ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ | [ಅಧ್ಯಾಯ ಏನೋ ಒಂದು ಅಭಿಮಾನವನ್ನು ಇಟ್ಟು ಕೊಂಡಿದ್ದರು. ಇವನಿಗೆ ಯಾವಾಗಲೂ ಕೋಪ ಬರುತ್ತಿರಲಿಲ್ಲ. ಇವನು ಇತರರಿಗೆ ಉಪಕಾರ ಮಾಡುವುದರಲ್ಲಿ ಅತ್ಯಂತವಾಗಿ ಸಂತೋಷ ಪಡುತ್ತಿದ್ದನು. ಮಗು ವಾದ ಈ ಸುನತಿಯು ಊಟ ಮಾಡುತ್ತಿರುವಾಗ ಯಾರಾದರೂ ಗೋಪಾಳದವರು “ ಕವಳ ” ಎಂದು ಕೂಗಿದರೆ, ತನ್ನ ಎಲೆಯಲ್ಲಿ ಬಡಿಸಿದ್ದ ಆಹಾರದಲ್ಲಿ ಅರ್ಧವನ್ನು ಅವರಿಗೆ ಹಾಕಿ ಬಿಡುತ್ತಿದ್ದನು. ಒಂದೊಂದು ಸಾರಿ ಬಡಿಸಿದ್ದನ್ನೆಲ್ಲಾ ಅವರಿಗೆ ಹಾಕಿ ಬಿಡುತ್ತಿದ್ದನು. ನೊಣಗಳನ್ನಾಗಲಿ, ಇರುವೆಗಳನ್ನಾಗಲಿ, ಇತರ ಹುಳುಗಳನ್ನಾಗಲಿ ಚಿಕ್ಕ ಹುಡುಗರು ಹಿಡಿದು ಹಿಂಸಿಸಿ ಕೊಲ್ಲುತ್ತಿದ್ದ ಹಾಗೆ ಇವನು ಹಿಂಸಿಸಿ ಕೊಲ್ಲುತ್ತಿರಲಿಲ್ಲ. ಆ ಬಡ ಜಂತುಗಳಿಗೂ ನಮ್ಮ ಹಾಗೆಯೇ ಯಾತನೆಯಾಗುವುದು, ಆದರೆ ಹೇಳಿಕೊಳ್ಳುವುದಕ್ಕೆ ಬಾಯಿ ಮಾತ್ರ ಇಲ್ಲವೆಂದು ಸುಮತಿಯು ಚೆನ್ನಾಗಿ ತಿಳಿದುಕೊಂಡಿದ್ದನು. ಯಾವಾ ಗಲೋ ಒಂದುಸಾರಿ ಮಾತ್ರ ಇವನು ಒಂದು ಮಿಡತೆಯನ್ನು ಹಿಡಿದು ಅದರ ಕಾಲಿಗೆ ಸಣ್ಣ ದಾರವನ್ನು ಕಟ್ಟ ಗಿಲ್ಲೊಂದು ತಿರುಗಿಸುತ್ತಿದ್ದನು. ಆದರೆ ಇದು ತಿಳಿವಳಿಕೆ ಸಾಲದ ದೋಷವೇ ಹೊರತು ಮತ್ತೇನೂ ಅಲ್ಲ. ಕೂಡಲೇ ಇವನ ತಂದೆಯು ಬಂದು, “ ಅ ಪ್ಪಾ, ಆ ಪ್ರಾಣಿ ಯನ್ನು ಯಾಕೆ ಹಿಂಸಿಸುತ್ತೀಯೆ ? ಚೂರಿ ತೆಗೆದುಕೊಂಡು ನಾವು ಕೈ ಕುಯಿದುಕೊಂಡಾಗ ನಮಗೆ ಎಂಥಾ ಯಾತನೆಯಾಗುವುದೋ ಅದಕ್ಕೆ ಈಗ ಅಂಥಾ ಯಾತನೆಯಾಗುತಿದೆ ” ಎಂದು ಹೇಳಲು, ಸುಮತಿಯು ತಂದೆಯ ಮುಖವನ್ನು ನೋಡಿ ಕಣ್ಣಿನಲ್ಲಿ ನೀರನ್ನು ತಂದುಕೊಂಡು ದಾರವನ್ನು ಬಿಚ್ಚಿ, ಆ ಮಿಡತೆಯನ್ನು ಮನೆಗೆ ತೆಗೆದುಕೊಂಡುಹೋಗಿ ಅದಕ್ಕೆ ಹಸುರು ಸೊಪ್ಪುಗಳನ್ನು ಕುಯಿದು ತಂದು ಹಾಕಿ ಹದಿನೈದು ದಿವಸ ಅದನ್ನು ತನ್ನಲ್ಲಿ ಇಟ್ಟು ಕೊಂಡು ಉಪಚಾರ ಮಾಡಿದನು. ಅದು ಸ್ವತಂತ್ರವಾಗಿ ಹಾರಾಡಬಹುದೆಂದು ತಿಳಿದು ಹೊರಕ್ಕೆ ಬಿಟ್ಟು ಬಿಟ್ಟನು, ಆಗಿನಿಂದಲೂ ಸುಮತಿಯು ಹೊರಕ್ಕೆ ಹೊರಟರೆ ಪ್ರಾಣಿ ಮಾತ್ರಕ್ಕೆ ಎಲ್ಲಿಯಾದರೂ ನೋಯಿಸಿಯೇನಲ್ಲಾ ಎಂದು ಅತಿ ಜಾಗರೂ ಕತೆಯಿಂದ ಕಾಲನ್ನು ಇಡುತಾ ಹಕ್ಕಿಗಳಿಗೆ ಕಾಳನ್ನು ಹಾಕುತ್ತಾ