೧೭೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ದನು. ಉದ್ದವಾದ ಕಡೆ ಉದ್ದ ಎಷ್ಟು ಹೆಚ್ಚಾಗಿತ್ತೊ, ಗುತ್ರನಾದ ಕಡೆ ಭಾರವನ್ನು ಅದಕ್ಕೆ ತಕ್ಕಂತೆ ಹೆಚ್ಚಿಸಲು, ತಕ್ಕಡಿಯು ನಿಂತು ಕೊಂಡಿತು, ಇದನ್ನು ಕಂಡು ಮದನನು ಬೆರಗಾದನು. ಆಮೇಲೆ ಜೋಯಿಸನು ತನ್ನ ಕಣಜದ ಹತ್ತಿರಕ್ಕೆ ಹೋಗಿ, ಒಂದು ಚೀಲ ತುಂಬ ಬತ್ತವನ್ನ ತುಂಬಿ ಅದನ್ನು ಎತ್ತು ಎಂದು ಮದನ ನಿಗೆ ಹೇಳಿದನು, ಮದನನು ಆ ಮಾತಿಗೆ ನಗುತ್ತಾ, ತನ್ನ ಕೈಲಾಗುವು ದಿಲ್ಲವೆಂದು ಹೇಳಿದನು. ಆಗ ಉಪಾಧ್ಯಾ ಯನು ತೊಲೆಯ ನಾಗ ವಾಸಕ್ಕೆ ಒಂದು ರಾಟೆಯನ್ನು ಕಟ್ಟಿ, ಬತ್ತದ ಚೀಲಕ್ಕೆ ಒಂದು ಹಗ್ಗದ ಕೊನೆಯನ್ನು ಬಿಗಿದು, ಆ ಹಗ್ಗ ವನ್ನು ರಾಟೆಯಮೇಲಿ ನಿಂದ ತೆಗೆದು ಕೊಂಡು, ಅದನ್ನು ಎಳೆಯುವಂತೆ ಮದನನಿಗೆ ಹೇಳಿದನು. ಬತ್ತದ ಚೀಲ ಮೇಲಕ್ಕೆ ಎದ್ದಿತು. ಆಗ ಮದನನು-ಇದೇನು ಸೋಜಿಗ ! ಆಗ ಎತ್ತುವುದಕ್ಕಾಗಲಿಲ್ಲ, ಈಗ ಎತ್ತುವುದಕ್ಕಾಯಿತು ? ಎಂದು ಹೇಳಲು, ಜೋಯಿಸನು-ದೊಡ್ಡವರು ಮಾಡತಕ್ಕ ಕೆಲಸವನ್ನು ಚಿಕ್ಕ ವರು ಸಹಿತ ಮಾಡುವುದಕ್ಕೆ ಇದೂ ಒಂದು ಉಪಾಯ, ಎಂದನು. ಮದನ- ವಿದ್ಯವನ್ನು ಕಲಿತುಕೊಳ್ಳುವುದು ಉತ್ತಮ. ಅದ ರಿಂದ ನಮಗೆ ಬುದ್ದಿ ಯು ಹೆಚ್ಚುವುದು, ದೇಹದ ಶಕ್ತಿಯೂ ಹೆಚ್ಚು ವುದು. ಇಂಥಾ ಯುಕ್ತಿಗಳು ಇನ್ನೂ ಇವೆಯೆ ? ಜೋಯಿಸ ಬೇಕಾದಷ್ಟು ಇವೆ. ಮುಂದಕ್ಕೆ ಕಲಿತುಕೊಳ್ಳು ವಂತೆ, ಮೊದಲು ಗಣಿತವನ್ನು ಕಲಿತುಕೊಂಡು ಬರವಣಿಗೆಯನ್ನು ತಿಳಿದುಕೊ. ಮದನ-ಗಣಿತ ಎಂದರೇನು ? ಜೋಯಿಸ-ಅದು ಇಂಥಾದ್ದೆಂದು ಈಗ ಹೇಳುವುದಕ್ಕಾಗುವು ದಿಲ್ಲ, ಈಗ ಅದರ ಸಂಗತಿಯನ್ನು ಸ್ವಲ್ಪ ತಿಳಿಸುತ್ತೇನೆ. ಆ ಗೋಡೆಯ ಹತ್ತಿರ ಎಷ್ಟು ಬತ್ತದ ಕಾಳು ಬಿದ್ದಿದೆ, ಎಣಿಸು. ಮದನ-ಇಪ್ಪತ್ತೈದು. ಜೋಯಿಸ-ಆ ಚೀಲದ ಹತ್ತಿರ ಎಷ್ಟು ಕಾಳು ಬಿದ್ದಿದೆ ? ಮದನ-ಹದಿನಾಲ್ಕು.
ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೧
ಗೋಚರ