ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

୦୮ ಸುಮತಿ ಮದನಕುಮಾರರ ಚರಿತ್ರೆ [ ಅಧ್ಯಾಯ ಗುತಿದ್ದ ಹಾಗೂ ಕಾಣಿಸಿತು. ಜೋಯಿಸ--ಅದೇ ರೀತಿಯಲ್ಲಿ ಓಡಿಹೋಗುತಿರುವ ಭೂಮಿ ಇದ್ದ ಕಡೆಯಲ್ಲಿಯೇ ಇದ್ದ ಹಾಗೂ ಚಲಿಸದೇ ಇರುವ ನಕ್ಷತ್ರಗಳು ಓಡಿಹೋಗುತಿರುವ ಹಾಗೂ ಯಾಕೆ ಕಾಣಿಸಬಾರದು ? ಮದನ-ಚಿಕ್ಕ ಚಿಕ್ಕದಾಗಿರುವ ಸೂರ್ಯ ಚಂದ್ರ ನಕ್ಷತ್ರಗಳು ಓಡಿಹೋದರೂ ಹೋಗಬಹುದು, ಇಷ್ಟು ಗಾತ್ರ ಇರುವ ಭೂಮಿ ಚಲಿಸೀತೆ ? ಜೋಯಿಸ-ಚಂದ್ರ ಸೂರ್ಯ ನಕ್ಷತ್ರಗಳು ಚಿಕ್ಕ ಚಿಕ್ಕದು ಎಂದು ನಿನಗೆ ಹೇಗೆ ತಿಳಿಯಿತು ? ಮದನ-ನಮ್ಮ ಕಣ್ಣಿಗೆ ಚಿಕ್ಕದಾಗಿ ಕಾಣಿಸುವುದಿಲ್ಲವೆ ? ಇನ್ನೆ ನಾಗಬೇಕು ? ಈ ಮಾತನ್ನು ಕೇಳಿ ಜೋಯಿಸನು ಆಗ ಸುಮ್ಮನೇ ಆದನು. ಮಾರನೇ ದಿನ ಜೋಯಿಸನು ಮದನನನ್ನು ಕರೆದುಕೊಂಡು ಮೈದಾನ ವಾದ ಪ್ರದೇಶಕ್ಕೆ ಹೋದನು: ಆಗ ಪಟಾ ಆಡಿಸುವ ಕಾಲವಾಗಿತ್ತು. ದೂರದಲ್ಲಿ ಒಬ್ಬ ಸಟಾ ಆಡಿಸುತಿದ್ದನು. ಅದನ್ನು ಕಂಡು, ಜೋಯಿಸ-ಮದನ, ಅಗೋ ಅಲ್ಲಿ ಆಕಾಶದಲ್ಲಿ ಕಾಣಿಸು ವುದೇನು ? ಮದನ-ಏನೋ ಸಣ್ಣ ಹಕ್ಕಿಯ ಹಾಗೆ ಕಾಣುತಿದೆ. ಆಗ ಗಾಳಿ ಕಡಮೆಯಾಯಿತು. ಪಠದ ದಾರವನ್ನು ಎಳೆಯುತ್ತ ಬಂದರು. ಜೋಯಿಸ-ಈಗ ಏನು ಕಾಣುತಿದೆ ನೋಡು. ಮದನ-- ಏನೋ ಗುಂಡಗೆ ಕಾಣುತಿದೆ, ( ಪಟವನ್ನು ಇನ್ನೂ ಹತ್ತಿರಕ್ಕೆ ಎಳೆದರು.) ಮದನ- ಜೋಯಿಸರೆ, ಅದು ಹತ್ತರ ಹತ್ತರಕ್ಕೆ ಬರುತಿದೆ. ಈಗ ನೋಡಿದರೆ ಅದು ಎಂಟುನೂಲೇ ಚಟ್ಟಿ ಯಂತೆ ಕಾಣುತ್ತೆ. ಆಗ ಗಾಳಿ ಜೋರಾಯಿತು. ಪಠ ಆಡಿಸುತಿದ್ದ ವರು ದಾರ ವನ್ನು ಹೆಚ್ಚಾಗಿ ಬಿಡುವುದಕ್ಕೆ ಮೊದಲು ಮಾಡಿದರು. ಪಟವು ಮೇಲು