ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ನಾನು ಆಗಲೇ ಹೇಳಿಬಿಡುತಿದ್ದೆ, ಆದರೆ ನೀನೇ ತಿಳಿದುಕೊಳ್ಳಲಿ ಎಂದು ಸುಮ್ಮನಾದೆ. ಕಟ್ಟಿಗೆಯು ಉದ್ದವಾಗಿದ್ದಷ್ಟೂ ಭಾರವನ್ನು ಹೆಚ್ಚಾಗಿ ಎತ್ತುವುದು. ಆದರೆ ನಮ್ಮ ಕೈಗೆ ಅಡಗುವ ಹಾಗೆ ಇರಬೇಕು, ಎಂದು ಹೇಳಿ ಬೇರೆ ಕಟ್ಟಿಗೆ ತರುವುದಕ್ಕೆ ಒಂದು ಕಡೆಗೆ ಹೋದನು. ಅಲ್ಲಿ ಒಂದು ಮರವನ್ನು ಇಬ್ಬರು ಆಳುಗಳು ನಿಂತು ಕಡಿಯು ತಿದ್ದರು. ಮದನನಿಗೆ ಅದೂ ಒಂದು ಆಶ್ಚರ್ಯಕರವಾಗಿ ಕಂಡು ಬಂತು. ಅವನು-ಇಂಥಾ ದೊಡ್ಡ ಮರವನ್ನು ಇವರು ಕಡಿದಾರೆ ! ಇವರಿಗೆ ಬುದ್ದಿ ಇಲ್ಲ, ಎಂದನು. ಸುಮತಿಯು-ನಿನಗೆ ಹಾಗೆ ತೋರ ಬಹುದು, ನನ್ನ ಜೊತೆಗೆ ಒಬ್ಬ ಆಳನ್ನು ಕೊಡು, ನಾನು ಅದನ್ನು ಕಡಿದುಬಿಡುತ್ತೇನೆ, ನೋಡು, ಎಂದನು ; ತರುವಾಯ ಒಂದು ಚಮ್ಮಟಿಗೆ ಯನ್ನು ತೆಗೆದುಕೊಂಡು ಸುಮ್ಮನೆ ಆ ಮರದಮೇಲೆ ಇಪ್ಪತ್ತು ಮುವ್ವತ್ತು ಏಟುಗಳನ್ನು ಹೊಡೆದನು. ಅದು ಸ್ವಲ್ಪ ಜಜ್ಜಾ ಯಿತು. ಒಂದು ದಪ್ಪ ಉಳಿಯನ್ನು ಅದರಮೇಲಿಟ್ಟು ಸ್ವಲ್ಪ ಹೊಡೆದನು. ಉಳಿಯ ಬಾಯಿ ಸ್ವಲ್ಪ ಒಳಕ್ಕೆ ಹೋಯಿತು, ಸುಮತಿಯೂ, ಆಳೂ, ಇಬ್ಬರೂ ಚಮ್ಮಟಿಗೆ ಯಿಂದ ಉಳಿಯಮೇಲೆ ಹೊಡೆಯುತ್ತಾ ಬಂದರು, ಉಳಿ ಮರದ ಒಳಕ್ಕೆ ಇಳಿದುಹೋಯಿತು, ಮತ್ತೊಂದು ಉಳಿಯನ್ನು ಅದರ ಮಗ್ಗುಲಲ್ಲಿ. ಇಟ್ಟು ಪುನಃ ಚಮ್ಮಟಿಗೆಯಿಂದ ಹೊಡೆದರು, ಮರ ಸೀಳಿಹೋಯಿತು. ಈ ಪ್ರಕಾರ ಸುಮತಿಯು ಅದನ್ನು ಸೀಳಿದನು. ದಪ್ಪನಾಗಿರುವ ಒಂದು ಸೀಳನ್ನು ಮನೆಗೆ ತೆಗೆದುಕೊಂಡು ಹೋಗೋಣವೆಂದು ಸುಮತಿಯು ಹೇಳಿದನು. ಮದನ ಅದಕ್ಕೆ ಒಪ್ಪಲು, ಒಂದು ಕೋಲಿನ ಮಧ್ಯೆ ಹಗ್ಗ ವನ್ನು ಕಟ್ಟಿ, ಆ ಹಗ್ಗಕ್ಕೆ ಈ ಸೀಳನ್ನು ಕಟ್ಟಿ ದರು. ಸುಮತಿ ಮದನ ಇಬ್ಬರೂ-ಆ ಕೋಲನ್ನು ಹೆಗಲಮೇಲೆ ಹೊತ್ತುಕೊಂಡರು. ಮದನನು ಆ ಹಗ್ಗಕ್ಕೆ ಹತ್ತಿರವಾಗಿ ಕೋಲನ್ನು ಹೆಗಲಮೇಲೆ ಹೇರಿಕೊಂಡನು. ಸುಮತಿಯು ಇನ್ನೊಂದು ಕೊನೆಯಲ್ಲಿ ಹೊತ್ತು ಕೊಂಡನು. ಮದನನಿಗೆ ಭಾರ ಹೆಚ್ಚಾಯಿತು, ಆದರೆ ಸುಮತಿಯು ಲಕ್ಷ ವಿಲ್ಲದೆ ಹೊತ್ತು ಕೊಂಡು ಹೋಗುತ್ತಿರುವುದನ್ನು ಕಂಡು, ನಾಚಿಕೆಯಿಂದ ತಾನೂ ಮಾತನಾಡದೆ ಸುಮ್ಮನೇ ಹೋದನು. ಜೋಯಿಸನು ಇವರಿಬ್ಬರನ್ನೂ