ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪1 ಸುಮತಿ ಮದನಕುಮಾರ [ಅಧ್ಯಾಯ ವಾಯು ಹೆಚ್ಚಿ ಕೈ ಕಾಲುಗಳಲ್ಲಿ ಒಂದು ಬಗೆ ಒಡೆತ ಹುಟ್ಟಿ ತು. ಈ ರೀತಿಯಲ್ಲಿ ರೋಗದಿಂದ ಪೀಡಿತನಾಗಿದ್ದ ಲಂಬೋದರನು ಆ ಸ್ಥಳದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದ ಒಬ್ಬ ವೈದ್ಯನನ್ನು ಕರೆಯಿಸಿ --ಪಂಡಿತರೆ, ನನಗೆ ಹೀಗೆ ಜಾಡ್ಯವುಂಟಾಗಿದೆ. ತಾವು ಹೊರತು ಗುಣಮಾಡತಕ್ಕವರು ಇನ್ನು ಯಾರೂ ಇಲ್ಲ, ಎಂದನು, ವೈದ್ಯ - ಜಾಡ್ಯವೇನೊ ಬಲವಾಗಿದೆ, ಆದರೆ ತಮ್ಮ ಆಹಾರ ಕ್ರಮದಿಂದ ತಾವು ರೋಗಕ್ಕೆ ಸಹಾಯ ಮಾಡುತೀರೊ, ಹೇಗೆ ? ಲಂಬೋದರ- ಪಂಡಿತರೆ, ಇಲ್ಲ, ಆಹಾರದಲ್ಲಿ ನಾನು ಎಷ್ಟೊ ಜಾಗರೂಕನಾಗಿದೇನೆ. ಈ ಹಾಳ ಅಡಿಗೆಯವರು ನನಗೆ ನಿತ್ಯವೂ ಅರೆಹೊಟ್ಟೆಯನ್ನೇ ಹಾಕುತ್ತಾರೆ, ನಾನು ಹೇಳುವುದೇ ಒಂದು, ಇವರು ಮಾಡುವುದೇ ಒಂದು, ಹೀಗೆ ಆಗಿದೆ. - ವೈದ್ಯ- ತಾವು ನಿದ್ರೆಯನ್ನು ಹೆಚ್ಚಾಗಿ ಮಾಡು ತೀರ ? ಲಂಬೋದರ- ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ, ರಾತ್ರೆ, ಯಾವಾಗಲಾದರೂ ಸ್ವಲ್ಪ ನಿದ್ರೆ ಬಂದರೆ ಸಾಕೆಂದು ಹಾಸಿಗೇ। ಮೇಲೆಯೇ ಮಲಗಿರುತೇನೆ, ಒಂದುಸಾರಿಯೂ ನಿದ್ರೆ ಬರುವುದಿಲ್ಲ. ವೈದ್ಯ- ನೀವು ಬೆಳಗ್ಗೆ ಎದ್ದು ಸಂಚಾರಮಾಡುವುದುಂಟೆ ? ಲಂಬೋದರ- ನಾನು ಚಳಿಯಲ್ಲಿ ಎದ್ದರೆ, ನನ್ನ ಮೈಗೆ ಆಗು ವುದಿಲ್ಲ. ಐದು ಗಳಿಗೆಗೆ ಮುಂಚೆ ನಾನು ಮುಸುಕನ್ನೇ ತೆಗೆಯುವುದಿಲ್ಲ. ಅಂತೂ ನಾನು ಎಷ್ಟು ಜಾಗ್ರತೆಯಾಗಿ ಎದ್ದರೂ, ಹೊಟ್ಟೆ ಯಲ್ಲಿ ಏನೋ ಉರಿಯುತ್ತಲೇ ಇರುವುದು, ತೇಗು ಬರುವುದು ಗೊತ್ತೇ ಇಲ್ಲ. ವಾಯು ಸಡಿಲುವುದಂತೂ ಎಣಿಸುವುದಕ್ಕಾಗುವುದೇ ಇಲ್ಲ. ವೈದ್ಯ-ಜಾಡ್ಯವೇನೋ ಸ್ವಭಾವದಲ್ಲಿ ಕೆಟ್ಟ ದ್ದಾಗಿ ತೋರುತ್ತಿದೆ. ಲಂಬೋದರ-ಅಫೀಮನ್ನು ತಿಂದರೆ ನಿದ್ರೆ ಬರುವುದೆಂದು ಒಬ್ಬರು ಹೇಳಿದರು. ನಾನು ಅದೇ ಪ್ರಕಾರ ಸಾಧಿಸುತಿದೇನೆ. ನಿಂಬೇಕಾಯಿ ಗಾತ್ರದವರೆಗೂ ಅಫೀಮನ್ನು ನಿತ್ಯವೂ ನುಂಗುತಿದೇನೆ, ನಿದ್ರೆ ಬೇರೆ ಬರುವುದಿಲ್ಲ. ಮತ್ತಾಗಿ ಬಿದ್ದಿರುತೇನೆ. ಮಲವಿಸರ್ಜನೆ ಸರಿಯಾಗಿ ಆಗುವುದೇ ಇಲ್ಲ,