ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ಸುಮತಿ ಮದನಕುಮಾರರ ಚರಿತ್ರ - [ಅಧ್ಯಾಯ ಎಷ್ಟೊ ಉಪಚಾರವನ್ನು ಮಾಡಿ ಬೇಕಾದ ತಿಂಡಿಯನ್ನು ಕೊಡುತಿದ್ದ; ನನ್ನ ೦ಥವನಿಗೆ ಏನು ಕಡಮೆ, ಪಂಚಭಕ್ಷವೇ ತಯಾರಾಗುತಿರ ಬಹುದು. ವೈದ್ಯನ ಅಡಿಗೆಯವನು ಬುದ್ಧಿಶಾಲಿಯಾಗಿಯೇ ಇರ ಬಹುದು, ಹೀಗೆಂದುಕೊಳ್ಳು ತಿದ್ದನು, ಹಸಿವು ಹೆಚ್ಚಾಯಿತು. ಕೋಪ ಬಂತು, ಮನೆಯಲ್ಲಿದ್ದ ಪರಿಚಾರಕನನ್ನು ಕರೆದು- ಪಂಡಿತರು ಈಗಲೇ. ಮನೆಗೆ ಬರಲಾರರು. ನನ್ನ ಊಟಕ್ಕೆ ಹೊತ್ತಾಯಿತು. ತಂದು ಬಡಿಸು, ಎಂದನು. ಪರಿಚಾರಕನು-- ಸ್ವಾಮಿ, ಪಂಡಿತರ ಅಪ್ಪಣೆಯಿಲ್ಲದೆ ರೋಗಿ ಗಳು ಹೇಳುವ ಮಾತನ್ನು ನಾವು ಕೇಳ ಕೂಡದು, ಎಂದನು. ಅದಕ್ಕೆ ಲಂಬೋದರನು ಇನ್ನೂ ಐದುಗಳಿಗೆ ಕಳೆಯಬೇಕಾಯಿತಲ್ಲಾ ! ಹೊತ್ತು ಹೋಗುವುದೇ ಇಲ್ಲ. ಬಹು ತಾಮಸವಾಗಿದೆ ಎಂದು ಹೇಳಿ ಕೊಳ್ಳುತಿದ್ದನು. ಹೇಳಿದ್ದ ಹೊತ್ತಿಗೆ ಸರಿಯಾಗಿ ವೈದ್ಯ ಮನೆಗೆಬಂದನು. ಮೇಲೆ ಎಲೆಯನ್ನು ಮುಚ್ಚಿ ಮುಚ್ಚಿ ಐದು ಆರು ಬೆಳ್ಳಿ ತಟ್ಟೆಗಳನ್ನು ತಂದಿ ಟ್ಟ ರು, ಮೇಲೆ ಮುಚ್ಚಿ ಒಂದು ಬೆಳ್ಳಿ ಪಂಚಪಾತ್ರೆಯನ್ನೂ ತಂದಿ ಟೈರು, ಲಂಬೋದರನಿಗೆ ಅನೇಕ ಭಕ್ಷ್ಯ ಭೋಜ್ಯಗಳು ಬಂದಿರಬಹುದು. ಹೊಟ್ಟೆ ಯನ್ನು ತುಂಬಿಕೊಳ್ಳೋಣವೆಂದು ಆಸೆ ಹುಟ್ಟಿತು. ಅವನು ಆ ತಟ್ಟೆಗೆ ಕೈ ಹಾಕುವ ಸಮಯದಲ್ಲಿ ಶಿರೋಮಣಿಯು-ಸ್ವಾಮಿ, ಬೇರೆ ಔಷಧವನ್ನು ಕೊಟ್ಟರೆ ನಿಮಗೆ ತಡೆಯುವುದಿಲ್ಲ. ನೀವು ತಿನ್ನುವ ಆಹಾರಕ್ಕೆ ಔಷಧವನ್ನು ಹಾಕಿದೆ. ಆದರೆ ನಿಮ್ಮ ರುಚಿಗೆ ಆ ಔಷಧ ತೋರಲಾರದು, ಔಷಧದ ವೇಗವು ಹೆಚ್ಚಾದ್ದರಿಂದ, ಹೆಚ್ಚಾಗಿ ತಿಂದರೆ ವಿರೋಧವಾದೀತು. ಆದಕಾರಣ ನೀವು ಆ ಹಾರವನ್ನು ಮಿತವಾಗಿಯೇ ತಿನ್ನ ಬೇಕು, ಎಂದು ಹೇಳಿ ತಟ್ಟೆಗಳ ಮೇಲಿದ್ದ ಎಲೆಯನ್ನು ತೆಗೆಯಿ. ಸಿದನು, ಒಂದರಲ್ಲಿ ಒಂದು ಹಿಡಿ ದ್ರಾಕ್ಷಿ, ಇನ್ನೊಂದರಲ್ಲಿ ಎರಡು ಕಿತ್ತಿಳೆಹಣ್ಣು, ಮತ್ತೊಂದರಲ್ಲಿ ನಾಲ್ಕು ಖರ್ಜೂರ, ಹೀಗೆ ನಾಲ್ಕು ಐದು ಬಗೆ ಹಣ್ಣು ಗಳನ್ನು ಇರಿಸಿದ್ದರು, ಪಂಚಪಾತ್ರೆಯಲ್ಲಿ ಬರೀ ನೀರು ಇತ್ತು. ಇದೆಲ್ಲವನ್ನೂ ನೋಡಿ ಲಂಬೋದರನಿಗೆ ವಿಶೇಷವಾಗಿ ಆಗ್ರಹ ಬಂತು. ಅವನು ವೈದ್ಯನನ್ನು ಕುರಿತು-ಏನಿರಯ್ಯ, ಇದೇಯೋ