ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨). ಸುಮತಿ ಮದನಕುಮಾರರ ಚರಿತ್ರ ೧೭ ಸುಮತಿ-ಹುಸಿನಗು ನಗುತ್ತಾ-ಮುಂದಕ್ಕೆ ಕೇಳು ; ಯಾರಾ ದರೂ ಕಳ್ಳರು ಬರುತಾರೆಯೊ, ಎಂದು ಮೊದಲು ನನಗೆ ಸಂಶಯ ವಾಯಿತು, ಕಳ್ಳರು ಬಂದು ತಾನೆ ನನ್ನ ಂಥಾ ಬಡಹುಡುಗನನ್ನು ಏನುಮಾಡುತಿದ್ದರು ? ಹಾಗದಕಾಸಿನ ಚಿನ್ನ ವಾಗಲಿ ಬೇಳೆಕಾಸಿನ ಬೆಳ್ಳಿಯಾಗಲಿ ನನ್ನ ಮೈ ಮೇಲೆ ಇರಲಿಲ್ಲ, ಆದರೆ ಕಳ್ಳತನಕ್ಕೆ ಬರ ತಕವನಾಗಿದ್ದರೆ, ದೀಪವನ್ನು ತರಲಾರ, ಎಂದು ಯೋಚಿಸಿ, ಧೈರ್ಯವಾಗಿ ಆ ಪಂಜಿನ ಕಡೆಗೆ ನಾನು ಹೊರಟೆ. ಮೊದಲು ನನ್ನ ಬಲಗಡೆ ಕಾಣಿಸಿದ ಬೆಳಕು ನನ್ನ ಮುಂದುಗಡೆ ಹೋಗಿ ಇನ್ನೊಂದು ದಿಕ್ಕಿಗೆ ತಿರುಗಿದ ಹಾಗಾಯಿತು. ಇದೇನಾಶ್ಚರ್ಯ ಎಂದುಕೊಂಡೆ. ಆದರೂ ಅದು ಇದ್ದ ಕಡೆಗೇ ಹೋದೆ. ಮಧ್ಯೆ ನೀರು ತುಂಬಿದ್ದ ಒಂದು ಹಳ್ಳಕ್ಕೆ ಬಿದ್ದು ಬಿಟ್ಟೆ, ಆಮೇಲೆ ಈಜಿ ಕೊಂಡು ತಿರುಗಿ ಹೊರಟೆ. ಆ ಬೆಳಕು ನನ್ನ ನ್ನು ತಪ್ಪಿಸಿಕೊಂಡು ಹೋಗುವ ಹಾಗೆ ಕಂಡಿತು. ಆ ಪಂಜನ್ನು ಹಿಡಿದಿದ್ದ ಮನುಷ್ಯನನ್ನು ನಿಂತುಕೋ, ಎಂದು ಕೂಗುತ್ತಾ, ಅದರ ಕಡೆಗೆ ನಾನು ಓಡುವುದಕ್ಕೆ ಮೊದಲುಮಾಡಿದೆ. ಅದುವರೆಗೆ ಆ ಬೆಳಕು ಮೆಲ್ಲಗೆ ಹೋಗು ತಿತ್ತು, ನಾನು ಓಡುವುದಕ್ಕೆ ಆರಂಭಿಸಲು, ಆ ಬೆಳಕು ನನ್ನೆದು ರಿಗೆ ಕುಣಿಯುತಾ, ಒಂದಕ್ಕೆ ಹತ್ತರಷ್ಟು ವೇಗವಾಗಿ ಓಡಿತು. ನಾನೂ ಓಡಿದೆ; ದಾರಿಯಲ್ಲಿದ್ದ ಒಂದು ಜೋರೇ ತಡಿಯಲ್ಲಿ ನನ್ನ ಕಾಲು ಹೂತುಕೊಂಡಿತು, ಆ ಜೋರೆಯ ಮಧ್ಯೆ ಮನುಷ್ಯರು ಯಾರೂ ಬಂದಿರಲಾರರೆಂದು ಆಗ ನಿಶ್ನೆಸಿಕೊಂಡೆ. ನಾನು ನನೆದು, ಒದ್ದೆ ಮುದ್ದೆ ಯಾಗಿದ್ದೆ. ಮೋಡ ಸ್ವಲ್ಪ ಹರೆಯಿತು, ರಾತ್ರೆ ಬಹಳ ಹೊತ್ತಿನ ಮೇಲೆ ಚಂದ್ರೋದಯವಾಯಿತು. ಚಂದ್ರನ ಬೆಳಕೂ, ನಕ್ಷತ್ರದ ಬೆಳಕೂ ಸ್ವಲ್ಪ ಕಾಣಿಸಿತು. ಯಾವಕಡೆ ನೋಡಿದರೂ ದಿಕ್ಕೇ ತೋರದೆ ಹೋಯಿತು, ಎಲ್ಲಿಯಾದರೂ ಒಂದು ನಾಯಿಯಾದರೂ ಬೊಗಳಿತೆ ಎಂದು ಆಲಿಸಿ ಕೇಳಿದೆ. ಭರನೆ ಬೀಸುವ ಗಾಳಿಯ ಶಬ್ದ ವೊಂದು ಹೊರತು ಇನ್ನೇನೂ ಕೇಳಲಿಲ್ಲ. ಒಂದುಕಡೆ ನಿಂತುಕೊಂಡು ಏನು ಮಾಡಲಿ ಎಂದು ಕತ್ತೆತ್ತಿ ನೋಡಿದೆ. ಆಗ ಸಪ್ತಋಷಿ ನಕ್ಷತ್ರದ ರಾಶಿ