ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನ ಕುಮಾರರ ಚರಿತ್ರೆ ದಾರಿತಪ್ಪಿ ಹೋಗುತಿದ್ದ ಹುಳುಗಳನ್ನು ಯಾರೂ ತುಳಿಯದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಮೆಲ್ಲಗೆ ಬಿಡುತಾ ಇದ್ದನು, ಹಸುವನ್ನು ಕಂಡಾಗ ಅದರ ಮೈಯನ್ನು ತಡವರಿಸುತಿದ್ದನು. ಕಂಡ ಕಡೆಯಲ್ಲಿ ಗರಿಕೆ ಹುಲ್ಲನ್ನು ಕಿತ್ತು ಕರುಗಳ ಬಾಯಿಗೆ ಕೊಡುತ್ತಿದ್ದನು. ಯಾವ ಹಸುರು ಸಿಕ್ಕಿದರೂ ಕಿತ್ತು ಮೇಕೆಗಳ ಮುಂದೆ ಹಾಕುತ್ತಿದ್ದನು. ಆದ್ದ ರಿಂದ ಎಳೆಗರುಗಳು ಇವ ಎಲ್ಲಿ ಹೋದರೂ ಹಿಂದೆಯೇ ಹೋಗುತಿ ದ್ದವು. ಎಂಥಾ ಅಸಹ್ಯವಾದ ಜಂತುವಾದರೂ ಅದನ್ನು ಬಾಧಿಸದೆ ನೋಡಿಕೊಳ್ಳುತ್ತಿದ್ದನು. ಜಾಡ, ಕಪ್ಪೆ, ಕಟ್ಟಿರುವೆ, ಕೆಂಜಗ ಮೊದ ಲಾದವುಗಳಿಗೆ ಕೂಡ ಇವನ ದಯಾರಸದ ಫಲ ಇಲ್ಲದೇ ಇರಲಿಲ್ಲ. “ ನಾವು ಹೇಗೆ ಬಾಧೆ ಇಲ್ಲದೆ ಜೀವಿಸಿಕೊಂಡಿರಬೇಕೆಂದು ಇಷ್ಟ ಪಡು ವೆವೋ ಹಾಗೆಯೇ ಎಲ್ಲಾ ಜಂತುಗಳೂ ಇಷ್ಟ ಪಡುವವು. ಅವುಗಳನ್ನು ಕಂಡರೆ ನಮಗೆ ಆಗದೇ ಹೋದ ಮಾತ್ರಕ್ಕೆ ಆ ಬಡ ಪ್ರಾಣಿಗಳನ್ನು ಕೊಲ್ಲುವುದು ಯಾವ ನ್ಯಾಯ ?” ಎಂದು ಆಗಾಗ್ಗೆ ಹೇಳುತಿದ್ದನು. ಇಂಥಾ ಅಭಿಪ್ರಾಯವನ್ನು ಇಟ್ಟು ಕೊಂಡಿದ್ದನಾದ್ದರಿಂದ ಈ ಸುಮತಿಯು ಎಲ್ಲರಿಗೂ ಬೇಕಾದವನಾಗಿದ್ದನು, ಮುಖ್ಯವಾಗಿ ಆ ಪಟ್ಟಣದ ವೈದಿಕರೆಲ್ಲಾ ಇವನ ಮೇಲೆ ವಿಶೇಷವಾಗಿ ಅಭಿಮಾನ ವನ್ನು ಇಟ್ಟು ಕೊಂಡಿದ್ದರು. ನೋಡುವುದಕ್ಕೆ ಪಟುವಾಗಿ ಒಳ್ಳೆ ಸ್ವಭಾವವುಳ್ಳವನಾಗಿದ್ದ ಈ ಹುಡುಗನಿಗೆ ಸ್ಥಳದ ಜೋಯಿಸನಾದ ರಾಮಜೋಯಿಸನು ಶ್ಲೋಕಗಳನ್ನು ಹೇಳಿಕೊಡುವುದು, ಬರೆಯುವು ದಕ್ಕೆ ಹೇಳಿಕೊಡುವುದು, ಹೀಗೆಲ್ಲಾ ಮಾಡುತ್ತಿದ್ದನು. ಇ೦ಥಾ - ಹುಡುಗನ ಮೇಲೆ ರಾಮಜೋಯಿಸನಿಗೆ ಅಭಿಮಾನವಿದ್ದದೇನೋ ಆಶ್ಚರ್ಯವಲ್ಲ. ಹೇಳಿಕೊಟ್ಟದ್ದನ್ನೆಲ್ಲಾ ಜಾಗ್ರತೆಯಾಗಿ ಕಲಿತುಕೊಳ್ಳು ತಿದ್ದನಲ್ಲದೆ, ಈ ಬಾಲಕನು ಪ್ರಾಮಾಣಿಕನಾಗಿ, ಯಾವಾಗಲೂ ಉಸ ಕಾರಿಯಾಗಿಯೇ ಇರುತ್ತಿದ್ದನು. ಏನಾದರೂ ಕೆಲಸವನ್ನು ಅವನಿಗೆ ಹೇಳಿದರೆ ಸ್ವಲ್ಪವೂ ಅಸಮಾಧಾನ ಪಡದೆ, ಸ್ವಲ್ಪವೂ ಗೊಣಗದೆ ಮಾಡುತ್ತಿದ್ದನು. ಇದೂ ಅಲ್ಲದೆ ಸುಮತಿಯು ಹೇಳಿದ ಮಾತನ್ನೆಲ್ಲಾ ನಾವು ನಂಬಬಹುದಾಗಿತ್ತು, ಒಂದಾನೊಂದು ಸಂದರ್ಭದಲ್ಲಿ ಸುಳ್ಳು