ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಬೆಳಗಾಗುವ ತನಕಲೂ ಎಚ್ಚರವಾಗಲಿಲ್ಲ, ಪಂಡಿತನು ಪ್ರಾತಃಕಾಲ ದಲ್ಲಿ ಎದ್ದು ಲಂಬೋದರ ಮಲಗಿದ್ದ ಕೊಟಡಿಗೆ ಹೋಗಿ ವಿಶೇಷ ಮರ್ಯಾದೆಯಿಂದ ಅವನ ಶರೀರಸ್ಥಿತಿಯನ್ನು ವಿಚಾರಿಸಿದನು, ರಾತ್ರೆ ಒಳ್ಳೆ ನಿದ್ರೆ ಬಂದಿದ್ದ ಕಾರಣ ಇವನ ಸಿಡುಕೆಲ್ಲಾ ಕಡಮೆಯಾಗಿತ್ತು. ಪಂಡಿತನು ಮರ್ಯಾದೆಯಿಂದ ಆಡಿದ ಮಾತು ಕಳಲಿಹೋಗುತಿದ್ದ ಲಂಬೋದರನ ಆಗ್ರಹವೆಂಬ ಬೆಂಕಿಯನ್ನು ಚೆನ್ನಾಗಿ ಇದ್ದಿಲ ಮಾಡಿತು. ಲಂಬೋದರನು ಪಂಡಿತನಿಗೆ ಸರಿಯಾದ ಉತ್ತರವನ್ನು ಹೇಳಿ ದನು. ಆದರೂ ಹಾಸಿಗೆ, ಆಹಾರ ಉಪಚಾರ, ಇವುಗಳ ವಿಷಯದಲ್ಲಿ. ಇವನಿಗಿದ್ದ ಅಸಮಾಧಾನವನ್ನು ಮಾತ್ರ ಮರೆಮಾಚಲಿಲ್ಲ, ಆಗ ವೈದ್ಯನು-ನಾನು ಹೇಳಿದಹಾಗೆಲ್ಲಾ ತಾವು ಕೇಳಬೇಕೆಂದು ಮೊದಲೇ ನಿಮ್ಮಲ್ಲಿ ಕಟ್ಟು ಮಾಡಿಕೊಂಡಿದ್ದೆ, ತಮ್ಮ ಆರೋಗ್ಯ ಹೊರತು ನನಗೆ ಬೇರೆ ತಾತ್ಪರ್ಯವಿಲ್ಲ. ನಿಮ್ಮ ಹಾಸಿಗೆಗೂ ಸಹಿತ ಔಷಧವನ್ನು ಹಾಕಿಸಿ ದೇನೆ, ಈ ಔಷಧವನ್ನು ಮೆತ್ತೆಗೆ ಹಾಕುವುದಕ್ಕಾಗುವುದಿಲ್ಲ, ಆದ್ದ ರಿಂದ ಈ ಜಮಖಾನವನ್ನು ಹಾಕಿಸಿದೇನೆ, ಎಂದು ಹೇಳಿದನು. ಮಾರನೇದಿನ ಊಟಕ್ಕೆ ಸಿದ್ಧವಾಯಿತು ; ಒಂದು ಹಿಡಿ ಅನ್ನ ಒಂದು ಬಟ್ಟಲು ಪಾಯಸ, ಎರಡು ಕಿತ್ತಿಳೆಹಣ್ಣು , ಇಷ್ಟನ್ನೂ ತಂದು ಬಡಿಸಿ ದರು. ಲಂಬೋದರನ ಹೊಟ್ಟೆ ಯ ಒಂದು ಮೂಲೆಗೆ ಕೂಡ ಇದು ಸಾಕಾಗಲಿಲ್ಲ. ಆನೇ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂದ ಹಾಗಾ ಯಿತು. ಆದರೂ ಯತ್ನ ವಿಲ್ಲದೆ ಅದನ್ನೇ ತಿಂದು ಸುಮ್ಮನಾದನು. ಆ ಮೇಲೆ ಪಂಡಿತನು ಅವನನ್ನು ಒಂದು ಚಿಕ್ಕ ಮನೆಗೆ ಎತ್ತಿಸಿ ಕೊಂಡು ಹೋಗಿ ನಿಂತುಕೊಳ್ಳೆಂದು ಹೇಳಿದನು. ಲಂಬೋದರನು -. ಪಂಡಿತರೇ ಕಾಲೆಲ್ಲಾ ಊದಿದೆ, ಒಳಗೆ ನೋವಾಗುತಿದೆ. ನಿಂತು ಕೊಳ್ಳಲಾರೆ, ಎಂದು ಹೇಳಿದನು. ಇದಕ್ಕೆ ಪಂಡಿತನು-ಎರಡು ಕೈಯಲ್ಲಿಯೂ ಎರಡು ದೊಣ್ಣೆಗಳನ್ನು ಊರಿಕೊಂಡು ಸ್ವಲ್ಪ ಏಳಿ. ಬೇಕಾದರೆ ಗೋಡೆಯನ್ನು ಒರಗಿಕೊಳ್ಳಿ ಎನಲು, ರೋಗಿಯು ಬಹು ಪ್ರಯಾಸದಿಂದ ದೊಣ್ಣೆಯನ್ನು ಊರಿಕೊಂಡು ಎದ್ದು ನಿಂತುಕೊಂಡನು.