ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ನೆ ಅಧ್ಯಾಯ ಮಾನಸಪುರವೆಂಬ ಪಟ್ಟಣದಲ್ಲಿ ಲಂಬೋದರನೆಂಬ ಒಬ್ಬ ಧನು ವಂತ ಇದ್ದನು. ಇವನು ಯಾವಾಗಲೂ ಆಹಾರದ ಮೇಲೆಯೇ ಜ್ಞಾನವನ್ನು ಇಟ್ಟು ಕೊಂಡಿದ್ದನು. ಇವನು ಹಾಸಿಗೆಯಿಂದ ಎದ್ದ ಕೂಡಲೆ ಹುರಿಹಿಟ್ಟು, ಅವಲಕ್ಕಿ, ಪುಳ್ಳಂಗಾಯಿ ಉ೦ಡೆ ಇವುಗಳನ್ನೂ ಇನ್ನೂ ಇತರ ತಿಂಡಿಯನ್ನೂ ತಿಂದು ಹಾಸಿಗೆಯನ್ನು ಬಿಟ್ಟು ಮೇಲಕ್ಕೆ ಏಳುವುದೇ ಹೊರತು ಎದ್ದ ಮೇಲೆ ತಿಂಡಿಯನ್ನು ತಿಂದವನೇ ಅಲ್ಲ. ಇದು. ಆದ ತರುವಾಯ ಬಗೆ ಬಗೇ ಷರಬತ್ತುಗಳನ್ನು ಬಟ್ಟಲುಗಳಿಗೆ ಬಗ್ಗಿಸಿ ಬಗ್ಗಿಸಿ ಆಳುಗಳು ತಂದುಕೊಡುತಿದ್ದರು. ಇದನ್ನೆಲ್ಲಾ ಹಿಂಗಿದ ತರು ವಾಯ ಲಂಬೋದರನು ಅಡಿಗೇ ದಫೇದಾರನನ್ನು ಕರೆಯಿಸಿ, ಬಗೆಬಗೇ ಅಡಿಗೆಯನ್ನು ಈ ಪ್ರಕಾರ ಮಾಡೆಂದು ಅವನಿಗೆ ಆಜ್ಞಾಪಿಸುತಿದ್ದನು. ಆ ಅಡಿಗೆಯವರು ಐದು ಆರು ಜನರಿದ್ದರು, ಒಬ್ಬ ಸೀ ಪದಾರ್ಥ ನನ್ನೆ ಮಾಡುವುದು ; ಇನ್ನೊಬ್ಬ ಸಾರು, ಹುಳಿಯನ್ನೇ ಮಾಡು ವುದು ; ಮತ್ತೊಬ್ಬ ಕರಿಯುವ ಕೆಲಸವನ್ನು ನೋಡಿಕೊಳ್ಳು ವುದು ; ನಾಲ್ಕನೆಯವನು ಅನ್ನ ವನ್ನು ಮಾಡುವುದು ; ಐದನೆಯವನು ಕೋಸುಂ ಬರಿಗಳನ್ನು ಮಾಡುವುದು, ಈ ಪ್ರಕಾರ ಒಬ್ಬೊಬ್ಬರು ಒಂದೊಂದು ಬಗೆಯನ್ನು ಮಾಡುವುದಕ್ಕೆ ನೇಮಕವಾಗಿದ್ದರು. ಯಜಮಾನನು ಹತ್ತುಗಳಿಗೆಯೊಳಗಾಗಿ ಊಟಕ್ಕೆ ಕೂತರೆ, ಹದಿನೈದು ಇಪ್ಪತ್ತು ಜನ ಒಬ್ಬನಿಗೆ ಬಡಿಸುವುದಕ್ಕೆ ಹೊರಡುತಿದ್ದರು. ಎಂಥಾ ಪದಾರ್ಥ ವನ್ನು ಮಾಡಿ ಬಡಿಸಿದರೂ ಇವನಿಗೆ ತೃಪ್ತಿಯಾಗುತಿರಲಿಲ್ಲ. ಹೀಗೆ ನಾಲ್ಕು ಗಳಿಗೆ ಕೂತು ತಿಂಡಿಯನ್ನು ತಿಂದು, ಕೂತಕಡೆಯಲ್ಲಿಯೇ ಕೈಯನ್ನು ತೊಳೆದುಕೊಳ್ಳು ತಿದ್ದನು, ಇವನ ಕೈಗೆ ನೀರ ಹಾಕುವ ನೊಬ್ಬ, ಆ ಕೈಯನ್ನೂ ಮೂತಿಯನ್ನೂ ಉಜ್ಜು ವನೊಬ್ಬ, ತೊಳೆದ. ಮೇಲೆ ಚೌಕದಲ್ಲಿ ಒರಸುವನೊಬ್ಬ, ಈ ಪ್ರಕಾರ ಉಪಚಾರವಾಗು ತಿತ್ತು. ಊಟವಾದ ಸ್ಥಳದಿಂದ ಇವನನ್ನು ನಾಲ್ಕು ಜನ ಕೈ ಹಿಡಿದು. ಎತ್ತುತಿದ್ದರು. ಅವರ ಸಹಾಯದಿಂದ ಮೆಲ್ಲಗೆ ಮೇಲಕ್ಕೆ ಎದ್ದು