ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೭ ೧೪] ಸುಮತಿ ಮದನಕುಮಾರರ ಚರಿತ್ರೆ ರಿಂದಲೇ ನಾವು ನೂರಾರು ಜನವಿದ್ದರೂ ಹತ್ತಿಪ್ಪತ್ತು ಸಾವಿರ ತುರುಕ ರನ್ನು ಹೊಡೆದು ಓಡಿಸುತಿದ್ದೆವು. ತುರುಕರ ಸೇನೆಯು ಸೌಖ್ಯಾಪೇಕ್ಷೆ ಯನ್ನು ಪಟ್ಟು, ಆನಂದವಾಗುತಿದ್ದ ಕಾರಣ, ಅವರಲ್ಲಿ ಹೇಡಿತನ ಹೆಚ್ಚಾಗಿ, ಅವರು ಸೋತುಹೋಗುತಿದ್ದರು. ಜಲಾಲುದೀನನು ಈ ಗುಟ್ಟನ್ನು ಅರಿತು ನಮ್ಮವರು ದೇಹ ಸೌಖ್ಯದ ರುಚಿಯನ್ನು ನೋಡು ವಂತೆ ಮಾಡಿದ ಕಾರಣ ನಮ್ಮ ಸೇನೆಗೆ ಹೇಡಿತನ ಬಂತು ಎಂದು ವ್ಯಸನಪಟ್ಟು, ಒಂದು ದಿನ ರಾತ್ರೆ ತನ್ನವರನ್ನು ಕುರಿತು ನಮ್ಮ ದೇಶಕ್ಕೋಸ್ಕರ ಪ್ರಾಣವನ್ನು ಒಪ್ಪಿಸತಕ್ಕ೦ಥಾ ಶೂರರು ಎಷ್ಟು ಜನ ನಿದ್ದಿರಿ, ಅವರೆಲ್ಲಾ ನನ್ನ ಸಂಗಡ ಹೊರಡಿ, ಎಂದನು, ಆಗ ಮುನ್ನೂರು ಜನದಮಟ್ಟಿಗೆ ಆಯುಧಪಾಣಿಗಳಾಗಿ ಹೊರಟರು, ಅವ ರನ್ನು ಕರೆದುಕೊಂಡು, ಸದ್ದು ಇಲ್ಲದಹಾಗೆ, ಧೀರನಾಯಕನು ಶತ್ರು ಸೇನೆಗೆ ನುಗ್ಗಿದನು, ತುರುಕರೆಲ್ಲರೂ ಬೇಕಾದ ತಿಂಡಿಯನ್ನು ತಿಂದು ಆನಂದವಾಗಿದ್ದರು. ಈ ಮುನ್ನೂರು ಜನ ಬೇಡರೂ ತುರುಕರೆಲ್ಲರನ್ನೂ ಛಿದ್ರಗಡಿತ ಕಡಿದರು, ಅನೇಕ ಜನ ತುರುಕರು ನಾಶವಾದರು. ಉಳಿ ದವರು ಬೇಡರಮುಂದೆ ನಿಲ್ಲಲಾರದೆ ಓಡಿಹೋದರು. ಧೀರನಾಯಕ ನಿಗೆ ಜಯವಾಯಿತು, ಆದರೆ ಜಲಾಲುದೀನನು ಮಾಡಿದ ಉಪಾಯ ದಿಂದ ಇವನಿಗೆ ಕಷ್ಟ ಹೆಚ್ಚಾಯಿತು. ಹೀಗೆ ಸುಖವಾಗಿರತಕ್ಕ ಜನ -ಗಳು ಹೇಡಿಗಳಾಗುತ್ತಾರೆ, ಕಷ್ಟ ಪಡತಕ್ಕವರು ವೀರರಾಗಿ ಸಮಯ .ದಲ್ಲಿ ಗೆಲ್ಲುತ್ತಾರೆ. - ಈ ರೀತಿಯಲ್ಲಿ ಕಥೆ ಮುಗಿಯಿತು. ಆಗ ರಾಮಜೋಯಿಸನು-ಮದನ, ತಳ ಕುಪಳಕಾಗಿ ಡಂಭ ವಾಗಿರುವ ಉಡುಪನ್ನು ಹಾಕಿಕೊಂಡು ತಿರುಗುವ ಸಿಪಾಯಿಗಳ ಹಣೇಬರವನ್ನು ನೋಡಿದೆಯ ? ಈ ಮೇಲಿನ ಡಂಭದಿಂದ ಉಪ ಯೋಗವಿಲ್ಲ. ಮುಖ್ಯವಾಗಿ ಬೇಕಾದ್ದು , ಧೈಯ್ಯ, ಕಷ್ಟ ಬಂದರೆ ಸಹಿಸುವ ಶಕ್ತಿ, ಇವೆರಡೂ ಇಲ್ಲದಿದ್ದರೆ ವೀರಭಟರ ಬಾಳು ಬಾಳೇ ಅಲ್ಲ, ಅದು ಹಾಗಿರಲಿ, ಸಿಪಾಯಿಗಳಾಗಿ ಒಳ್ಳೆ ಉಡುಗೆಯನ್ನು ಹಾಕಿಕೊಂಡು .ತಿರುಗುವುದು ಉತ್ತಮವಾದ್ದೆಂದು ನೀನು ತಿಳಿದುಕೊಂಡಿದ್ದೀಯೆ.