ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಊರಿಗೆ ಹೊರಟನು. ಬರುತಾ ತನ್ನ ಮನಸ್ಸಿನಲ್ಲಿ ನಮ್ಮ ಊರ. ಪಂಡಿತನು ಈ ನೀಚನಾದ ಶಿರೋಮಣಿಗೆ ಏನೋ ಹೇಳಿಕೊಟ್ಟು ಹೀಗೆ ಮಾಡಿಸಿದಾನೆ, ಇರಲಿ. ನಾನು ಊರಿಗೆ ಹೋದಮೇಲೆ ಅವನ ಆಟವನ್ನು ತಿಳಿಸುತ್ತೇನೆ, ಎಂದುಕೊಳ್ಳುತಿದ್ದನು. ಊರಿಗೆ ಬಂದು ಮಾನಸಪುರದ ಪಂಡಿತನಮನೆಗೆ ಹೋದನು, ಆ ವೈದ್ಯನಿಗೆ ಲಂಬೋ ದರನ ಗುರುತೇ ತಿಳಿಯಲಿಲ್ಲ, ಪೂರ್ವಕ್ಕೆ ಈಗ್ಗೆ ಮೈ ನಾಲ್ಕರಲ್ಲಿ ಒಂದು ಪಾಲಾಗಿತ್ತು. ಮುಖಬಣ್ಣ ತಿರುಗಿತ್ತು, ಕೋಲಿಲ್ಲದೆ ನಡೆಯುತಿದ್ದನು. ತಿಂಡಿಪೋತನಾದ ಈ ರೋಗಿಯು ಆಗ್ರಹದಿಂದ ವಿಶೇಷವಾಗಿ ಆಡಿದ ಹೆಚ್ಚು ಮಾತುಗಳನ್ನು ಕೇಳಿ ಪಂಡಿತನು-ಯಾಕೆ ಇಂಥಾ ನಿಷ್ಟು ರೋಕ್ತಿಗಳನ್ನು ಆಡುತೀರಿ? ನೀವಾಗಿಯೇ ಶಿರೋಮಣಿ ವೈದ್ಯರಲ್ಲಿ ಹೋದಿರಿ ; ನಿಮ್ಮನ್ನು ಯಾರೂ ಬಲವಂತ ಮಾಡಲಿಲ್ಲ. ಲಂಬೋದರ ಆ ವೈದ್ಯ ಬಹು ದೊಡ್ಡವನು, ಹೆಸರಾದ ಪಂಡಿತ ಎಂದು ನೀವೇ ಹೇಳಿದವರು. ಪಂಡಿತ-- ಸಾಗಾದರೆ ನಿಮಗೆ ಆತನಿಂದ ಕೇಡಾಯಿತೆ ? ಜಾಡ್ಯ ಕಡಮೆಯಾಯಿತೆ, ಹೆಚ್ಚಾ ಯಿತೆ ? ಲಂಬೋದರ-ಹೆಚ್ಚಾಯಿತೆಂದು ಹೇಳಲಾರೆ, ಈಗ ಹಸಿವು ಚೆನ್ನಾಗಿದೆ, ನಿದ್ರೆ ಚೆನ್ನಾಗಿ ಹತ್ತುವುದು. ಸರಿಯಾಗಿ ನಡೆಯಬಲ್ಲೆ. ಪಂಡಿತ-ಇಷ್ಟರಮಟ್ಟಿಗೆ ಗುಣವನ್ನುಂಟುಮಾಡಿದ ವೈದ್ಯ ಕೆಟ್ಟವನೆಂದು ಹೇಳುವುದಕ್ಕೆ ಬಂದಿರ ? " ಈ ಮಾತಿಗೆ ಲಂಬೋದರನು ಉತ್ತರ ಹೇಳುವುದಕ್ಕೆ ತಿಳಿಯದೆ ವೆಚ್ಚು ಮುಖವನ್ನು ಹಾಕಿಕೊಂಡು ನನ್ನ -ಮಾನಕ್ಕೆ ತಕ್ಕ ಹಾಗೆ ಆಹಾರ ಉಪಚಾರಗಳಿಲ್ಲದೆ ಶಿರೋಮಣಿ ವೈದ್ಯನು ನನಗೆ ಅವಮಾನ ಮಾಡಿದನು, ಎಂದನು. ಕೂಡಲೆ ಪಂಡಿತನು ಹೇಗಾದರೂ ನಿಮಗೆ ಮೋಸವನ್ನು ಮಾಡಿ ನಿಮಗೆ ಆರೋಗ್ಯವನ್ನು ಉಂಟುಮಾಡಿಕೊಟ್ಟರು. ಆ ಪಂಡಿತರ ಯೋಗ್ಯತೆಗೆ ಸಮಾನವಿಲ್ಲ. ಬಡವರಿಗೆ ವಿಶೇಷವಾಗಿ. ಆಹಾರ ಉಪಚಾರಗಳಿಲ್ಲ ; ಆದುದರಿಂದ ಅವರಿಗೆ ರೋಗಬಂತು, ಅವ.