ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೧೫t ಬಡಹುಡುಗನನ್ನು ಕೇಳಿದನು. ಅವನು ಬುದ್ದಿ, ಅಗತ್ಯವಾಗಿ ತೋರಿ ಸುತೇನೆ. ನಮ್ಮ ಬುದ್ದಿ ಯವರಾದ ಮದನ ಕುಮಾರರು ಈ ಮಳೆಗೂ, ಗಾಳಿಗೂ, ಈ ಕತ್ತಲೆಯಲ್ಲಿ ಸಿಕ್ಕಿದ್ದು ಆಶ್ಚರ್ಯ: ನಿಮ್ಮ ಬಟ್ಟೆ ಯೆಲ್ಲಾ ಒದ್ದೆಯಾಗಿದೆ. ಚಳಿಯಲ್ಲಿ ನಡುಗುತೀರಿ, ನಮ್ಮ ಗುಡಿಸಲಿಗೆ ದಯ ಮಾಡಿ. ಬೆಂಕೀ ಕಾಸಿಕೊಂಡು ಹೋಗಬಹುದು, ನಮ್ಮ ತಂದೆ ಓಡಿ ಹೋಗಿ ನೀವು ಇಲ್ಲಿದಾರೆಂದು, ರಾಮಜೋಯಿಸರಿಗೆ ಹೇಳಿ ಬರುತಾನೆ. ತಾವು ಬನ್ನಿ ಎಂದು ಕರೆದನು. ಮದನನು ಅದಕ್ಕೆ ಒಪ್ಪಿಕೊಂಡು, ಸುಮತಿಯನ್ನು ಒಡಗೂಡಿ ಆ ಬಡಹುಡುಗನ ಸಂಗಡ ಹೋದನು. ಸ್ವಲ್ಪ ದೂರದಲ್ಲಿಯೇ ಅವನ ಮನೆ ಸಿಕ್ಕಿತು. ಆ ಹುಡುಗನ ತಾಯಿ ಹಂಜೀನೂಲುತ್ತಿದ್ದಳು. ಅವರ ಅಕ್ಕಿ ಹಿಟ್ಟಿ ಮಾಡುತ್ತಿದ್ದಳು, ಅವರ ಅ ಪ್ಪನು ಒಂದು ಪುಸ್ತಕವನ್ನು ಮೆಲ್ಲಗೆ ಓದಿಕೊಳ್ಳುತಾ ಅಗ್ಗಿಷ್ಟಿ ಕೇ ಹತ್ತಿರ ಬೆಂಕಿ ಕಾಯಿಸಿಕೊಳ್ಳುತಿದ್ದನು' ಅವನ ಮಗ್ಗುಲಲ್ಲಿ ಮೂರು ನಾಲ್ಕು ಮಕ್ಕಳು ಚಿಂದಿಯನ್ನು ಹೊದ್ದು ಈಚಲ ಚಾಪೆಯ ಮೇಲೆ ಮಲಗಿಕೊಂಡಿದ್ದವು. ಆ ಬಡಹುಡುಗನು ಮನೆಯ ಒಳಕ್ಕೆ ಹೋಗಿ ಸವುದೇ ಹೊರೆಯನ್ನು ಇಳುಕಿ-ಅ ಪ್ಪಾ, ಹೋದವರುಷ ನಮಗೆಲ್ಲ ರಿಗೂ ಬಟ್ಟೆಯನ್ನು ಕೊಟ್ಟು ಉದ್ಧಾರಮಾಡಿದ ಮದನ ಕುಮಾರರು ಬಂದು ಇದಾರೆ, ಕಾಡಿನಲ್ಲಿ ದಾರಿತಪ್ಪಿ ಹೋಗುತಿದ್ದರು. ನಾನು ಕರೆದುಕೊಂಡು ಬಂದೆ ಎಂದನು. ಆ ಕ್ಷಣವೇ ಹುಡುಗನ ತಂದೆಯು ಥಟ್ಟನೆ ಎದ್ದು, ಬಾಗಿಲಿಗೆ ಬಂದು, ಸುಮತಿ, ಮದನ, ಇಬ್ಬರನ್ನೂ ಕುರಿತು-ಸ್ವಾಮಿ, ಒಳಕ್ಕೆ ದಯಮಾಡಬೇಕು, ಚಳಿಯಲ್ಲಿ ನಡುಗು ತಿದ್ದೀರಿ, ಬೆಂಕೀಕಾಯಿಸಿಕೊಳ್ಳಿ: ತಮ್ಮ ಬಟ್ಟೆ ಯನ್ನು ಕೊಡಿ, ಹಿಂಡಿ ಒಣಗಹಾಕುತೇನೆ, ಎಂದು ಬಹಳ ಮರ್ಯಾದೆಯಿಂದ ಒಳಕ್ಕೆ ಕರೆದು ಕೊಂಡುಹೋಗಿ, ಬೆಂಕಿಯ ಮುಂದೆ ಕೂರಿಸಿದನು, ಆಗ ಅವನ ಹೆಂಡ ತಿಯು-ಅಯ್ಯೋ, ನಾವು ಬಹಳ ಬಡವರು, ನನ್ನ ಮನೆ ಸುಧಾಮನ ಮನೆಯಾಗಿದೆ. ತಾವು ತಿನ್ನುವ ಪದಾರ್ಥವನ್ನು ನಾನು ಏನು ಕೊಟ್ಟೇನು ? ಜೋಳದ ಅರಳು ಇದೆ. ಇದನ್ನು ತಾವು ತಿಂದೀರ ? ಎಂದಳು. ಆ ಮಾತಿಗೆ ಮದನನು-ತಾಯಿ, ನನಗೆ ಬಹಳ ಹೊತ್ತಿ