ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಸುಮತಿ ಮುದ ಸುಮತಿ ಮದನಕುಮಾರರ ಚರಿತ್ರೆ [ ಅಧ್ಯಾಯ ತಲೆಯಿಂದ ಕಾಲಿನವರೆಗೂ ಬಟ್ಟೆ ಯನ್ನು ಹಾಕಿಕೊಂಡಿದ್ದಾಗ್ಯೂ; ಉತ್ತಮವಾದ ಶಾಲುಗಳನ್ನು ಹೊದ್ದು ಕೊಂಡಿದಾಗ್ಯೂ, ಇವರಿಗೆ ಛಳಿ ಜ್ವರ ಬಂತೊ ಎಂದು ತೋರುವ ಹಾಗೆ, ಛಳಿಗೆ ಗಡಗಡನೆ ನಡುಗುವರು ಬಡವರ ಮಕ್ಕಳು ಬೆತ್ತಲೆ ಹೊಲದಲ್ಲೆ ಲ್ಲಾ ಓಡಾಡುವರು, ಮದನ-ಇದೇನೋ ನಿಜ. ನಮ್ಮ ಅಪ್ಪಾಜಿಯ ಓಲಗಕ್ಕೆ ಬರತಕ್ಕ ಜನರು ಬೇಕಾದ ಬಟ್ಟೆಯನ್ನು ಹಾಕಿಕೊಂಡು ಇರುವರು. ಆದರೂ ಛಳಿ, ಛಳಿ, ಎಂದು ಪೇಚಾಡುವರು. ಅತ್ತ ನಮ್ಮ ಚಾಕರ ರೆಲ್ಲರೂ ಬರೀ ಮೈ ಯನ್ನು ಬಿಟ್ಟು ಕೊಂಡು ಓಡಾಡುವರು. ಸುನುತಿ-ಆದ್ದರಿಂದ ಓಡಾಡಿಕೊಂಡು ನಾವು ಮಾಡತಕ್ಕ ಕೆಲಸ ದಿಂದ ನಮಗೆ ಮೈ ಬೆಚ್ಚಗಾಗುವುದು. ಮದನ-ಆದರೆ ದೊಡ್ಡವರು ಈ ಅಲ್ಪರಹಾಗೆ ಓಡಾಡುವುದು ಯುಕ್ತವೆ ? ಸುಮತಿ-ದೊಡ್ಡವರಿಗೆ ಕಾಯ ಪುಷ್ಟಿ ಇರಬೇಕಾದ್ದು ಯುಕ್ತ ವಲ್ಲವೆ ? ಹಾಗೆ ಯುಕ್ತವಾದರೆ ದೊಡ್ಡವರು ತಮ್ಮ ಅಂಗಗಳಿಗೆ ಸಾಧಕ ವಾಗುವಂತೆ ಕೆಲಸಮಾಡಬೇಕು, ಇಲ್ಲದಿದ್ದರೆ ಅವರಿಗೆ ಬಲ ಬರುವು ದಿಲ್ಲ. ನಿಮ್ಮ ತಂದೆಯ ಸಭೆಗೆ ಬರತಕ್ಕೆ ಸಾಮಾಜಿಕರಿಗೆ ಹೊಲದಲ್ಲಿ ಗೆಯ್ಯುವ ಒಕ್ಕಲು ಮಕ್ಕಳ ಶಕ್ತಿ ಇದೆಯೆ ? ಮದನ-ನನಗೆ ತೋರಲಿಲ್ಲ. ಜೋಯಿಸರ ತೋಟದಲ್ಲಿ ನಾನ; ಈಚೆಗೆ ಕೆಲಸಮಾಡುತ್ತಾ ಬಂದಮೇಲೆ ಮೊದಲಿಗಿಂತಲೂ ಈಗ ಶಕ್ತಿ, ಹೆಚ್ಚಿತು. ಇವರು ಹೀಗೆ ಮಾತನಾಡುತಿರುವಲ್ಲಿ, ಒಬ್ಬ ಹುಡುಗನು ತಲೆಯ ಮೇಲೆ ಒಂದು ಸೌದೇ ಹೊರೆಯನ್ನು ಹೊತ್ತು ಕೊಂಡು ಬರುವುದನ್ನು ಸುಮತಿಯು ಕಂಡು, ಅವನ ಗುರುತು ಹಿಡಿದು-ಮದನ, ಹೋದ ವರುಷ ನೀನು ಬಟ್ಟೆ ಯನ್ನು ಕೊಟ್ಟ ಆ ಬಡಹುಡಗನು ಇಗೋ ಇಲ್ಲಿ ಬರುತಾ ಇದಾನೆ, ಇವನ ಊರು ಎಲ್ಲಿಯೋ ಸವಿಾಪವಾಗಿರುವ ಹಾಗೆ ಕಾಣುತಿದೆ. ಇವನು ನಮಗೆ ದಾರಿಯನ್ನು ತೋರಿಸಿಯಾನು, ಎಂದನು; ತರುವಾಯ-ದಾರಿಯನ್ನು ತೋರಿಸುತ್ತೀಯ ? ಎಂದು ಆ