ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ [ಅಧ್ಯಾಯ ಮಾನಾಂಬಕಿ ದೇವಿಯು ಓದುವುದಕ್ಕೆ ಮಗುವನ್ನು ಅರೆಗಳಿಗೆಯೂ. ಬಿಡು ತಿರಲಿಲ್ಲ. ಇದರ ಫಲವೇನಾಯಿತು ಎಂದರೆ : ಮದನಕುಮಾರನಿಗೆ ಕೇಳಿ ದ್ದನ್ನೆಲ್ಲಾ ಕೊಟ್ಟಾಗ್ಯೂ, ಅವನಿಗೆ ಸಿಡುಕೂ ಅಸಮಾಧಾನವೂ ತಪ್ಪ ಲಿಲ್ಲ. ಈ ಹುಡುಗನು ಒ೦ದಾನೊಂದು ವೇಳೆ ತನಗೆ ಮನಸ್ಸು ಬಂದ ಷ್ಟು ಮಿಠಾಯಿಯನ್ನು ಅಸಹ್ಯ ಹಿಡಿಯುವ ತನಕ ತಿಂದುಬಿಡುತಿದ್ದ. ಇದರಿಂದ ಮೈಗೆ ಉಂಟಾಗುತಿದ್ದ ಅಲಸಿಕೆಯನ್ನು ಹೋಗಲಾಡಿಸಲು ಭೇದೀ ಔಷಧವನ್ನು ಕೊಟ್ಟರೆ ಅದು ಕಇಲ್, ತಾನು ಒಲ್ಲೆ ನೆಂದು ಒರಟುತನಮಾಡುತಿದ್ದ, ಮತ್ತೊಂದುವೇಳೆ ಇಲ್ಲದ್ದನ್ನೆಲ್ಲಾ ಕೊಡು ಎಂದು ರಚ್ಚೆ ಹಿಡಿಯುತಿದ್ದ ; ಇವನ ಮಾತಿಗೆ ಎದುರುಮಾತು ಆಡಿ ದ್ದನ್ನು ಕಂಡ ಅಭ್ಯಾಸವೇ ಇವನಿಗೆ ಇರಲಿಲ್ಲವಾದ ಕಾರಣ, ಹಾಗೆ ಹೋರಿಯಾಡತಕ್ಕೆ ಕಾಲಗಳಲ್ಲಿ ಈ ಒರಟ ಹುಡುಗನನ್ನು ಸಮಾ ಧಾನ ಮಾಡುವುದು ಬಹು ಕಷ್ಟ ವಾಗಿತ್ತು, ಮನೆಗೆ ಹೊರಗಿನವರು ಯಾರಾದರೂ ಊಟಕ್ಕೆ ಬಂದಾಗ, ಮನೆಯಲ್ಲಿ ಮಾಡಿದ್ದನ್ನೆಲ್ಲಾ ಮೊದಲೇ ತನಗೆ ಹಾಕಿ ಉಣ್ಣಿಸಬೇಕು ; ಇಲ್ಲದಿದ್ದರೆ ವಿಪರೀತವಾಗಿ ಗದ್ದಲವಾಡಿ ಎಲ್ಲರನ್ನೂ ತೊಂದರೆ ಮಾಡುತಿದ್ದನು. ದೊರೆಯು ಬಂದ ಅತಿಥಿಗಳ ಸಂಗಡ ಊಟಕ್ಕೆ ಕೂತಾಗ ರಾಜಪುತ್ರನು ಅವರ ಎಡೆಯನ್ನೆಲ್ಲಾ ಎಳೆದು ಬಡಿಸಿದ್ದ ಪದಾರ್ಥವನ್ನು ಮನೆಯಲ್ಲೆ ಲ್ಲಾ ಚೆಲ್ಲಾ ಡಿ, ಬಟ್ಟಲುಗಳನ್ನು ಉರುಟ ಎಲೆಯನ್ನು ಹರಿಯುತಿದ್ದನು. ಇಂಥಾ ಚೇಷ್ಟೆಗಳಿಂದ ಇತರರಿಗೆ ಬೇಜಾರು ಆಗುತಿತ್ತು, ಮತ್ತು ಇಲ್ಲದ ಚೇಷ್ಟೆ ಮಾಡುತಿರುವುದು, ಭಾರವಾಸಿಯಾದ ಸಾಮಾನುಗಳನ್ನು ತನ್ನ ತಲೇ ಮೇಲೆ ಕೆಡವಿಕೊಳ್ಳುವುದು ಇಂಥಾ ಚೇಷ್ಟೆ ಗಳೆಲ್ಲಾ ಇವ ನಿಗೆ ಸಾಧಾರಣವಾಗಿದ್ದವು ಒಂದಾನೊಂದು ಸಮಯದಲ್ಲಿ ಮರಳಿ ಗೆಜ್ಜೆ ಗುದಿ ಹಾಯುತಿದ್ದ ಒಂದು ದೊಡ್ಡ ಹಂಡೇ ನೀರನ್ನು ತನ್ನ ಮೇಲೆ ಉರುಳಿಸಿಕೊಂಡು ಸತ್ತು ಹೋಗುತಿದ್ದನು, ಇದಲ್ಲದೆ ಅತಿ ಲಾಲನೆ ಯಿಂದ ಸಾಕಿದ್ದ ರಾದ ಕಾರಣ, ಆಗಾಗ್ಗೆ ಇವನಿಗೆ ಏನಾದರೂ ಒಂದು ಜಾಡ್ಯ ಬರುತಲೇ ಇತ್ತು, ಸ್ವಲ್ಪ ಗಾಳಿ ಬೀಸಿದರೆ ಆಗಲೇ ನೆಗಡಿ