ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬4 ೧೨] ಸುಮತಿ ಮದನಕುಮಾರರ ಚರಿತ್ರೆ ಜೋಯಿಸ- ಪೂರ್ವದಲ್ಲಿ ಈ ಆಕಾಶದ ನಕ್ಷತ್ರಗಳನ್ನು ನೋಡಿ ದವರಿಗೆ ಅಧಿಕವಾದ ಪ್ರಕಾಶದಿಂದ ಕೆಲವೂ, ಸ್ಥಾನವಿಶೇಷದಿಂದ ಕೆಲವೂ ಮುಖ್ಯವಾದವುಗಳೆಂದು ಕಾಣಿಸಿದವು. ಇಂಥಾ ನಕ್ಷತ್ರಗಳು ಪುನಃ ನೋಡಿದಾಗ ನೀಟಾಗಿ ಸಿಕ್ಕುವಂತೆ ಅವುಗಳಿಗೆ ಬೇರೆಬೇರೆ ಹೆಸರುಗಳನ್ನು ಕೊಟ್ಟಿದಾರೆ. ಇಂಥಾ ನಕ್ಷತ್ರ ಗಳ ಗುಂಪುಗಳೇ ರಾಶಿಗಳು, ಸುಮತಿ, ಸಪ್ತ ಋಷಿಗಳ ರಾಶಿಯನ್ನು ತೋರಿಸು. ಆಗ ಸುಮತಿ ಕತ್ತೆತ್ತಿ ನೋಡಿ, ಉತ್ತರದಿಕ್ಕಿನಲ್ಲಿ ಪ್ರಕಾಶಮಾನ ವಾಗಿರುವ ಆ ಏಳು ನಕ್ಷತ್ರಗಳನ್ನು ತೋರಿಸಿದನು. - ಜೋಯಿಸ-ಮದನ, ಆಕಾಶವನ್ನೆ ಲ್ಲಾ ಚೆನ್ನಾಗಿ ನೋಡು, ಈ ಏಳು ನಕ್ಷತ್ರಗಳು ಯಾವಯಾವ ಸ್ಥಳದಲ್ಲಿ ಯಾವ ರೀತಿಯಾಗಿ ಪ್ರಕಾಶಿಸುತ್ತಿವೆಯೋ ಹಾಗೆ ಇನ್ನು ಯಾವುದಾದರೂ ಏಳು ನಕ್ಷತ್ರಗಳು ಇವೆಯೆ ? ತೋರಿಸು. ಮದನ-ಅ೦ಥಾ ನಕ್ಷತ್ರಗಳು ಇನ್ನು ಯಾವುದೂ ಇಲ್ಲ. ಜೋಯಿಸ-ಈ ಸಪ್ತಋಷಿಗಳ ನಕ್ಷತ್ರಗಳನ್ನು ಪುನಃ ತೋರಿಸು. ಮದನ-( ಅದೇ ಪ್ರಕಾರ ತೋರಿಸಿದನು.) ಜೋಯಿಸ-ಸರಿ. ಈ ನಕ್ಷತ್ರಗಳು ಜ್ಞಾಪಕವಿದ್ದರೆ, ಇವು ಗಳ ಸಮಿಾದಲ್ಲಿರತಕ್ಕ ನಕ್ಷತ್ರಗಳನ್ನೆಲ್ಲಾ ನೋಡಿ ತಿಳಿದುಕೊಳ್ಳ ಬಹುದು. ಮದನ- ಜೋಯಿಸರೆ, ಇದು ಆಶ್ಚರವಾಗಿದೆ. ನಮ್ಮ ಅಮ್ಮಯ್ಯನಿಗೆ ಇದನ್ನು ತೋರಿಸಬೇಕು. ಜೋಯಿಸ - ಈ ರಾಶಿಯಲ್ಲಿ ಮಂಚದ ಕಾಲಿನಹಾಗೆ ನಾಲ್ಕು ನಕ್ಷತ್ರಗಳನ್ನು ನೋಡಿದೆಯಾ ? ಆ ಹಿಂದುಗಡೆ ಕಾಲಿನಂಥಾ ಎರಡು ನಕ್ಷತ್ರಗಳನ್ನು ಕಂಡೆಯಾ ? ಅದರಿಂದ ಮೇಲಕ್ಕೆ ಹಾಗೆಯೇ ನೋಡು. ಬಹಳ ಪ್ರಕಾಶವಾಗಿರುವ ಒಂದು ನಕ್ಷತ್ರವು ಕಾಣಿಸುವುದಿಲ್ಲವೆ ? ಅದು ಹನ್ನೆರಡು ನಕ್ಷತ್ರಗಳ ಸಾಲಿನಲ್ಲಿದ್ದ ಹಾಗೆಯೇ ಕಾಣುವುದು. ಮದನ-ಹವುದು, ನನಗೆ ಕಾಣಿಸಿತು, ಅದು ಯಾವುದು ? o೦