ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಸುಮತಿ ಮದನಕುಮಾರರ ಚರಿತ್ರೆ ೧೫1 ನೀವು ನನಗೆ ಮಾಡಿಸಿರುವ ಭಕ್ಷ್ಯಭೋಜ್ಯಗಳು! ನನ್ನ ಐಶ್ವರ್ಯಕ್ಕೆ ಈ ದರಿದ್ರ ಆಹಾರವನ್ನು ತಿನ್ನಲೇ ? ಎಂದನು. ಪಂಡಿತನು ಸುಮ್ಮನಿರದೆ, ನಾನು ಬೇಕೆಂತಲೇ ಈ ತಿಂಡಿಯನ್ನು ಇಡಿಸಿದೇನೆ, ಇದಲ್ಲದೆ, ನಿಮಗೆ ಬೇಕಾದ ಪಕ್ವಾನ್ನಗಳನ್ನು ಬಡಿಸಿದರೆ, ಮಾರ್ಗಾಯಾಸದಿಂದ ದಣಿ ದಿರುವ ನಿಮಗೆ ಜ್ವರ ಬಂದೀತು, ಎಂದು ಹೇಳಿದನು. ಲಂಬೋದರನಿಗೆ ಇತರ ಮಾರ್ಗವೇನೂ ಇಲ್ಲದೆ ಹೋಯಿತು, ಆ ಹಂಣಗಳನ್ನು ತಿಂದು, ನೀರನ್ನು ಕುಡಿದು ಸಮ್ಮನ ಆದನು. ತಿಂಡಿಯನ್ನು ತಿಂದ ಕೂಡಲೆ ಮಲಗಿಕೊಂಡು ನಿದ್ರೆ ಮಾಡುವ ಅಭ್ಯಾಸವು ಇವನಿಗಿತ್ತು. ಆದರೆ ಶಿರೋಮಣಿ ಪಂಡಿತನು ಚಮತ್ಕಾರವಾದ ಮಾತುಗಳನ್ನಾ ಡುತಾ ನಾಲ್ಕು ಗಳಿಗೆವರೆಗೆ ಕೂರಿಸಿಕೊಂಡನು. ತರುವಾಯ ಒಂದು ಚಿಕ್ಕ ಮನೆಯಲ್ಲಿ ಹಾಸಿಗೆಯನ್ನು ಹಾಸಿ ಅಲ್ಲಿಗೆ ಲಂಬೋದರನನ್ನು ಒಬ್ಬ ಆಳು ಕರೆದುಕೊಂಡು ಹೋದನು. ಆ ಹಾಸಿಗೆಯ ಸ್ಥಿತಿಯನ್ನು ಏನು ಹೇಳೋಣ ! ಮಂಚವಿಲ್ಲ, ಮತ್ತೆ ಇಲ್ಲ, ಸಂದಿಸಂದಿಗೆ ಹಾಕಿಕೊಳ್ಳುವ ದಿಂಬುಗಳು ಮೊದಲೇ ಇಲ್ಲ. ಸೊಳ್ಳೇ ತೆರೆಯನ್ನು ಅಲ್ಲಿಗೆ ತರಲೇ ಇಲ್ಲ, ಆದರೆ ಅಲ್ಲಿದ್ದದೇನು ? ಒಂದು ಚಾಪೆಯನ್ನೂ ಅದರಮೇಲೆ ಒಂದು ಜಮಖಾನವನ್ನೂ ಹಾಸಿ ಒ೦ದು ತಲೆದಿಂಬನ್ನು ಇಟ್ಟಿದ್ದರು. ಇದನ್ನು ಕಂಡು ಲಂಬೋದರನಿಗೆ ಕೋಪ ಇನ್ನೂ ಹೆಚ್ಚಿತು. ಅವನು ಆಳಿನ ಮುಖವನ್ನು ದುರುಗುಟ್ಟಿ ಕೊಂಡು ನೋಡಿ ಏನೆಲಾ, ನನಗೆ ಇದೇನೆಲಾ ಹಾಸಿಗೆ ? ಸರಿಯಾದ ಹಾಸಿಗೆಯನ್ನು ತಂದು ಹಾಸು, ಎಂದು ಅಹಂಕಾರದಿಂದ ಗದರಿಸಿ ದನು. ಆಗ ಆ ಆಳು-ತಮ್ಮ ಹಾಸಿಗೇ ವಿಷಯದಲ್ಲಿ ಪಂಡಿತರು ನನಗೆ ಮಾಡಿದ ಅಪ್ಪಣೆಯನ್ನು ನಾನು ಸರಿಯಾಗಿಯೇ ತಿಳಿದು ಕೆಲಸ ಮಾಡಿದೇನೆ. ಅವರ ಮಾತನ್ನು ಮಾರಿ ನಿಮಗೆ ಆಗುವ ಚಿಕಿತ್ಸೆ ಯನ್ನು ಕೆಡಿಸಲಾರೆ, ಎಂದು ಹೇಳುತಾ ಆ ಚಿಕ್ಕ ಮನೆಯನ್ನು ಬಿಟ್ಟು ಹೊರಕ್ಕೆ ಹೋಗಿ, ಹೊರಗಡೇ ಬಾಗಿಲನ್ನು ಹಾಕಿಕೊಂಡನು. ಲಂಬೋ ದರನಿಗೆ ರೋಷ ಇದ್ದುದೂ ಹೆಚ್ಚಿ ವೈದ್ಯನ ಕೆಟ್ಟ ತನಕ್ಕೆ ಹೇಗೆ ಶಿಕ್ಷೆಯನ್ನು ಮಾಡಬೇಕೆಂದು ಯೋಚಿಸುತಿದ್ದನು. ಹಾಗೆಯೇ ನಿದ್ರೆ ಬಂತು.