನ್ನಾ ದರೂ ಸಹಿಸತಕ್ಕವರಾಗಿರುವು ದನ್ನು ನೀನು ಬಲ್ಲೆ ಯ ? ಈ ವಿಷಯದಲ್ಲಿ ಒಂದು ಕಥೆಯನ್ನು ಹೇಳು ತೇನೆ, ಕೇಳು, ಹೀಗೆಂದು ಜೋಯಿಸನು ಕಥೆಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು.