ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಅವರು ಪಡುವ ಕಷ್ಟವನ್ನು ನೀನು ಅರಿಯೆ. ಈ ದಂಡಿನ ಜನರು ಹೊಟ್ಟೆಗೆ ಅನ್ನವಿಲ್ಲದೆ, ಕಣ್ಣಿಗೆ ನಿದ್ರೆ ಇಲ್ಲದೆ, ಮಳೆಯಲ್ಲಿ ನನೆದು, ಬಿಸಿಲಿನಲ್ಲಿ ಸೀದು, ಗಾಳಿಬಡಿತವನ್ನು ತಿಂದು, ಬೆಟ್ಟದಮೇಲಕ್ಕೆ ಹತ್ತು ತಾ, ಹಳ್ಳಕ್ಕೆ ಇಳಿಯುತ್ತಾ, ನದಿಗಳನ್ನೂ ಕೆರೆಗಳನ್ನೂ ಹಾದು ಹೋಗುತಾ ಸಿಕ್ಕಿದ ಕಡೆ ಕೆಟ್ಟ ನೀರನ್ನು ಕುಡಿದು ಕೆಟ್ಟ ಆಹಾರವನ್ನೂ ಸೊಪ್ಪುಸೆದೆಗಳನ್ನೂ ತಿನ್ನು ತಾ, ಅದರಿಂದ ಉಂಟಾಗುವ ರೋಗ ಗಳನ್ನು ಅನುಭವಿಸಿ ನರಳುತಾ, ಕೆಲವರು ಅದರಲ್ಲಿ ಸಾಯುತಾ, ಮತ್ತೆ ಕೆಲವರು ಇದ್ದರೂ ಸತ್ಯಹಾಗೆ ಶಕ್ತಿಹೀನರಾಗುತ್ತಾ, ಸಂಕಟ ಪಡುವರು, ಮತ್ತು ಯುದ್ಧಕ್ಕೆ ಹೋದರೆ ಕೈ ಹೋದರೂ ಹೋಯಿತು, ಕಾಲುಹೋದರೂ ಹೋಯಿತು, ಪ್ರಾಣ ಹೋದರೂ ಹೋಯಿತು. ಯುದ್ಧರಂಗದಲ್ಲಿ ಕುಟಕುಜೀವಹತ್ತಿ ನರಳುತಾ ಬಿದ್ದಿದ್ದಾಗ್ಯೂ ಹೆಣ ವೆಂದು ಆಚೆಗೆ ಎಳೆದುಹಾಕುವರು. ಒಂದು ಸಮಯದಲ್ಲಿ ಶತ್ರುಗಳ ಕತ್ತಿಗೆ ನನ್ನ ಕುತ್ತಿಗೆ ಗುರಿಯಾಗುವದು; ಮತ್ತೊಂದು ಕಾಲದಲ್ಲಿ ನಮ್ಮ ಕಡೆಯವರೇ ನಮ್ಮನ್ನು ಕಡಿದುಹಾಕುವರು, ನಾವು ಸತ್ತ ಮೇಲೆ ನಮ್ಮ ಹೆಂಡಿರು ಮಕ್ಕಳಿಗೆ ಯಾರೂ ಗತಿ ಇಲ್ಲದೆ, ಅವರು ತಿರುಪೆಗೆ ಅಧಿಕಾರಿಗಳಾಗುವರು, ಶತ್ರುಗಳು ನಮ್ಮನ್ನು ಕೈಸೆರೆಹಿಡಿದರೆ, ಅನೇಕ ವರುಷಗಳು ಸೆರೆಮನೆಯಲ್ಲಿ ಬಿದ್ದು ಸಾಯಬೇಕಾಗುವುದು. ದಂಡಿನ ಜನರಿಗೆ ಇರುವ ಸುಖ ಈಗ ತಿಳಿಯಿತೆ ? ಹೀಗೆಂದು ರಾಮಜೋಯಿಸ ಹೇಳಿದನು. - ಸುಮತಿ-ಅನ್ಯದೇಶದ ಶತ್ರುಗಳ ಬಾಧೆಯನ್ನು ತಪ್ಪಿಸುವುದ ಕಗಿ ಕಾದುಕೊಂಡಿರುವ ದಂಡಿನವರು ಎಷ್ಟು ಕಷ್ಟಕ್ಕೆ ಗುರಿಯಾ ಗಿದಾರೆ ! ಇಂಥಾ ಕಷ್ಟ ಜೀವಿಗಳನ್ನು ಸರರದವರು ಕಾಪಾಡಬೇಕು. ಜೋಯಿಸ-ನೀನು ಹೇಳುವುದು ಸರಿಯೆ. ಆದರೆ ಆ ಪ್ರಾಣಿ ಗಳಿಗೆ ಅಂಥಾ ಕಷ್ಟವನ್ನು ಯಾಕೆ ಕೊಡಬೇಕು, ಅವಿವೇಕದಿಂದ ದುಡುಕಿ, ಮನಸ್ಸು ಬಂದಹಾಗೆ ರೇಗಿಕೊಂಡು, ನಿಷ್ಕಾರಣವಾಗಿ ಯುದ್ಧವನ್ನು ಮಾಡಿ, ಸೋತರೆ ಈ ಸಿಪಾಯಿಗಳು ಕೆಟ್ಟವರು ಹೇಡಿ ಗಳು ಸೋತುಹೋದರೆಂತಲೂ ಗೆದ್ದರೆ ತಮ್ಮ ಚಮತ್ಕಾರದಿಂದ ಗೆದ್ದೆ