ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧lo ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ನಿಂದಲೂ ಹಸಿವು ಆಗುತಿದೆ. ನೀನು ಏನಕೊಟ್ಟರೂ ತಿನ್ನು ತೇವೆ, ಎಂದು ಹೇಳಿದನು. ಆಗ ಜೋಳದ ಅರಳನ್ನು ಅವರಿಬ್ಬರೂ ತಿಂದು ಅವರು ಕೊಟ್ಟ ಸ್ವಲ್ಪ ಮಜ್ಜಿಗೆಯನ್ನು ಕುಡಿದರು, ಆ ಮೇಲೆ ಆ ಮನುಷ್ಯ ಓದುತಿದ್ದ ಪುಸ್ತಕ ಯಾವುದು ಎಂದು ಕೇಳಿದರು. ಅದಕ್ಕೆ ಅವನು ಅದು ಭಾರತವೆಂದು ಹೇಳಿದನು. ಮದನನು--ನಮ್ಮ ಜೋಯಿ ಸರು ಆ ಪುಸ್ತಕವನ್ನು ಓದು ಎಂದು ನಮಗೆ ಹೇಳಿದಾರೆ. ಅವರು ಅದನ್ನು ಓದಿ ಆಗಾಗ್ಗೆ ಜನರಿಗೆ ಪುರಾಣಾ ಹೇಳುವುದುಂಟು. ಆಗ ಎಲ್ಲರೂ ಸದ್ದು ಮಾಡದೆ ಬಹು ಭಕ್ತಿಯಿಂದ ಕೇಳುತ್ತಾರೆ, ಎಂದು ಹೇಳಿದನು. ಅದಕ್ಕೆ ಆ ಮನುಷ್ಯನು- ಬುದ್ದಿ, ಹವುದು, ರಾಮ ಜೋ ಯಿಸರು ಬಹು ದೊಡ್ಡವರು, ಬಡಬಗ್ಗರಿಗೆ ಬಹು ಆಧಾರವಾಗಿದಾರೆ. ಅನ್ನ ವಿಲ್ಲದವರಿಗೆ ಅನ್ನ ವನ್ನು ಕೊಡುತಾರೆ, ಬಟ್ಟೆ ಯಿಲ್ಲದವರಿಗೆ ಬಟ್ಟೆ ಯನ್ನು ಕೊಡುತಾರೆ. ಆಲಸ್ಯವಾದಾಗ ಔಷಧವನ್ನು ಕೊಡುತಾರೆ. ನಾವು ತಪ್ಪಿ ನಡೆದರೆ, ಬುದ್ದಿ ಯನ್ನು ಹೇಳುತ್ತಾರೆ, ಪರಲೋಕಸಾಧನೆಗೆ ಮಾರ್ಗವನ್ನು ತೋರಿಸುತ್ತಾರೆ, ನಾನು ಒಂದಾನೊಂದು ಕಾಲದಲ್ಲಿ ಶುದ್ದ ವಾಗಿ ಕೆಲಸಕ್ಕೆ ಬಾರದ ತುಂಟನಾಗಿದ್ದೆ, ಅವರು ನನಗೆ ಬುದ್ದಿ ಯನ್ನು ಹೇಳಿ ಮಾರ್ಗಕ್ಕೆ ತಂದರು. ಈಗ ನನ್ನ ಕೈಲಾದಮಟ್ಟಿಗೆ ಸಂಸಾರವನ್ನು ಮಾಡಿಕೊಂಡು ಇದೇನೆ, ಹೋದ ವರುಷ ಮನೆಯವ ರೆಲ್ಲರೂ ರೋಗದಲ್ಲಿ ಬಿದ್ದಿದ್ದೆವು. ರಾಮಜೋಯಿಸರು ಆ ಬೀಳ ನ್ನೆಲ್ಲಾ ಎತ್ತಿದರು. ನನಗೆ ಆಗಾಗ್ಗೆ ಅನ್ನವನ್ನು ತಂದು ಇಕ್ಕಿ, ಈ ಸುಮತಿ ನಮ್ಮನ್ನು ಉದ್ಧಾರಮಾಡಿದರು. ಆಗಿನಿಂದ ತಿಂಗಳಿಗೆ ಹತ್ತು ಹಣದಮಟ್ಟಿಗೆ ಸಂಪಾದಿಸಿಕೊಂಡು ಸುಖವಾಗಿ ಜೀವನಮಾಡು. ತಿದೇವೆ ; ಹೀಗೆಂದು ನುಡಿದನು. ಅದಕ್ಕೆ ಮದನನು ಆಶ್ಚರ್ಯ ಪಟ್ಟು --ಏನಯ್ಯ ಒಂದು ತಿಂಗಳಿಗೆ ಹತ್ತು ಹಣ ವೇ ಸರಿಯೆ, ನೀನು ಸಂಪಾದಿಸುವುದು ? ಎಂದು ಕೇಳಲು, ಆ ರೈತನು-ಸ್ವಾಮಿ, ಇತರರು ಇದರಲ್ಲಿ ಅರ್ಧವನ್ನೂ ಸಂಪಾದಿಸಲಾರರು. ನಾನೇ ವಾಸಿ. ನನ್ನ ಹೆಂಡತಿ ಹಂಜಿಯನ್ನು ನೂತು ಹಣವಡ್ಡದಮಟ್ಟಿಗೆ ಸಂಪಾದಿಸುತಾಳೆ. ಮದನ-ಹನ್ನೊಂದು ಹಣ ಅಡ್ಡವಾಯಿತಲ್ಲ, ಇದು ನಿಮ್ಮ