ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ದಲ್ಲಿ ಈ ಎರಡು ಸೇನೆಗೂ ಕೈಗೂಡುವ ಸಂದರ್ಭ ಸಿಕ್ಕಿತು, ಕೊಂಬಿನ ಕೂಗಿನ ದೂರದಲ್ಲಿ ಎರಡು ದ೦ಡೂ ಪಾಳಯವನ್ನು ಹಾಕಿ ಇಳಿದು ಕೊಂಡಿತು. ತುರು ಕರ ಕಡೆ ದಂಡು ಮುವ್ವತ್ತು ಸಾವಿರದ ಮೇಲಿತ್ತು. ಧೀರನಾಯಕನ ಕಡೆಯವರೆಲ್ಲರನ್ನೂ ಸೇರಿಸಿ ಎಣಿಸಿದರೂ ಇನ್ನೂ ರು ಕುದುರೆ, ಸಾವಿರ ಕಾಲಾಳು, ಇದರ ಮೇಲೆ ಆಗುತ್ತಿರಲಿಲ್ಲ. ಆದಾಗ್ಯೂ ಬೇಡರ ಮುಂದೆ ಮುಸಲ್ಮಾನರು ಹಾಯುವುದು ಕಷ್ಟವಾಗಿತ್ತು. - ಆಗ ಮುಸಲ್ಮಾನರ ಸೇನಾಪತಿಯಾದ ಜಲಾಲುದೀನನು ತನ್ನ ಮನಸ್ಸಿನಲ್ಲಿ ಯುದ್ಧ ಮೊದಲಾಗುವುದಕ್ಕೆ ಮುಂಚೆ ಯೋಚಿಸಿಕೊಂಡು, ಯುದ್ದ ವಾಗುವುದಕ್ಕೆ ಮುನ್ನಾ ದಿನ ಸಾಯಂಕಾಲ ಉತ್ತಮವಾದ ಅಡಿಗೆಯನ್ನು ಬೇಕಾದಷ್ಟು ಮಾಡಿಸಿ, ಆ ರುಚಿರುಚಿಯಾದ ಪದಾರ್ಥ ಗಳನ್ನೂ ಮೆತ್ತಗಿರುವ ಸಾವಿರಾರು ಹಾಸಿಗೆಗಳನ್ನೂ ಹೊದಿಕೆಗಳನ್ನೂ ಶತ್ರುಸೇನೆಗೆ ಕಳುಹಿಸಿ, ಆ ಬೇಡರ ಒಬ್ಬೊಬ್ಬ ಭಟ್ಟನಿಗೂ ಪದಾರ್ಥ ಗಳನ್ನು ಬಡಿಸಿ, ತಲೆಗೆ ಒಂದು ಹಾಸಿಗೇ ಪ್ರಕಾರ ಕೊಡುವಂತೆ ಏರ್ಪಾಡು ಮಾಡಿಸಿದನು. ಒಂದೆರಡು ದಿವಸ ಹೀಗೆ ಚೊಕ್ಕ ಭೋಜನ ವಾಯಿತು. ಮೆತ್ತಗಿರುವ ಹಾಸಿಗೆ ಸಿಕ್ಕಿದ್ದರಿಂದ ನಿದ್ರೆಯು ಚೆನ್ನಾಗಿ ಬಂತು. ತರುವಾಯ ಬೇಡರ ಸೇನೆಯಲ್ಲಿ ಕೆಲವರು ತಪ್ಪಿಸಿಕೊಂಡು ಓಡಿಹೋದರು, ಇನ್ನು ಕೆಲವರಿಗೆ ಆಲಸ್ಯ ಉಂಟಾಯಿತು. ಈ ಒಡ ಕನ್ನು ತಿಳಿದು ಜಲಾಲುದೀನನು ತಾನು ಮಾಡಿದ ತಂತ್ರ ಸಾಗಿತಲ್ಲಾ, ಎಂದು ಸಂತೋಷದಿಂದ ಶತ್ರುಗಳಿಗೆ ಯುದ್ಧ ಕೊಡುವುದಕ್ಕೆ ಅನು ವಾದನು. ಧೀರನಾಯಕನು ಸೇನೆಯನ್ನು ಸಜ್ಜು ಮಾಡಿಕೊಳ್ಳ ಬೇಕೆಂದು ಹೊರಡುವಾಗ್ಗೆ, ಅನೇಕರು ಬರದೇ ಹೋದರು, ಆಶ್ಚರ್ಯದಿಂದ ಇದಕ್ಕೆ ಕಾರಣವೇನೆಂದು ಯೋಚಿಸಲು, ಉತ್ತಮವಾದ ತಿಂಡಿಯನ್ನೂ, ಹಾಸಿಗೆಯನ್ನೂ, ಜಲಾಲುದೀನನು ತನ್ನ ಸೇನೆಯವರಿಗೆಲ್ಲಾ ಮೂರು ದಿನದಿಂದ ಹವಣಿಸಿಕೊಡುತಿದ್ದ ಸಂಗತಿ ತಿಳಿಯಬಂತು, ಆಗ ಬೇಡರ ಸೇನಾಪತಿಯು-ಓಹೊ ! ಮೋಸವಾಯಿತು, ವಿಶೇಷವಾಗಿ ಕಷ್ಟ ಪಟ್ಟು ನುರುಗಿದ್ದ ಕಾರಣ ನಮ್ಮ ಜನರು ಶ್ರಮಕ್ಕೆ ಹೆದರದೆ ಪರಾಕ್ರಮ ದಿಂದ ಹಗೆಗಳ ಮೇಲೆ ಬಿದ್ದು ಅವರನ್ನು ಸೋಲಿಸುತಿದ್ದರು. ಆದ್ದ