ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ಯಾಗುತಿತ್ತು, ಸ್ವಲ್ಪ ಬಿಸಿಲಿಗೆ ಹೋದರೆ ಆಗಲೇ ಜ್ವರ ಬರುತಿತ್ತು ; ಹೀಗೆ ತೀರ್ಥ ತೆಗೆದುಕೊಂಡರೆ ಸೀತ, ಮಂಗಳಾರ್ತಿ ತೆಗೆದುಕೊಂಡರೆ ಉಷ್ಣ ಎನ್ನುವ ಮಟ್ಟಿಗೆ ಈ ಹುಡುಗನ ದೇಹ ಪ್ರಕೃತಿಯು ನಾಜೂ ಕಾಗಿತ್ತು, ಹೊರಗೆ ಓಡಾಡಿ ಇತರ ಮಕ್ಕಳಹಾಗೆ ಕುಣಿದಾಡಿಕೊಂಡು ಇರುವುದಕ್ಕೆ ಬದಲಾಗಿ, " ಒಂದು ಕಡೆ ಸುಮ್ಮನೆ ಮಕ್ಕಳು ಕೂತಿರ ಬೇಕು ; ಇಲ್ಲದಿದ್ದರೆ ಬಟ್ಟೆ ಯೆಲ್ಲಾ ಮಾಸಿಹೋಗುವುದು ” ಎಂದು ಹೇಳಿಕೊಡುತಿದ್ದರು, “ ಮಕ್ಕಳು ಹೊರಕ್ಕೆ ಹೋಗಬಾರದು, ಮನೆ ಯಲ್ಲಿಯೇ ಇರಬೇಕು : ಇಲ್ಲದಿದ್ದರೆ ಮುಖವೆಲ್ಲಾ ಕಪ್ಪಾಗುವುದು” ಎಂದು ಹೇಳಿಕೊಡುತಿದ್ದರು. ಈ ಸುಕುಮಾರನು ಬಿದರೆಗೆ ಸೇರು ವಾಗ್ಯ ಈ ವಿಧವಾದ ವಿದ್ಯಾಭ್ಯಾಸದ ಫಲದಿಂದ ಓದುವುದಕ್ಕೂ ಬರೆಯು ವುದಕ್ಕೂ ಬಾರದೆ, ತನ್ನ ಅವಯವಗಳನ್ನು ಈ ಕಡೆ ಆ ಕಡೆ ಸರಾಗ ವಾಗಿ ಅಲುಗಿಸಲಾರದೆ, ಸ್ವಲ್ಪ ಆಯಾಸವನ್ನೂ ಸಹಿಸಲಾರದೆ, ಹೀಗೆ ಕೈಲಾಗದ ಮುಕ್ತನಾಗಿದ್ದನು. ಇವನ ಅಹಂಕಾರಕ್ಕೂ ಕೋಪಕ್ಕೂ, ದುಡುಕಿಗೂ ಒರಟುತನಕ್ಕೂ ಮಿತಿಯೇ ಇರಲಿಲ್ಲ. ಬಿದರೆಯಲ್ಲಿ ಮದನ ಕುಮಾರನ ಉಪ್ಪರಿಗೇ ಮನೆಯ ಸವಿಾಪ ದಲ್ಲಿ, ಸೂರಭಟ್ಟನೆಂಬ ಒಬ್ಬ ಬ್ರಾಹ್ಮಣನಿದ್ದನು. ಈತನಿಗೆ ಸುಮತಿ ಯೆಂಬ ಒಬ್ಬನೇ ಒಬ್ಬ ಮಗನಿದ್ದನು. ವ್ಯವಸಾಯದಿಂದ ಜೀವಿಸು ತಿದ್ದ ಈ ಬ್ರಾಹ್ಮಣನ ಮಗನು ಹೋಲಗಳಲ್ಲಿಯೂ ತೋಟಗಳಲ್ಲಿಯೂ ಓಡಿಯಾಡುತ್ತಿದ್ದನು. ಈ ಸುಮತಿ ಯು ಹೊಲ ಉಳು ತಿರುವಾಗ ಆಳು ಗಳ ಸಂಗಡಲೇ ಹೋಗುವುದೂ, ಬರುವುದೂ, ಕುರಿಯನ್ನೂ ದನವನ್ನೂ ಹೊಲಕ್ಕೆ ಹೊಡೆದುಕೊಂಡು ಹೋಗುವುದೂ, ಹೀಗೆ ಮಾಡುತ್ತಿದ್ದ ದೂ ಅಲ್ಲದೆ, ಚಟುವಟಿಕೆಯುಳ್ಳವನಾಗಿಯೂ ಬಲಶಾಲಿಯಾಗಿಯೂ ಗಟ್ಟಿ ರಾಸಾಗಿಯೂ, ತೇಜಸ್ವಿಯಾಗಿಯೂ ಇದ್ದನು. ಇವನು ಮದನ ಕುಮಾರನಷ್ಟು ಕೆಂಪಾಗಿಯೂ ಇರಲಿಲ್ಲ ; ಅವನ ಹಾಗೆ ಅತಿ ನಾಜೂಕಾದ ಅಂಗಗಳುಳ್ಳವನಾಗಿಯೂ ಇರಲಿಲ್ಲ. ಆದರೆ ಪ್ರಾಮಾಣಿ ಕತೆಯೂ ನಿಷ್ಕಾ ಪಟ್ಯವೂ ಅವನ ಮುಖದಲ್ಲಿ ಚೆನ್ನಾಗಿ ತೋರುತಿ ದ್ದವು, ಇದರಿಂದ ಅವನನ್ನು ನೋಡಿದವರೆಲ್ಲರೂ ಅವನ ಮೇಲೆ