ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಸುಮತಿ ಮುದ ನಕುಮಾರರ ಚರಿತ್ರೆ - [ಅಧ್ಯಾಯ ಕಾಣಿಸುತಿದ್ದರು, ಅವರು ದೊಡ್ಡವರ ಮಕ್ಕಳಾಗಿರಬಹುದೆಂದು ತಿಳಿದು ನಾನು ಸ್ವಲ್ಪ ಅರುಗಾಗಿ ನಿಂತುಕೊಂಡೆ, ದೊಡ್ಡ ಪದವಿಯುಳ್ಳ ಜನ ರಿಗೆ ಮರ್ಯಾದೆ ತೋರಿಸಬೇಕೆಂದು ನಮ್ಮಯ್ಯ ಹೇಳಿಕೊಟ್ಟ ದಾರೆ. ಅದಕ್ಕಾಗಿಯೇ ಅವರಿಗೆ ದಾರಿಯನ್ನು ಬಿಟ್ಟು ನಾನು ಓರೆಯಾದೆ. ಇಷ್ಟರ ಮಾನ ಅವರಿಗೆ ಸಾಲದೇ ಹೋಯಿತು, ನನ್ನ ಮಗ್ಗುಲಲ್ಲಿ ಹೋಗುತ್ತಾ ನನ್ನನ್ನು ತಳ್ಳಿ ಬಿಟ್ಟು ಹೊರಟುಹೋದರು ; ನಾನು ಬಚ್ಚಲಿಗೆ ಬಿದ್ದೆ. ಮೈ ಮೋರೆಯೆಲ್ಲಾ ಕೊಚ್ಚೆಯಾಯಿತು, ಅವರು ಚಪ್ಪಾಳೆ ಹಾಕಿ ಕೊಂಡು ನಕ್ಕರು, ಯಾಕೆ ತಳ್ಳಿದಿರಿ, ಎಂದು ನಾನು ಕೇಳಿದೆ. ಇಬ್ಬರೂ ಓಡಿಬಂದು ನನ್ನ ಕೆನ್ನೆಗೆ ಹೊಡೆದರು. ನಾನು ಎದ್ದು ಅವರಿ ಬ್ಬರನ್ನೂ ಹೊಡೆಯುವುದಕ್ಕೆ ಮೊದಲುಮಾಡಿದೆ. ನನ್ನ ಏಟಗೆ ಇಬ್ಬರೂ ಅಳುತಾ ಓಡಿಹೋದರು, ಮೊದಲಿದ್ದ ಡಂಭ ಹಾರಿ ಹೋಯಿತು, ನಾನು ನಮ್ಮೂರಿಗೆ ಹೊರಟು ಬಂದೆ. ನನ್ನ ಜೊತೇ ಹುಡುಗರು-ಸುಮತಿ ಯಾವಾಗ ಬಂದೆ ? ಸ್ವಸ್ಥನಾಗಿದೀಯಾ ? ಎಂದು ಒಬ್ಬೊಬ್ಬರಾಗಿ ವಿಚಾರಿಸಿದರು, ಷಹರಿನವರ ಗುಣವೂ, ಹಳ್ಳಿ ಯವರ ಗುಣವೂ ಹೀಗಿದೆ.

  • ಜೋಯಿಸ-ಹಳ್ಳಿಗಾಡವಾಸವನ್ನು ಅಪೇಕ್ಷಿಸುವುದಕ್ಕೆ ಕಾರಣ ಈಗ ಗೊತ್ತಾಯಿತೆ ? ಷಹರಿನಲ್ಲಿರತಕ್ಕ ಜನರು ಯಾವ ಕೆಲಸವನ್ನೂ ಮಾಡದೆ, ಸಿಸ್ತು ಮಾಡಿಕೊಂಡು ಮೆರೆಯುವರು. ಅವರು ಯಾವ ಉಪಯೋಗಕ್ಕೂ ಬರುವುದಿಲ್ಲ. ಕೂತು ಕೂತು ಮೈ ಬೆಳೆಸಿಕೊಳ್ಳು ವರು, ಕಷ್ಟಕ್ಕೆ ತಡೆಯಲಾರರು, ಹಳ್ಳಿಗಳಲ್ಲಿ ಕಷ್ಟ ಪಡದಿದ್ದರೆ, ಸಾಗುವುದಿಲ್ಲ, ಆದ್ದರಿಂದಲೇ ಹಳ್ಳಿಗಾಡವಾಸ ಬೇಡವೆಂದು ಅವರು ಹೇಳುವರು, ಪಟ್ಟಣವಾಸಿಗಳಿಗೆ ಕಾಡಹರಟೆಯನ್ನು ಹರಟ ಕಾಲಾ ಕಳೆಯುವುದಕ್ಕೆ ಜೊತೆಗಾರರು ಬೇಕಾದಷ್ಟು ಸಿಕ್ಕುವರು. ನಾಲ್ಕು ಜನ ಸೇರಿದರೆ, ಇವನ ರುಮಾಲು ಓರೆ, ಅವರ ಮನೇಸಾರು ಸಪ್ಪೆ. ಇವಳ ಮೂಗು ಉದ್ದ, ಅವನ ಬೆಟ್ಟು ಸಣ್ಣದು, ಎಂದು ಮತ್ತೊಬ್ಬ ರನ್ನು ಆಕ್ಷೇಪಿಸಿ ಮಾತನಾಡುತ್ತಲೇ ಇರುವರೇ ಹೊರತು ಉಪಯೋಗ ವಾದ ಕೆಲಸವನ್ನು ಏನೂ ಮಾಡುವುದಿಲ್ಲ. ಡಂಭವಾಗಿ ತಿರುಗುವುದೇ