ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ೬ ಸುಮತಿ ಮುದನಕುಮಾರರ [ಅಧ್ಯಾಯ ಹೀಗೆ ಸ್ವಲ್ಪ ಕಾಲ ಕಳೆಯಿತು. ಒಂದು ದಿನ ಸುಮತಿ ಮದನ ಕುವಾರರಿಬ್ಬರೂ ಆಡುತ್ತಾ ಕಾಡಿಗೆ ಹೊರಟುಹೋದರು. ಹಿಂತಿರುಗಿ ಬರುವಾಗ ಇವರಿಗೆ ದಾರಿ ತಪ್ಪಿತು, ದೊಡ್ಡ ಮಳೆ ಬಂತು, ಮುಂದಕ್ಕೆ ಕಾಲಿರಿಸುವುದು ಬಹು ಕಷ್ಟವಾಯಿತು. ದೈವಾಧೀನದಿಂದ ಸಮಾಸ 'ದಲ್ಲೇ ಹಾಳುಗುಡಿ ಸಿಕ್ಕಲು ಬಂದು ಅದರೊಳಗೆ ಇವರಿಬ್ಬರೂ ಹೋಗಿ. ಸೇರಿಕೊಂಡರು. ಮಳೆ ಹೆಚ್ಚಾಗಿ, ಗುಡಿಯ ಒಳಕ್ಕೂ ನೀರು ನುಗ್ಗು ವುದಕ್ಕೆ ಮೊದಲಾಯಿತು. ಮದನನು ಇದನ್ನೆ ಲ್ಲಾ ನೋಡಿ ಹೆದರಿ ಕೊಂಡು ಕಣ್ಣಿನಲ್ಲಿ ನೀರನ್ನು ಬಟ್ಟಾಡಿಸುತಾ-ಸುಮತಿ, ಏನುಮಾ ಡೋಣ ? ಎಂದನು. ಅದಕ್ಕೆ ಸುಮತಿಯು-ಮಾಡುವುದೇನು ? ಮಳೆ ಕಡಮೆಯಾಗುವವರೆಗೂ ನಾವು ಇಲ್ಲಿಯೇ ಇರಬೇಕು, ಎಂದನು. ಮದನ-ಮಳೆ ಕಡಮೆಯಾಗದೆಯೇ ಇದ್ದರೆ ? ಸುಮತಿ- ಮಳೆಯಲ್ಲಿಯೇ ನೆನೆದುಕೊಂಡು ಹೋಗಬೇಕು, ಇಲ್ಲ, ಇದ್ದ ಕಡೆಯಲ್ಲಿಯೇ ಇರಬೇಕು. ಮದನ-ಈ ಮಹಾರಣ್ಯದಲ್ಲಿ ನಾವಿಬ್ಬರೇ ಇರುವುದು ಹೇಗೆ ? ನನಗೆ ಹಸಿವು ಆಗುತಿದೆ. ಚಳಿ ಹೆಚ್ಚು, ಎಲ್ಲಿಯಾದರೂ ಬೆಂಕಿ ಸಿಕ್ಕಿದರೆ ಕಾಸಿಕೊಳ್ಳ ಬಹುದು. ಸುಮತಿ-ಕಾಡಿನಲ್ಲಿ ಎರಡು ಮರದ ತುಂಡನ್ನು ಒಂದಕ್ಕೊಂದು -ಉಜ್ಜಿ ಬೆಂಕಿಯನ್ನು ಮಾಡುತ್ತಾರೆಂದು ಕೇಳಿದೇನೆ. ಆದರೆ ಇನ್ನೂ ಒಂದು ಉಪಾಯವಿದೆ, ನನ್ನಲ್ಲಿ ಒಂದು ಚೂರಿ ಇದೆ, ಒಂದು ಚೂರು ಚಕ್ಕಮುಕ್ಕಿ ಕಲ್ಲು ಸಿಕ್ಕಿದರೆ ಅದರ ಮೇಲೆ ಹೊಡೆದು ಬೆಂಕಿ ಯನ್ನು ಮಾಡಬಹುದು. ಹೀಗೆ ಹೇಳಿ ಸುಮತಿಯು ಅತ್ತಿತ್ತ ನೋಡಿದನು, ಅಲ್ಲಿ ಒಂದು 'ಚೂರು ಚಕಮುಕ್ತಿಯು ಸಿಕ್ಕಿತು, ಅದನ್ನು ತೆಗೆದುಕೊಂಡು ಚಾಕು ವಿನ ಹಿನ್ನೆ ಯಿಂದ ಹೊಡೆದನು. ಒಂದೆರಡು ಬೆಂಕಿ ಕಿಡಿಗಳು ಉದುರಿ ದವು, ಹತ್ತಿ ಕೊಳ್ಳುವುದಕ್ಕೆ ಏನೂ ಇರಲಿಲ್ಲ, ಅಲ್ಲಿ ಬಿದ್ದಿದ್ದ ತರಗನ್ನು ಸೇರಿಸಿ ಚಕ್ಕಮುಕ್ಕಿಯನ್ನು ಹೊಡೆದನು. ಆ ತರಗು ತೇವೈಸಿಕೊಂಡಿ ದ್ದುದರಿಂದ ಹತ್ತಿಕೊಳ್ಳಲಿಲ್ಲ. ಇದನ್ನು ಕಂಡು ಮದನನಿಗೆ ಇನ್ನೂ