ಪುಟ:ಸಮತಿ ಮದನಕುಮಾರರ ಚರಿತ್ರ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫] ಸುಮತಿ ಮದನಕುಮಾರರ ಚರಿತ್ರೆ ೧೯೩ ಮೇಲಕ್ಕೆ ಹೋಗಿ ದೂರವಾಗಿ ಹಾರಿತು. ಜೋಯಿಸ-ಈಗ ಹೇಗೆ ಕಾಣುತಿದೆ ? ಮದನ ಆಕಾಶವನ್ನು ನೋಡುತಾ-ಪುನಃ ಚಿಕ್ಕದಾಗಿ ಕಾಣಿಸು ವುದು.. ಅಗೋ ! ಇನ್ನೂ ಸಣ್ಣದಾಯಿತು. ಓಹೋ ! ಒಂದು ಹಕ್ಕಿಯ ಹಾಗೆ ಕಾಣುತಿದೆ. ಎಷ್ಟು ದೂರವಾಗಿ ಹೋದರೆ ಅಷ್ಟು ಸಣ್ಣದಾಗಿ ಕಾಣುವುದು. ಜೋಯಿಸ--ಈಗ ನಮಗೆ ಕಾಣುವ ಸೂರ್ಯನು ದೂರವಾಗಿ. ಇನ್ನೂ ಹಿಂದು ಹಿಂದಕ್ಕೆ ಹೋದರೆ ಹೇಗೆ ಕಾಣಿಸುವುದು ? ಮದನ-(ಸ್ವಲ್ಪ ಯೋಚಿಸಿ) ಪಟವು ಹಿಂದು ಹಿಂದಕ್ಕೆ ಹೋದ ಹಾಗೆಲ್ಲಾ ಸಣ್ಣ ಸಣ್ಣ ವಾಗಿ ಕಂಡರೆ, ಸೂರ್ಯನೂ ಹಾಗೆಯೇ ಕಾಣ ಬೇಕು. 'ಜೋಯಿಸ-ಸೂರ್ಯನು ಹಾಗೆ ಬಹು ದೂರಕ್ಕೆ ಹೋದರೆ ಅದು ಸಣ್ಣಗೆ ನಕ್ಷತ್ರದ ಹಾಗೆ ಕಾಣಿಸುವುದು, ಇದು ಹಾಗಿರಲಿ, ನಮಗೆ ಆಕಾಶದಲ್ಲಿ ಕಾಣುವ ನಕ್ಷತ್ರಗಳು ನಮ್ಮ ಸವಿಾಪ ಸವಿಾಪಕ್ಕೆ ಬಂದರೆ ಹೇಗೆ ಕಾಣುವುದು ? ಸಣ್ಣಗೆ ಕಾಣಿಸೀತೆ ? ಮದನ-ಪಟವು ನಮ್ಮ ಹತ್ತಿರ ಹತ್ತಿರಕ್ಕೆ ಬಂದ ಹಾಗೆಲಾ ದೊಡ್ಡದಾಗಿ ಕಾಣಿಸಿದರೆ, ನಕ್ಷತ್ರವೂ ಹಾಗೆಯೇ ಕಾಣಿಸಬೇಕು. ಜೋಯಿಸ-ಆ ನಕ್ಷತ್ರವು ಸವಿಾಪ ಸಮಿಾಪಕ್ಕೆ ಬಂದರೆ ಸೂರ್ಯನ ಅಗಲ ಕಾಣಿಸಬಹುದೆ ? ಮದನ-ಹವುದು. ಜೋಯಿಸ-ಸೂರ್ಯನೇ ನಮಗೆ ಸಮೀಪವಾಗಿ ಬಂದರೆ ಹೇಗೆ ತೋರುವುದು ? ಅದರ ಗಾತ್ರ ಇದ್ದಷ್ಟೇ ಇರುವುದೊ ? ಮದನ-ಹತ್ತರಕ್ಕೆ ಬಂದ ಹಾಗೆಲ್ಲಾ ದೊಡ್ಡದಾಗಿ ಕಾಣಿಸ ಬೇಕು. ಜೋಯಿಸ-ಹಾಗಾದರೆ, ನಾವು ಇರುವ ಭೂಮಿಯು ಸೂರ್ಯ ನಿಗಿಂತಲೂ ನಕ್ಷತ್ರಕ್ಕಿಂತಲೂ ದೊಡ್ಡದಾಗಿ ಕಾಣಿಸುವುದು ನಿಶ್ಚಯ ವಲ್ಲ, ಅವುಗಳು ಇಲ್ಲಿಂದ ಬಹುದೂರದಲ್ಲಿವೆ. ಇಲ್ಲಿಂದ ಯಾರಾದರೂ