ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಸುಮತಿ ಮದನಕುಮಾರರ ಚರಿತ್ರೆ ೧೯೧ ಕಥೆಯು ಇಲ್ಲಿಗೆ ನಿಂತಿತು. ಆಗ ಮದನ-ಜೋಯಿಸರೆ ಅಭಿಮನ್ಯುವೇನೋ ಮಹಾ ಪರಾಕ್ರಮ ಶಾಲಿಯೇ ಹವುದು, ಅನ್ಯಾಯವಾಗಿ ಅವನನ್ನು ಕೊಂದುಹಾಕಿದರು. ಅದು ಹಾಗಿರಲಿ, ಯುದ್ದದಲ್ಲಿ ಕೊನೆಗೆ ಯಾರಿಗೆ ಜಯವಾಯಿತು ? ಜೋಯಿಸ-ನೀನು ಓದಬಲ್ಲೆ ಯಷ್ಟೆ, ಅದನ್ನು ಪುಸ್ತಕದಲ್ಲಿ ಓದಿಕೊಂಡು ನೀನೇ ತಿಳಿದುಕೊ. ಹೀಗೆಂದು ಜೋಯಿಸ ಹೇಳಿದನು. ಆಗ ಸಾಯಂಕಾಲ ವಾಯಿತು, ಮದನನು ಪ್ರತಿನಿತ್ಯವೂ ಆಕಾಶವನ್ನು ನೋಡಿ ಅಲ್ಲಿರುವ ನಕ್ಷತ್ರಗಳ ಸ್ಥಾನಗಳನ್ನು ತನ್ನ ಬಳಿಯಲ್ಲಿರುವ ಕಾಗದದ ಗೋಳದ ಮೇಲೆ ಗುರುತುಮಾಡಿಕೊಳ್ಳುತ್ತಲೇ ಇದ್ದನು. ಕೃತಿಕ, ಮೃಗಶಿರ, ಅಶ್ವಿನಿ, ಇವೇ ಮೊದಲಾದ ರಾಶಿಗಳನ್ನು ಗುರುತುಮಾಡಿಕೊಂಡಿದ್ದನು. ಆ ದಿನ ಗುರುವನ್ನು ನೋಡಿ ಮದನ-ನಿತ್ಯವೂ ಈ ನಕ್ಷತ್ರಗಳೆಲ್ಲಾ ಎಷ್ಟು ಚೆನ್ನಾಗಿ ಭೂಮಿಯ ಸುತ್ತಲೂ ಸುತ್ತುವವು ? ಜೋಯಿಸಅವುಗಳು ಸುತ್ತುವವು ಎಂದು ನೀನು ಹೇಗೆ ಬಲ್ಲೆ? ಮದನ-ಅವುಗಳು ಚಲಿಸತಕ್ಕದ್ದು ರಾತ್ರಿ ಹೊತ್ತು ನಮ್ಮ ಕಣ್ಣಿಗೆ ಕಾಣುವುದು. ಜೋಯಿಸ ಚಲಿಸತಕ್ಕದ್ದು ನಕ್ಷತ್ರಗಳು, ಭೂಮಿಯಲ್ಲ ಎಂದು ನೀನು ಹೇಗೆ ಬಗ್ಗೆ ? ಮದನ-ಭೂಮಿ ಇದ್ದ ಕಡೆಯಲ್ಲಿಯೇ ಇರುವುದು. ನಕ್ಷತ್ರಗಳು ಚಲಿಸತಕ್ಕದ್ದು ನಮ್ಮ ಕಣ್ಣಿಗೆ ಕಾಣುವುದು. ಜೋಯಿಸ-ದೋಣಿಯ ಮೇಲೆ ಯಾವಾಗಲೂ ನೀನು ಕೂತು ಕೊಂಡು ಹೋಗಿದ್ದೀಯ ? ಆಗ ಏನು ಕಾಣಿಸಿತು ? ಮದನ-ನಮ್ಮ ಅಪ್ಪಾಜಿಯವರ ಸೀಮೆ ಪಶ್ಚಿಮ ಸಮುದ್ರದ ವರೆಗೂ ಇದೆ. ದೋಣಿಯಲ್ಲಿ ನಾನು ಕೂತು ಸಮುದ್ರದ ಮೇಲೆ ಸ್ವಲ್ಪ ದೂರ ಹೋಗಿದೇನೆ. ಆಗ ದೋಣಿಯು ಇದ್ದ ಸ್ಥಳದಲ್ಲಿಯೇ ಇದ್ದ ಹಾಗೂ, ತಡಿಯಲ್ಲಿದ್ದ ಗಿಡ ಮರ ಬೆಟ್ಟ ಮೊದಲಾದ್ದೆಲ್ಲಾ ಓಡಿಹೋ