ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩). ಸುಮತಿ ಮದನಕುಮಾರರ ಚರಿತ್ರೆ ೧೬೭ ನೋಡಿ,-ಮದನ, ಯಾರು ನಿನಗೆ ಇಷ್ಟೊಂದು ಭಾರವನ್ನು ಹೊರಿಸಿ ದರು ?” ಎಂದನು. ಸುಮತಿ ಹೊರಿಸಿದನೆಂದು ಮದನ ಹೇಳಿದ ಮಾತನ್ನು ಕೇಳಿ, ಜೋಯಿಸನು--ನಿನಗೆ ತಿಳಿಯದಂತೆ ಸುಮತಿಯು ನಿನಗೆ ಮೋಸಮಾಡುವುದಕ್ಕೆ ಯತ್ನಿಸಿದ್ದು ಇದೇ ಮೊದಲು, ಎಂದು ನುಡಿದನು, ಆ ಮಾತಿಗೆ ಸುಮತಿಯು-ಗುರುಗಳೆ, ಮದನನಿಗೆ ಆಗಲೇ ಭಾರವನ್ನು ಕಡಮೆಮಾಡು ತಿದ್ದೆ, ಆದರೆ ಸನ್ನೆ ಮರವನ್ನು ನೋಡಿ, ಇವನಿಗೆ ಬಹು ಆಶ್ಚರ್ಯವಾಯಿತು, ಆದಕಾರಣ ಅದಕ್ಕೆ ಸಂಬಂಧ ಪಟ್ಟಿ ಮತ್ತೊಂದು ಸಂಗತಿಯನ್ನು ತಿಳಿಸೋಣವೆಂದು ಹೀಗೆ ಹೊರಸಿ ಕೊಂಡು ಬಂದೆ, ಎಂದು ಹೇಳಿ, ತಾನು ಹೊತ್ತಿದ್ದ ಕಡೆ ಮದನನಿಗೆ ಕೊಟ್ಟು, ಅವನಕಡೆ ತಾನು ಹೊತ್ತು ಕೊಂಡು--ಮದನ, ಈಗ ಭಾರ ಹೇಗಿದೆ ? ಎಂದನು. ಮದನಕುಮಾರನು ಬೆರಗಾಗಿ--ನನಗೆ ಭಾರ ಕಡಮೆಯಾಗಿದೆ, ಇದು ಹೇಗೆ ಆಯಿತು ? ಎಂದನು. ಆಗ ಜೋಯಿ ಸನು--ನೋಡು, ಮರದ ತುಂಡು ಮೊದಲಿಗಿಂತ ಈಗ ನಿನಗೆ ದೂರ ವಾಗಿದೆ, ಸುಮತಿಗೆ ಹತ್ತಿರವಾಗಿದೆ, ಆದ್ದರಿಂದ ಭಾರವಾದ ಕಡೆ ಅವ ನಿಗೆ ಹೋಯಿತು; ಹಗುರವಾದ ಕಡೆ ನಿನಗೆ ಬಂತು, ಎಂದನು. ಇದನ್ನು ಕೇಳಿ, ಮದನನು ಆಹ ! ಇದು ಚಮತ್ಕಾರವೇಸರಿ, ನಮಗೆ ತಿಳಿ ಯದ ಸಂಗತಿ ಎಷ್ಟೋ ಇದೆ, ಎಂದುಕೊಂಡನು. ತರುವಾಯ ಜೋಯಿಸನು ಮದನನನ್ನು ಅಂಗಡಿಗೆ ಕರೆದು ಕೊಂಡು ಹೋಗಿ, ಒಂದು ತಕ್ಕಡಿಯನ್ನು ತೆಗೆದುಕೊಂಡು ಬಂದು ಕಡ್ಡಿ ಯ ಮಧ್ಯಭಾಗಕ್ಕೆ ದಾರವನ್ನು ಕಟ್ಟಿ ಹಿಡಿದುಕೊಂಡನು. ಆಗ ಎರಡು ಕಡೆಗೂ ಸಮನಾದ ತೂಕವನ್ನು ಹಾಕಿದರೆ ಕಡ್ಡಿ ಹೀಗೆಯೇ ನಿಂತುಕೊಳ್ಳುವುದು; ಆದರೆ ಆ ಕಡ್ಡಿಯ ಮಧ್ಯೆ ಕಟ್ಟಿ ರುವ ದಾರವನ್ನು ಒಂದು ಕಡೆಗೆ ಹೆಚ್ಚಾಗಿ ತಳ್ಳಿದರೆ ಏನಾಗುತ್ತೆ ನೋಡೋಣ, ಎಂದು ಸ್ವಲ್ಪ ತಳ್ಳಲು ತಕ್ಕಡೀ ಕಡ್ಡಿ ಯು ಉದ್ದ ಹೆಚ್ಚಾಗಿದ್ದ ಕಡೆ ಕೆಳಕ್ಕೆ ಬಂತು, ಪುನಃ ಜೋಯಿಸನು ಈಗ ನೋಡು, ತಕ್ಕಡಿ ಚಿಕ್ಕದಾದ ಕಡೆ ಭಾರವನ್ನು ಹೆಚ್ಚಾಗಿ ಹಾಕಿದರೆ, ತೂಕ ಸರಿಯಾಗಿ ನಿಂತುಕೊಳ್ಳು ವುದು ಎಂದು, ಆ ತಕ್ಕಡಿಯ ಸಣ್ಣ ತೋಳ ಕಡೆ ಭಾರವನ್ನು ಹೆಚ್ಚಿಸಿ 12