ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ ರೂಪಾಯಿ ತೂಕಕ್ಕೆ ಎರಡು ಸಾವಿರದ ನಾನೂರು ಕಾಳಾಯಿತು, ಅದೇ ಒಂದು ಚಟಾಕು, ಎರಡು ಸಾವಿರದ ನಾನೂರನ್ನು ಎಂಟುನೂರು ಸಾರಿ ಗುಣಿಸಿದರೆ, ಬರುವ ಲೆಕ್ಕ ಈ ಚೀಲದಲ್ಲಿರುವ ಕಾಳಿನ ಲೆಕ್ಕ. ಮದನ-ಜೋಯಿಸರೆ, ಈ ಚಮತ್ಕಾರವನ್ನು ನನಗೆ ಹೇಳಿ ಕೊಡಬೇಕು. ಜೋಯಿಸ-ನಿನಗೆ ಬೇಕಾದ್ದನ್ನು ಹೇಳಿಕೊಡುತೇನೆ. ಇದು ಹಾಗಿರಲಿ, ಒಂದು ಕಥೆಯನ್ನು ಹೇಳುತೇನೆ. ಒಂದು ಊರಿನಲ್ಲಿ ಒಬ್ಬ ಅರಸು ಇದ್ದನು, ಇವನಿಗೆ ಕುದುರೆ ಗಳಲ್ಲಿ ಬಹು ಪ್ರೀತಿ ಇತ್ತು, ಅವುಗಳಿಗೆ ಎಷ್ಟು ಕ್ರಯವನ್ನಾದರೂ ಕೊಟ್ಟು ಕೊಂಡುಕೊಂಡು ಬಹು ಅಕ್ಕರೆಯಿಂದ ಸಾಕುತಿದ್ದನು. ಒಂದು ದಿನ ಒಬ್ಬ ಅರಬ್ಬಿವರ್ತಕನು ಒಂದು ಅಶ್ವವನ್ನು ತಂದು ಅರಸನಿಗೆ ತೋ ರಿಸಿದನು, ಈ ಕುದುರೆಯು ಸಲಕ್ಷಣವಾಗಿತ್ತು. ಸುಳಿ ಮೊದಲಾದ್ದೆಲ್ಲಾ ಸರಿಯಾಗಿತ್ತು, ಹೀಗೆ ನೋಟಕ್ಕೆ ಸುಂದರವಾಗಿರಲು ದೊರೆಯು ಅದರ ಮೇಲೆ ಏರಿಕೊಂಡು ಸ್ವಲ್ಪ ದೂರ ಓಡಾಡಿಸಿದನು. ಅದು ನಡಗೆ ಯಲ್ಲಿಯೂ ಬಹು ಸೌಮ್ಯವಾಗಿತ್ತು, ಮತ್ತು ಸವಾರನು ಮಾಡಿದ ಹಾಗೆಲ್ಲಾ ಸಂಜ್ಞೆಯನ್ನು ತಿಳಿದುಕೊಂಡು ಹೋಗುತಿತ್ತು. ಅರಸನಿಗೆ ಇದನ್ನು ಕಂಡು ಬಹು ಸಂತೋಷವಾಯಿತು. ಅದರ ಕ್ರಯವೆಷ್ಟೆಂದು ಅರಬ್ಬಿ ವರ್ತಕನನ್ನು ಕೇಳಲು, ಅವನು-ಇದಕ್ಕೆ ಒಂದು ಸಾವಿರ ವರಹವನ್ನು ಕೊಡಬೇಕೆಂದು ಹೇಳಿದನು. ಈ ಕ್ರಯ ಹೆಚ್ಚೆಂದು ದೊರೆ ಹೇಳಲು, ಅರಬ್ಬರವನು ಕುದುರೆಯನ್ನು ತೆಗೆದುಕೊಂಡು ಹೊರಟುಹೋಗುತಿದ್ದನು, ಅದರಮೇಲೆ ವಿಶೇಷ ಮನಸ್ಸಿದ್ದ ದೊರೆಯು ಅವನನ್ನು ಹಿಂತಿರುಗಿ ಕರೆಯಿಸಿ, ಅದರ ಕ್ರಯವನ್ನು ಸಲುವಳಿಯಾಗಿ ಮಾಡಿಕೊಳ್ಳುವುದಕ್ಕೆ ಮತ್ತೇನೂ ಮಾರ್ಗವಿಲ್ಲವೆ ? ಎಂದು ಕೇಳ ಲಾಗಿ, ಆ ಕುದುರೇ ಸಾಹುಕಾರನು-ಮಹಾಸ್ವಾಮಿ, ನಾನು ಹೇಳಿದ ಸಾವಿರ ವರಹಕ್ಕೆ ಒಂದು ಕಾಸು ಕಡಮೆಯಾದರೂ, ನಾನು ತೆಗೆದು ಕೊಳ್ಳುವುದಿಲ್ಲ. ಅದು ಹಾಗಿರಲಿ, ನಾನು ಇನ್ನೊಂದು ಮಾತನ್ನು ಹೇಳುತೇನೆ, ಲಾಲಿಸಬೇಕು. ಆ ಕುದುರೇ ಕಾಲಿನ ಲಾಳಕ್ಕೆ ಎಷ್ಟು