ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯o ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ರಾಯನಿಗೆ ಕೌರವರೆ೦ಬ ನೂರೊಂದು ಜನ ಮಕ್ಕಳಿದ್ದರು. ಈ ಪಾಂಡವ ಕೌರವರಿಗೆ ರಾಜ್ಯದ ಹಂಚಿಕೆಗೋಸ್ಕರ ಜಗಳಹುಟ್ಟಿತು. ಪಾಂಡವರ ಕಡೆ ಅನೇಕ ಜನ ದೊರೆಗಳು ಸೇರಿದರು, ಕೌರವರ ಕಡೆಗೂ ಹೀಗೆಯೇ ಅನೇಕರು ಸೇರಿದರು, ಈ ಎರಡು ಸೇನೆಗೂ ದೊಡ್ಡ ಯುದ್ಧ ನಡೆಯಿತು, ಇದರಲ್ಲಿ ಐದು ಜನ ಪಾಂಡವರೂ ನೂರೊಂದುಜನ ಕೌರವರೂ ಸ್ವತಃ ನಿಂತು ಕದನವಾಡಿದರು. ಸ್ವಲ್ಪ ದಿವಸ ಯುದ್ಧ ನಡೆದ ಮೇಲೆ ಕೌರವರ ಕಡೆಯಲ್ಲಿ ದ್ರೋಣಾಚಾರನೆಂಬ ಬ್ರಾಹ್ಮಣ ನಿಗೆ ಸತ್ವ ಸೇನಾಪತಿಯ ಅಧಿಕಾರವಾಗಲು, ಆತನು ಸೇನೆಯಲ್ಲಿಯೇ ವ್ಯೂಹಗಳೆಂಬ ಕೋಟೆಯನ್ನು ಕಟ್ಟಿ ಯುದ್ದಕ್ಕೆ ಮೊದಲುಮಾಡಿದನು. ಒಂದು ಪದ್ಮವ್ಯೂಹವನ್ನು ಕಟ್ಟಿ ಬಹು ಘೋರವಾದ ಯುದ್ದವನ್ನು ಕೌರವರು ನಡೆಯಿಸುತಿರಲು, ಪಾಂಡವರ ಕಡೆಯಲ್ಲಿ ಮಹಾರಥಿಕರಾದ ಭೀಮ ಅರ್ಜುನ ಇವರಿಬ್ಬರೂ ಯುದ್ಧರಂಗದ ಒಂದು ಕಡೆಯಲ್ಲಿ ಕಾಳಗವಾಡುತಾ ಇದ್ದರು. ಪದ್ಮವ್ಯೂಹವನ್ನು ಭೇದಿಸಿಕೊಂಡು ಹೋಗಿ ಶತ್ರುಗಳನ್ನು ಗೆಲ್ಲತಕ್ಕವರು ಯಾರೂ ಪಾಂಡವರ ಕಡೆಯಲ್ಲಿ ಇರಲಿಲ್ಲ, ಇದನ್ನು ಕಂಡು ಅರ್ಜುನನ ಮಗನಾದ ಅಭಿಮನ್ಯು ಎಂಬ ಹದಿನೆಂಟು ವರುಷದ ಹುಡುಗನು ತನ್ನ ದೊಡ್ಡ ಪ್ರನಾದ ಧರ ರಾಯನಲ್ಲಿ ಆ ಪ್ಪಣೆಯನ್ನು ಪಡೆದು, ರಥವನ್ನೇರಿ ಶತ್ರುಸೇನೆಯನ್ನು ನಾಶಮಾಡುತಾ ವ್ಯೂಹದೊಳಕ್ಕೆ ನುಗ್ಗಿ ಮಧ್ಯೆ ನಿಂತು, ಮಹಾಪರಾಕ್ರ ಮದಿಂದ ಅತಿರಥ ಮಹಾರಥರುಗಳನ್ನೆಲ್ಲಾ ತರಿದು ಯಾರೂ ಇವನ ಎದುರಿಗೆ ನಿಲ್ಲುವುದಕ್ಕಿಲ್ಲದಂತೆ ಮಾಡಿದನು. ಪ್ರಳಯಕಾಲದ ರುದ್ರನೇ ಬಂದನೋ ಎನ್ನು ವಹಾಗೆ ಆಯಿತು, ಶತ್ರುಗಳೆಲ್ಲರೂ ಓಡಿಹೋಗುವು ದಕ್ಕೆ ಮೊದಲಾಯಿತು, ಹೇಡಿಗಳಾದ ಹಗೆಗಳು ಇವನ ಮುಂದೆ ನಿಂತು ಯುದ್ಧವನ್ನು ಮಾಡಲಾರದೆ, ದ್ರೋಹದಿಂದ ಆರು ಜನ ಸೇರಿ ಹಿಂದುಗಡೆ ಬಂದು ಈ ಮಹಾ ಪರಾಕ್ರಮಿಯನ್ನು ಕೊಂದರು. ದ್ರೋಹದಸಂಗಡ ಯುದ್ಧ ಮಾಡುವುದಕ್ಕೆ ಯಾರಿಂದಲೂ ಆಗುವುದಿಲ್ಲ; ಯಾಕೆಂದರೆ ಅದು ಎದುರಿಗೆ ಬಂದು ನಿಲ್ಲುವುದಿಲ್ಲ. ಹೀಗೆ ಹುಡುಗರು ಸಹಿತ ಇತರರ ಸಹಾಯವನ್ನು ಕೋರದೆ ತಾವೇ ಯುದ್ಧ ಮಾಡು ತಿದ್ದರು,