ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರ | [ಅಧ್ಯಾಯ ಊರು ಇರುವುದನ್ನು ನೀನು ಬಲ್ಲೆ ಯಷ್ಟೆ ? ಒಂದು ದಿನ ನಮ್ಮ ತಂದೆಯು ಅಲ್ಲಿಗೆ ಹೋಗಿ ಒಂದು ಮಾತನ್ನು ಹೇಳಿ ಬಾ ಎಂದು ಕಳು ಹಿಸಿದರು. ನನಗೆ ದಾರಿ ಚೆನ್ನಾಗಿ ಗೊತ್ತುಂಟು, ಆದ್ದರಿಂದ ನಾನು ಅಲ್ಲಿಗೆ ಹೋಗಿ, ನಮ್ಮ ಚಿಕ್ಕಪ್ಪನನ್ನು ಕಂಡು ಮಾತನಾಡಿ ಪುನಃ ಊರಿಗೆ ಹೊರಟಿ, ಹೊರಡುವಾಗ್ಗೆ ಸಾಯಂಕಾಲದ ಸಮಯವಾಗಿತ್ತು. ಅದು ಶ್ರಾವಣಮಾಸ, ಕೃಷ್ಣ ಪಕ್ಷ, ಹೊತ್ತಾಯಿತು, ಹೋಗಬೇಡ ವೆಂದು ನಮ್ಮ ಚಿಕ್ಕಪ್ಪ ಹೇಳಿದನು. ಆದರೆ, ಆ ದಿನವೇ ಹಿಂತಿರುಗಿ ಬರಬೇಕೆಂದು ನಮ್ಮ ತಂದೆಯವರು ಆಜ್ಞಾಪಿಸಿದ್ದ ಕಾರಣ ನಾನು ಅಲ್ಲಿ ನಿಲ್ಲಲಿಲ್ಲ, ಜಾಗ್ರತೆಯಾಗಿಯೇ ಬಂದೆ, ಅರ್ಧದಾರಿಗೆ ಕತ್ತಲೆ ಯಾಯಿತು. ಮದನ-ನಿನಗೆ ಭಯವಾಗಲಿಲ್ಲವೆ ? ಸುಮತಿ-ಭಯ ಯಾಕೆ ? ದಾರಿಕಾಣದೆ ರಾತ್ರಿಯೆಲ್ಲಾ ಕಾಡಿ ನಲ್ಲಿದ್ದು ಬೆಳಗಾದಮೇಲೆ ಊರಿಗೆ ಬರುತಿದ್ದೆ, ಅಷ್ಟೇ ಹೊರತು ಇನ್ನು ಯಾವ ಭಯವೂ ಇರಲಿಲ್ಲ. ಆದರೂ ಸ್ವಲ್ಪ ಮುಂದಕ್ಕೆ ಬಂದೆ. ದೊಡ್ಡದಾಗಿ ಮಳೆಯೂ ಗಾಳಿಯೂ ಹೊಡೆಯುವುದಕ್ಕೆ ಮೊದಲಾ ಯಿತು, ಮುಂದೆ ಹೆಜ್ಜೆ ಇಡುವುದಕ್ಕೆ ಆಗಲಿಲ್ಲ. ಆ ದಾರಿಯ ಮಗ್ಗು ಲಲ್ಲಿದ್ದ ಒಂದು ಹೊದರಿನ ಕೆಳಗೆ ಹೋಗಿ ಕೂತುಕೊಂಡೆ, ಬಹಳ ಹೊತ್ತಿನಮೇಲೆ ಮಳೆ ಕಡಮೆಯಾಯಿತು, ಮತ್ತೆ ಊರಕಡೆ ಹೊರಟೆ. ದಾರಿ ಚೆನ್ನಾಗಿ ತಪ್ಪಿ ಹೋಯಿತು, ಕಾಡಿನಲ್ಲಿ ಎಲ್ಲೆಲ್ಲಿಯೂ ತಿರುಗಿದೆ. ದಾರಿ ಗೊತ್ತು ಮಾಡುವುದಕ್ಕೆ ಯಾವ ಗುರುತೂ ಸಿಕ್ಕಲಿಲ್ಲ. ಅಲ್ಲಲ್ಲಿ ಮಳೆನೀರಿನಿಂದ ತುಂಬಿ ಹರಿಯುವ ಕೆಲವು ಕೊಲ್ಲಿಗಳನ್ನು ಹಾದು ಕೊಂಡು ಬಂದೆ, ಮುಳ್ಳು ಬೇಲಿಗಳನ್ನು ಹಾರಿಕೊಂಡು ಬಂದೆ. ನನ್ನ ಕಾಲೆಲ್ಲಾ ತರೆದುಹೋಯಿತು, ಒಂದುಸಾರಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗುತಿದ್ದೆ, ನನಗೆ ಈಜುವುದಕ್ಕೆ ಬರುತ್ತಿದ್ದ ಕಾರಣ ಪ್ರಾಣ ಉಳಿ ಯಿತು. ಆಗ ಒಂದು ಕಡೆ ಸ್ವಲ್ಪ ಬೆಳಕು ಕಾಣಿಸಿತು. ಯಾರೋ ಪಂಜನ್ನು ಹಿಡಿದುಕೊಂಡು ಬರುವಹಾಗಿತ್ತು. ಮದನ-ಆಗ ಸ್ವಲ್ಪ ಅನುಕೂಲವಾಯಿತಲ್ಲವೆ!