ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ನೆ ಅಧ್ಯಾಯ ಆಗ ಸುಮತಿಯು ಕಥೆಯನ್ನು ಹೇಳಲು ಮೊದಲು ಮಾಡಿದ್ದು ಹೇಗೆಂದರೆ :- ಈಗ್ಗೆ ಅನೇಕ ವರುಷಗಳಿಗೆ ಮುಂಚೆ, ಸುರ ಪುರ ಪ್ರಾಂತ್ಯದಲ್ಲಿ ಬೇಡರು ವಿಶೇಷವಾಗಿದ್ದರು. ಅವರಲ್ಲಿ ಧೀರನಾಯಕನೆಂಬುವನು ಮುಖಂಡ, ಕೋಟೆ ಕೊತ್ತಳಗಳನ್ನು ಕಟ್ಟಿ ಕೊಂಡು, ಯಾವ ಶತ್ರು ಬಂದರೂ ಹೊಡೆದು ಅಟ್ಟು ತಾ, ಇವನು ಬಹು ಪರಾಕ್ರಮಿಯಾ ಗಿದ್ದನು. ಈ ಬೇಡರು ಅ೦ಗಪುಷ್ಟಿಯಾಗುವಂತೆ ಸಾಧಕಗಳನ್ನು ಮಾಡುವುದೂ, ಕಷ್ಟಕ್ಕೆ ನುರುಗುವುದೂ, ಎ೦ಥಾ ಬಾಧೆ ಬ೦ದಾಗ್ಯೂ ಸಹಿಸಿಕೊಳ್ಳುವುದೂ, ಇಂಥಾ ಕೆಲಸಗಳಲ್ಲಿ ವಿಶೇಷ ಆಸಕ್ತಿಯುಳ್ಳವ ರಾಗಿದ್ದರು. ಇವರಲ್ಲಿ ಇದೇ ಹುಡುಗರಿಗೆ ವಿದ್ಯಾಭ್ಯಾಸ, ದೊರೆ ಮಕ್ಕಳಾದರೂ ಸರಿಯೆ, ಬಡವರ ಮಕ್ಕಳಾದರೂ ಸರಿಯೆ, ಪಕ್ಷಪಾತ ವೇನೂ ಇರಲಿಲ್ಲ. ಎಲ್ಲರೂ ಏಕ ರೀತಿಯಾಗಿ ಕಷ್ಟ ಪಟ್ಟು ಸಮಯದಲ್ಲಿ ಯಾವ ಕೆಲಸಕ್ಕಾದರೂ ಸಿದ್ದವಾಗಿರುತಿದ್ದರು. ಹೀಗಿರುವಲ್ಲಿ ತುರುಕರು ಈ ದಕ್ಷಿಣ ದೇಶಕ್ಕೆ ಆಗಾಗ್ಗೆ ಬಂದು, ಕೊಳ್ಳೆ ಹೊಡೆದು, ಜನರನ್ನು ಕೊಂದು, ರಾಜ್ಯವನ್ನು ಹಾಳುಮಾಡಿ ಹೋಗುತಿದ್ದರು. ಇವರ ಹಾವಳಿಯಲ್ಲಿ ಅನೇಕ ಸಂಸ್ಥಾನಗಳು ಹೋದವು, ದೊಡ್ಡ ದೊಡ್ಡ ಪಟ್ಟಣಗಳೆಲ್ಲಾ ಹಾಳೂರುಗಳಾದವು. ಇಂಥಾ ತುಂಟ ತುರುಕರನ್ನು ಎದುರಿಸುವುದಕ್ಕೆ ಈ ಬೇಡರು ಹೊರತು ಮತ್ತೆ ಯಾರೂ ಇರಲಿಲ್ಲ. ಧೀರನಾಯಕನು ತನ್ನ ಜನರನ್ನು ಕರೆದು ಕೊಂಡು ಹೋಗಿ, ಸಿಕ್ಕಿದ ಕಡೆ ತುರುಕರನ್ನು ಹೊಡೆದು ಓಡಿಸುತಾ ಇದ್ದನು, ಈ ಬೇಡರು ಹಗಲು ಅನ್ನ ನಿಲ್ಲದೆ ಒಣಕಲು ರೊಟ್ಟಿಯನ್ನು ಕಡಿಯುತಾ, ರಾತ್ರಿ ಮಲಗುವುದಕ್ಕೆ ಸ್ಥಳವಿಲ್ಲದೆ ಕಾಡಿನಲ್ಲಿ ಗಿಡದ ಕೆಳಗೂ, ಬೇಲಿಯ ಕೆಳಗೂ, ಬಿದ್ದು ಕೊಂಡಿರುತ್ತಾ, ಅತ್ಯಂತ ಶ್ರಮ ಪಟ್ಟು ತುರುಕರನ್ನು ಅಡಗಮೆಟ್ಟಿ ದರು. ಕೊನೆಗೆ ಒಂದು ಸಮಯ 13