ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಸುಮತಿ ಮದನಕುಮಾರರ ಚರಿತ್ರೆ ೧೮೯ ವೆಂತಲೂ ; ಕೊಚ್ಚಿ ಕೊಂಡು, ಈ ಬಡಜೀವಿಗಳನ್ನು ಶತ್ರುಗಳ ಬಾಯಿಗೆ ಬಲಿ ಒಪ್ಪಿಸುತ್ತಾರಲ್ಲಾ ! ಅ೦ಥಾ ನೀಚರಿಗೆ ಏನ ಹೇಳೋಣ ! ಸುಮತಿ- ಯುದ್ಧ ಎನ್ನು ವುದೇ ಕೆಟ್ಟ ದು, ಮತ್ತೊಬ್ಬ ನಿರಪ ರಾಧಿಯಾದ ಪ್ರಾಣಿಯನ್ನು ಕೊಲ್ಲುವುದೇ ಅದರ ಮುಖ್ಯ ಉದ್ದೇಶ ವಾದುದರಿಂದ, ಯುದ್ದ ಎನ್ನುವುದರಲ್ಲಿ ಅನ್ಯಾಯವೇ ಹೊರತು ನ್ಯಾಯವಿಲ್ಲವೇ ಇಲ್ಲ. ಇಂಥಾ ದುಷ್ಕಾರದಲ್ಲಿ ಉದ್ಯುಕ್ತರಾಗಿರುವ ಸಿಪಾಯಿಗಳಿಗೆ ಮರಣಸಂಭವಿಸಿದರೆ, ಅದು ಅವರ ತಪ್ಪೇ ಅಲ್ಲದೆ ಬೇರೆ ಉಂಟೆ ? ಜೋಯಿಸ ಈ ಭಟರು ತಾವಾಗಿ ಕೇಡನ್ನು ತಂದುಕೊಂಡರೆ ತಪ್ಪು ಅವರದೇ ಹವುದು. ಆದರೆ ಯಾವ ಸಾರದವರಿಗೋಸ್ಕರ ಇವರು ತಮ್ಮ ತಲೆಯನ್ನು ಒಪ್ಪಿಸುತ್ತಾರೆಯೋ ಅ೦ಥಾವರು ಆ ಬಡ ಜನರ ಕ್ಷೇಮವನ್ನು ನೋಡಿಕೊಳ್ಳದೇ ಹೋದರೆ, ಸಿಪಾಯಿಗಳು ಪೇಚಾಡಬೇಕಾದ್ದು ಸರಿಯಲ್ಲವೇ ? ಸುಮತಿ-ಯಾರಿಗೋಸ್ಕರ ಯುದ್ದ ಜರುಗುವುದೋ ಅಂಥಾ ವರೇ ಹೋಗಿ ಶತ್ರುಗಳ ಸಂಗಡ ಜಗಳವಾಡತಕ್ಕದ್ದು ಯುಕ್ತವಾಗಿದೆ. ಜೋಯಿಸ.- ಪೂರ್ವದಲ್ಲಿ ಪಾಂಡವಾದಿಗಳೆಲ್ಲಾ ಹಾಗೆಯೇ ಮಾಡಿದರು, ಚಿಕ್ಕ ಹುಡುಗರು ಸಹಿತವಾಗಿ ಪರಾಕ್ರಮಿಗಳಾಗಿದ್ದರು. ಅಭಿಮನ್ಯುವಿನ ಕಥೆಯನ್ನು ಕೇಳಿಲ್ಲವೆ ? ಸುಮತಿ- ಜೋಯಿಸರೆ, ಆ ಕಥೆ ಬಹು ಚೆನ್ನಾಗಿದೆ. ಮದನ ಕೇಳಲಿ ಅದನ್ನು ಅಪ್ಪಣೆ ಕೊಡಿಸಬೇಕು. ೧೫ ನೆ ಅಧ್ಯಾಯ ಆಗ ಜೋಯಿಸನು ಅಭಿಮನ್ಯುವಿನ ಕಥೆಯನ್ನು ಹೇಳಿದ್ದು ಹೇಗೆಂದರೆ:- ದ್ವಾಪರಯುಗದಲ್ಲಿದ್ದ ಪಾಂಡುರಾಯನಿಗೆ ಪಾಂಡವರೆಂಬ ಐದು ಜನ ಗಂಡುಮಕ್ಕಳಿದ್ದರು, ಪಾಂಡುರಾಯನ ಅಣ್ಣನಾದ ಧೃತರಾಷ