ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧84 (೧೨] ಸುಮತಿ ಮದನಕುಮಾರರ ಚರಿತ್ರೆ ಒಂದು ಕಾಲು ಇನ್ನೊಂದು ಕಾಲಿಗಿಂತ ಹೆಚ್ಚಾಗಿ ಬಾತಿದ್ದರಿಂದ, ಒಂಟಿ ಕಾಲಲ್ಲಿಯೇ ನಿಂತುಕೊಂಡನು. ದೊಣ್ಣೆ ಗಳೆರಡೂ ಊರೆಯಾದುವು. ಆಗ ಪಂಡಿತನು ಥಟ್ಟನೆ ಆ ಕೊಟಡಿಯನ್ನು ಬಿಟ್ಟು ಹೊರಕ್ಕೆ ಹೋಗಿ ಕದವನ್ನು ಮುಚ್ಚಿ ಕೊಂಡನು. ಆ ಕೊಟಡಿಯ ನೆಲವೆಲ್ಲಾ ದೊಡ್ಡ ಕಬ್ಬಿಣದ ತಗಡಾಗಿತ್ತು. ಮುಂಚಿತವಾಗಿಯೇ ಪಂಡಿತನು ಗುಟ್ಟಾಗಿ ಏರ್ಪಡಿಸಿದ್ದಂತೆ, ಅದರ ಕೆಳಗೆ ಬೆಂಕಿ ಹಾಕಿ ಉರಿಸುತಿದ್ದರು, ಆ ಕಬ್ಬಿ ಣದ ನೆಲವು ಚೆನ್ನಾಗಿ ಕಾಯಿತು. ಲಂಬೋದರನ ಕಾಲಿಗೆ ಬಿಸಿಹತ್ತಿತು. ಆ ಕಾಲನ್ನು ಮೇಲಕ್ಕೆ ಎತ್ತಿಕೊಂಡು, ಇನ್ನೊಂದು ಕಾಲನ್ನು ಮೆಲ್ಲಗೆ ಊರಿ ಮುಂದಕ್ಕೆ ಹೊರಡಲು ಯತ್ನಿ ಸಿದನು, ಅದಕ್ಕೂ ಬಿಸಿ ಹತ್ತಿತು. ಕೊನೆಗೆ ಬಾಗಿಲು ತೆಗೆಯಿರಿ ಎಂದು ಅರಚುತ್ತಾ, ಕೋಲನ್ನು ಊರಿ ಕೊಂಡು ಮೂಲೆಯಿಂದ ಮೂಲೆಗೆ ಬೇಗ ಬೇಗ ಸುತ್ತಾಡುವುದಕ್ಕೆ ಆರಂಭಿಸಿದನು, ನಾಲ್ಕು ಘಳಿಗೆ ಓಡಾಟವಾಯಿತು, ಆಯಾಸ ಹೆಚ್ಚಾ ಯಿತು. ಮೈ ಎಲ್ಲಾ ಬೆವರಿ ನೀರು ನೀರಾಯಿತು. ಪಂಡಿತನು ರೋಗಿಗೆ ಆದ ಸಾಧಕ ಸಾಕೆಂದು ಯೋಚಿಸಿ, ಒಂದು ಹಾಸಿಗೆ ಮೇಲೆ ಅವನನ್ನು ಮಲಗಿಸುವಂತೆ ಆಳಿಗೆ ಹೇಳಿದನು, ಅದರಮೇಲೆ ಅವನು ಕೊಟಡಿಯಿಂದ ಈಚೆಗೆ ಕರೆತರಲ್ಪಟ್ಟು ಬೇರೆ ಹಾಸಿಗೆಮೇಲೆ ಮಲಗಿ. ಕೊಂಡನು, ಆ ವಿಶ್ರಾಂತಿಯು ಅವನಿಗೆ ಎಂದೂ ಇಲ್ಲದ ಆನಂದ ವನ್ನುಂಟುಮಾಡಿತು, ಸಾಯಂಕಾಲಕ್ಕೆ ಪಂಡಿತನು ರೋಗಿಯನ್ನು ಕಾಣಿಸಿಕೊಂಡನು. ವೈದ್ಯನಮೇಲೆ ಲಂಬೋದರನಿಗೆ ಅತ್ಯಂತ ಕೋಪ ಬಂದಿತ್ತು. ಆದರೂ ಎಲೆಗೆ ತಂದು ಬಡಿಸಿದ ಅನ್ನ ದ ವಾಸನೆಯಿಂದ ಅದು ಸ್ವಲ್ಪ ಅಡಗಿತು, ಈ ಪ್ರಕಾರ ರೋಗಿಗೆ ವೈದ್ಯನಮೇಲೆ ಸಿಟ್ಟು ಹೆಚ್ಚು ತಾ ಬಂದಹಾಗೆಲ್ಲಾ, ಜಾಡ್ಯ ಹರಿಯುತ್ತಾ ಬಂತು. ಪಂಡಿತ ಹೇಳಿದಂತೆ ಕೇಳಿಕೊಂಡು ಲಂಬೋದರನು ಒಂದು ತಿಂಗಳವರೆಗೂ ಕಾಲಹರಣಮಾಡಿದನು. ಈ ಒಂದು ತಿಂಗಳು ಅವನಿಗೆ ಒಂದು ವರುಷದ ಹಾಗೆ ಕಂಡಿತು, ಇವನ ಅಪ್ಪಣೇ ಪ್ರಕಾರ ಇವನ ಚಾಕ ರರೂ ಬೆಸ್ತರೂ ಒಂದು ತಿಂಗಳ ತರುವಾಯ ಬಂದು ಕಾದಿದ್ದ ರು. ಲಂಬೋದರನು ವೆದ್ಯನಿಗೂ ಹೇಳದೇ ಮೇನದಲ್ಲಿ ಕೂತು ತನ್ನ