ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧೪ ಹೇಳಿದ್ದರಿಂದ ಈ ಮಾತಿಗೆ ಒಪ್ಪಿಕೊಳ್ಳುತೇನೆ, ಆದರೆ ನನ್ನ ಉಪ ಚಾರಕ್ಕಾಗಿ ಯಾರೂ ಇರಕೂಡದು ಎಂದು ಹೇಳಿದ ಮಾತು ನಿಮ್ಮ 'ಚಿಕಿತ್ಸೆಗೆ ವಿರೋಧವಾಗಿದೆ. ಔಷಧವನ್ನು ತೆಗೆದುಕೊಂಡರೆ, ನನ್ನ ಆರೈಕೆಗೆ ಯಾರೂ ಇಲ್ಲದೆ ಪಥ್ಯ ಕೆಟ್ಟು ಹೋದೀತು. ವೈದ್ಯ-ನಾನು ಚಿಕಿತ್ಸೆಯನ್ನು ಮಾಡಿ ವಾಸಿಮಾಡುವ ಭಾರ ವನ್ನು ವಹಿಸಿದ ಮೇಲೆ, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿ ಕೊಳ್ಳುವ ಕೆಲಸವೂ ನನ್ನದಾಗಿದೆ. ಇಷ್ಟವಿದ್ದರೆ, ಔಷಧವನ್ನು ತೆಗೆದು ಕೊಳ್ಳಿ, ಇಲ್ಲದಿದ್ದರೆ ಊರಿಗೆ ಹೊರಡಿ, ತಮ್ಮ ದಾಕ್ಷಿಣ್ಯಕ್ಕೋಸ್ಕರ ಚಿಕಿತ್ಸೆ ಕ್ರಮವನ್ನು ಬಿಟ್ಟು ಬಿಟ್ಟು ನನ್ನ ಹೆಸರನ್ನು ಕೆಡಿಸಿಕೊಳ್ಳಲಾರೆ. ಜಾಡ್ಯವು ಪ್ರಬಲವಾಗಿದೆ. ಆದರೂ ನಿಮ್ಮ ಮುಷ್ಕರವು ಅದನ್ನು ವೃದ್ಧಿ ಮಾಡುತಿದೆ. ಲಂಬೋದರ-ತಮ್ಮ ಚಿಕಿತ್ಸೆಯಲ್ಲಿ ನನಗೆ ಸೇನೆ ನಂಬಿಕೆವುಂಟು. ಆದಕಾರಣ ತಾವು ಹೇಳಿದಂತೆಯೇ ಆಗಲಿ, ಹೀಗೆಂದು ಹೇಳಿ ತನ್ನ ಚಾ ಕರರನ್ನೆಲ್ಲಾ ಲಂಬೋದರ ಊರಿಗೆ ಕಳುಹಿಸಿ ಬಿಟ್ಟನು. ವೈದ್ಯ- ಈ ದಿನ ನಿಮ್ಮ ದೇಹಸ್ಥಿತಿ ಹೇಗಿದೆ ? ಲಂಬೋದರ-ಇಷ್ಟು ದೂರ ಪ್ರಯಾಣಮಾಡಿ ಬಂದದರಿಂದ ವಿಗಡವಾಗಬಹುದು ಎಂದು ತಿಳಿದು ಇದ್ದೆ, ಆದರೆ ಹಾಗಿಲ್ಲ, ಎಂದಿ ಗಿಂತಲೂ ಈ ದಿನ ಹಸಿವು ಹೆಚ್ಚಾಗಿದೆ. ಆದ್ದರಿಂದ ದಯಮಾಡಿ ಜಾಗ್ರತೆಯಲ್ಲಿ ನನಗೆ ಅನ್ನವನ್ನು ಹಾಕಿಸಬೇಕು. ವೈದ್ಯ-ಸ್ವಾಮಿ, ಈ ರಾತ್ರಿ ಎಂಟು ಗಂಟೆಗೆ ಎಡೆ ಸಿದ್ದವಾಗು ವುದು, ಈ ಮಧ್ಯೆ ನಾನು ಔಷಧ ಕೊಡತಕ್ಕೆ ರೋಗಿಗಳನ್ನು ಹೋಗಿ ನೋಡಿಕೊಂಡು ಬರುತೇನೆ. ಹೀಗೆ ಹೇಳಿ, ಶಿರೋಮಣಿ ಪಂಡಿತನು ಹೊರಕ್ಕೆ ಹೊರಟು ಹೋದನು. ಈ ಮಧ್ಯೆ ಲಂಬೋದರನು ತನ್ನ ಮನಸ್ಸಿನಲ್ಲಿ ಈಗಲೇ ನನಗೆ ಊಟದ ಹೊತ್ತು ಮಾರಿತು, ಇನ್ನೂ ಎರಡು ಗಂಟೆ ಕಾಯ ಬೇಕೆಂದು ಪಂಡಿತ ಹೇಳುತ್ತಾನೆ. ಆದ್ದರಿಂದ ಪ್ರಾಯಶಃ ಒಳ್ಳೆ ಅಡಿಗೆ ಯನ್ನೇ ಮಾಡಿಸಿಯಾನು, ನಾನು ಈ ಮನೆಗೆ ಬಂದಾಗ ಬಡಬಗ್ಗರಿಗೆ