ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನ-ಲೋಕದಲ್ಲಿ ಜನರು ಇನ್ನೂ ಯಾವ ಯಾವ ಕಷ್ಟ ವನ್ನು ಅನುಭವಿಸುತ್ತಾರೋ ? ಜೋಯಿಸ-ಆದ್ದರಿಂದ ಅಂಥಾ ಕಷ್ಟಗಳು ಯಾವುದು ಬಂದರೂ ಅದೆಲ್ಲವನ್ನೂ ಸಹಿಸಿಕೊಳ್ಳುವಹಾಗೆ ನಾವು ಶಕ್ತಿಯನ್ನು ಉಂಟುಮಾಡಿ ಕೊಳ್ಳ ಬೇಕು. ಮದನ-ಈ ಮಾತು ನಿಜವೆಂದು ನನಗೂ ಈಗ ತೋರುತಿದೆ. ಮೊದಲಿಗೆ ಸ್ವಲ್ಪ ಯಾತನೆಯಾದರೂ ನಾನು ಅಳುವುದು, ಕೋಪ ಮಾಡಿಕೊಳ್ಳುವುದು, ಹೀಗಿತ್ತು ; ಈಗ ನನಗೆ ಯಾವ ಯಾತನೆ ಯಾದರೂ ಸರಿಯೆ, ನಾನು ಲಕ್ಷಮಾಡುವುದೇ ಇಲ್ಲ. ಜೋಯಿಸ-ನಿನಗೆ ಯಾವುದು ಉತ್ತಮವೆಂದು ತೋರುವುದು ? ಈಗಿನ ಸ್ಥಿತಿಯೆ ಪೂರ್ವದ ಸ್ಥಿತಿಯೆ ? ಮದನ-ಈಗ ನಾನು ಇರುವಹಾಗೆಯೇ ಇರುವುದು ಉತ್ತಮ. ನನಗೆ ಮೊದಲು ಶರೀರದಲ್ಲಿ ಏನಾದರೂ ಆಲಸ್ಯ ಇರುತ್ತಲೇ ಇತ್ತು. ನಿತ್ಯವೂ ಔಷಧವನ್ನು ಕೊಡುತಲೇ ಇದ್ದರು. ಈಗ ಯಾವ ರೋಗವೂ ಇಲ್ಲ. ಸುಖವಾಗಿದ್ದೇನೆ, ಆದರೆ ಜೋಯಿಸರೆ, ಹಾಗೆ ವಿಪರೀತವಾಗಿ ಹಿಮದಗಡ್ಡೆ ಬೀಳುವ ದೇಶ ಉಂಟೆ ? ಅಂಥಾ ಕಡೆ ಜನ ಬದುಕು -ವುದಕ್ಕಾದೀತೆ ? ಜೋಯಿಸ-ಅಂಥಾ ದೇಶದಲ್ಲಿರತಕ್ಕವರಿಗೆ ಅದೇ ಸರಿಯಾಗಿದೆ. `ಅವರನ್ನು ಇನ್ನೆಲ್ಲಿಗೆ ಕರೆತಂದರೂ ತಮ್ಮದೇಶಕ್ಕೆ ಹೋಗಬೇಕೆಂದು “ಅಪೇಕ್ಷಿಸುತ್ತಾರೆ. ಮದನ-ಅವರವರ ದೇಶ ಅವರಿಗೆ ಹೆಚ್ಚು, ಆದರೆ ನಮ್ಮ ಅರಮನೆಗೆ ಬರತಕ್ಕ ಅನೇಕರು ತಮ್ಮ ಜನ್ಮಸ್ಥಳವು ಹಳ್ಳಿಗಾಡಾದಾಗ್ಯೂ ಪಟ್ಟಣವಾಸವೇ ಉತ್ತಮವೆಂದು ಹೇಳುತ್ತಾರೆ : ಹಳ್ಳಿಗಾಡಿನಲ್ಲಿರತಕ್ಕೆ ವರು ಕಾಡುಜನರೆಂದೆನ್ನು ತಾರೆ, ಜೋಯಿಸ- ಪಟ್ಟಣಗಳ ಮುಖವನ್ನು ನೋಡದೆ, ಅನೇಕ ಜನರು ಇದಾರೆ, ಏನು ಸುಮತಿ, ಈ ಹಳ್ಳಿಗಾಡನ್ನು ಬಿಟ್ಟು ಷಹರಿಗೆ ಹೋಗಿ ಇರುವುದಕ್ಕೆ ನಿನಗೆ ಇಷ್ಟವಿದೆಯೆ ?